ನವದೆಹಲಿ:  ಭಾರತದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಆಯ್ದ ಮಾದರಿಗಳಿಗೆ ಬೆಲೆ ಕಡಿತವನ್ನು ಘೋಷಿಸಿದ್ದು, ಇದರಿಂದಾಗಿ ಈಗ ಕಾರುಗಳನ್ನು ಖರೀದಿಸುವವರಿಗೆ ಹಬ್ಬದ ಮುಂಚಿತವಾಗಿ ಉಡುಗೊರೆ ಸಿಕ್ಕಂತಾಗಿದೆ.


COMMERCIAL BREAK
SCROLL TO CONTINUE READING

ಮಾರುತಿ ಕಾರ್ ಈಗ ಆಯ್ದ ಕಾರುಗಳ ಮೇಲೆ ಸುಮಾರು ₹ 5,000 (ಎಕ್ಸ್‌ಶೋರೂಂ ಬೆಲೆಯಲ್ಲಿ) ಕಡಿಮೆ ಮಾಡಲು ನಿರ್ಧರಿಸಿದೆ. ಈ ಆಯ್ದ ಕಾರಿನ ಮಾದರಿಯಲ್ಲಿ ಆಲ್ಟೊ 800, ಆಲ್ಟೊ ಕೆ10, ಸ್ವಿಫ್ಟ್ ಡಿಸೇಲ್, ಸೆಲೆರಿನೋ ಬಲೇನೋ, ಇಗ್ನಿಸ್, ಡಿಸೈರ್ ಡಿಸೇಲ್, ಟೂರ್ ಎಸ್ ಡಿಸೇಲ್, ವಿತರಾ ಬ್ರೆಜಾ ಮತ್ತು ಎಸ್ ಕ್ರಾಸ್ ಸೇರಿವೆ. ಇಂದಿನಿಂದ ನೂತನ ಬೆಲೆಗಳು ದೇಶಾದ್ಯಂತ ಅನ್ವಯವಾಗುತ್ತವೆ ಎಂದು ಕಂಪನಿ ತಿಳಿಸಿದೆ. 


ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಾರ್ಪೋರೆಟ್ ತೆರಿಗೆಯನ್ನು ಕಡಿತಗೊಳಿಸಿದ್ದರಿಂದಾಗಿ ಈಗ ಕಾರಿನ ಬೆಲೆಯಲ್ಲಿ ಕಡಿತಗೊಳಿಸಲಾಗಿದೆ. ಈಗ ಹಬ್ಬದ ಮುಂಚಿತವಾಗಿ ಗ್ರಾಹಕರಿಗೆ ಬಂಪರ್ ಉಡುಗೊರೆ ಸಿಕ್ಕಿರುವುದು ಸಂತಸ ತಂದಿದೆ.