ವಾಷಿಂಗ್ಟನ್:  ಸೂಪರ್ 30 ಸಂಸ್ಥಾಪಕ ಮತ್ತು ಖ್ಯಾತ ಗಣಿತಜ್ಞ ಆನಂದ್ ಕುಮಾರ್ ಅವರಿಗೆ ಅಮೆರಿಕದಲ್ಲಿ ಪ್ರತಿಷ್ಠಿತ ಬೋಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.ದೇಶದ ನಿರ್ಗತಿಕ ವಿದ್ಯಾರ್ಥಿಗಳಿಗೆ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.


COMMERCIAL BREAK
SCROLL TO CONTINUE READING

ಎಜುಕೇಶನ್ ಎಕ್ಸಲೆನ್ಸ್ ಪ್ರಶಸ್ತಿ 2019ನ್ನು ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿ ಸಂಘಟನೆಯ 25 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ 46 ವರ್ಷದ ಆನಂದ್ ಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಆನಂದ್ ಕುಮಾರ್, ಯುಎಸ್ಎ ಮತ್ತು ವಿಶ್ವದಾದ್ಯಂತ ವಾಸಿಸುತ್ತಿರುವ ಭಾರತೀಯ ಸಮುದಾಯ ಶಿಕ್ಷಣವನ್ನು ವಿಶ್ವದ ಎಲ್ಲಾ ಸಮಸ್ಯೆಗಳ ವಿರುದ್ಧ ಹೋರಾಡುವ ಪ್ರಬಲ ಅಸ್ತ್ರವಾಗಿ ಪರಿವರ್ತಿಸಲು ಸಹಾಯ ಮಾಡುವಂತೆ ಮನವಿ ಮಾಡಿಕೊಂಡರು. ಗುಣಮಟ್ಟದ ಶಿಕ್ಷಣವನ್ನು ಜನಸಾಮಾನ್ಯರಿಗೆ ಪ್ರವೇಶಿಸುವಂತೆ ಮಾಡುವ ಮೂಲಕ ಬಡತನ, ನಿರುದ್ಯೋಗ, ಜನಸಂಖ್ಯೆ ಸ್ಫೋಟ, ಪರಿಸರ ನಾಶ ಮತ್ತು ಇನ್ನೂ ಹೆಚ್ಚಿನ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಹಾಯ ಮಾಡುತ್ತದೆ ಎಂದರು.


ಯುಎಸ್ಎ ಸೇರಿದಂತೆ ಜಗತ್ತಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಭಾರತೀಯರು ಅದ್ಭುತ ಕಾರ್ಯ ಮಾಡುತ್ತಿದ್ದಾರೆ ಮತ್ತು ಅವರ ಸಮಾಜಕ್ಕೆ ಏನನ್ನಾದರೂ ಮರಳಿ ಕೊಡಬೇಕು. ಶಿಕ್ಷಣಕ್ಕಿಂತ ಅಮೂಲ್ಯವಾದ ಯಾವುದೇ ಉಡುಗೊರೆ ಇರಲು ಸಾಧ್ಯವಿಲ್ಲ' ಎಂದು ಆನಂದ್ ಕುಮಾರ್ ಹೇಳಿದರು. 


ಆನಂದ್ ಕುಮಾರ್ ಅವರು ಕಳೆದ 18 ವರ್ಷಗಳಿಂದ ಭಾರತದ ಐಐಟಿ-ಜೆಇಇಗಾಗಿ ಒಂದು ವರ್ಷದ ಅವಧಿಯ ವಸತಿ ತರಬೇತಿಯ ಮೂಲಕ 30 ವಿದ್ಯಾರ್ಥಿಗಳಿಗೆ ಉಚಿತ ವೆಚ್ಚದ ಮಾರ್ಗದರ್ಶನ ಮಾಡಲು ಸೂಪರ್ 30 ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಈ ಕಾರ್ಯಕ್ರಮದಿಂದಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಕೂಡ ಸಹಾಯವಾಗಿದೆ.