ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಅದೇ ಮಾನ್ಸೂನ್ ಸರ್ವೀಸ್ ಕ್ಯಾಂಪ್! ಮಾರುತಿಯ ಎಲ್ಲಾ ಗ್ರಾಹಕರಿಗೆ ಈ ಸೇವೆ ಮುಕ್ತವಾಗಿದ್ದು, ದೇಶದ ಯಾವುದೇ ಅಧಿಕೃತ ಸೇವಾ ಕೇಂದ್ರದಲ್ಲಿ ಗ್ರಾಹಕರು ತಮ್ಮ ಕಾರುಗಳ ಸರ್ವೀಸ್ ಅನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು. ಈ ಕೊಡುಗೆ ಜೂನ್ 20 ರಿಂದ ಜುಲೈ 20ರವರೆಗೆ ಮಾತ್ರ ಲಭ್ಯವಿದ್ದು, ಉಚಿತವಾಗಿ ವಾಹನಗಳ ತಪಾಸಣೆ ಮಾಡಲಾಗುವುದು.


COMMERCIAL BREAK
SCROLL TO CONTINUE READING

ಈ ಸೌಲಭ್ಯ ಎಲ್ಲಿ ಸಿಗುತ್ತದೆ?
ಮಾರುತಿ ಸುಜುಕಿ ದೇಶಾದ್ಯಂತ ತನ್ನ ಸೇವಾ ಕೇಂದ್ರಗಳನ್ನು ಹೊಂದಿದ್ದು, ಇದರಲ್ಲಿ ನೆಕ್ಸಾ ಮತ್ತು ಅರೆನಾ ಸೇರಿವೆ. ಕಂಪನಿಯ ಪ್ರಕಾರ, ಮಳೆಗಾಲದಲ್ಲಿ ಕಾರಿನ ಆರೋಗ್ಯ ಸ್ಥಿತಿಯನ್ನು ಕಾಪಾಡಿಕೊಳ್ಳಲು ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷದಂತೆಯೇ ಈ ವರ್ಷವೂ ಎಲ್ಲಾ ಸೇವಾ ಕೇಂದ್ರಗಳಲ್ಲಿ ಈ ಸೌಲಭ್ಯ ದೊರೆಯಲಿದೆ. 


ಯಾವ ಸೇವೆಗಳು ಉಚಿತ?
ಈ ಮಾರುತಿ ಆಫರ್'ನಲ್ಲಿ, ಗ್ರಾಹಕರಿಗೆ ಕಾರಿನ ಎಲ್ಲಾ ಬಿಡಿ ಭಾಗಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಅಲ್ಲದೆ,  ಬ್ರೇಕ್, ವಿಂಡ್ ಸ್ಕ್ರೀನ್, ವೈಪರ್ ಬ್ಲೇಡ್, ಬ್ಯಾಟರಿ, ಟೈರ್, ಎಲೆಕ್ಟ್ರಿಕ್ ಸಿಸ್ಟಮ್ಗೆ ಸಂಪರ್ಕ ಹೊಂದಿರುವ ಘಟಕಗಳ ಸರ್ವೀಸ್ ಸಂಪೂರ್ಣ ಉಚಿತವಾಗಿರುತ್ತದೆ. ಇದಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಗ್ರಾಹಕರಿಗೆ ವಿಧಿಸಲಾಗುವುದಿಲ್ಲ. ಆದರೆ, ಕಾರಿನ ಯಾವುದೇ ಭಾಗವನ್ನು ಬದಲಾಯಿಸಿದರೆ, ಅಥವಾ ರಿಪೇರಿ ಮಾಡಿದರೆ ಅದಕ್ಕೆ ರಿಯಾಯಿತಿ ದರದಲ್ಲಿ ಶುಲ್ಕ ವಿಧಿಸಲಾಗುತ್ತದೆ.