Engineering ಓದಲು 12ನೇ ತರಗತಿಯಲ್ಲಿ Maths, Physics ಆಯ್ಕೆ ಅನಿವಾರ್ಯವಲ್ಲ
ಹೊಸ ನಿಯಮದ ಪ್ರಕಾರ, ಬಿ.ಟೆಕ್ (BTech)ಪ್ರವೇಶಕ್ಕಾಗಿ, ವಿದ್ಯಾರ್ಥಿಗಳು 12 ನೇ ತರಗತಿಯಲ್ಲಿ ಕನಿಷ್ಠ 45 ಶೇಕಡಾ ಅಂಕಗಳನ್ನು ಪಡೆಯಬೇಕಾಗುತ್ತದೆ. ಇದರೊಂದಿಗೆ, 14 ವಿಷಯಗಳ ಪಟ್ಟಿಯಲ್ಲಿ ಯಾವುದೇ 3 ವಿಷಯಗಳಲ್ಲಿ ಉತ್ತೀರ್ಣರಾಗುವುದು ಅನಿವಾರ್ಯವಾಗಿರುತ್ತದೆ.
ನವದೆಹಲಿ : ಆಲ್ ಇಂಡಿಯಾ ಕೌನ್ಸೆಲಿಂಗ್ ಫಾರ್ ಟೆಕ್ನಿಕಲ್ ಎಜ್ಯುಕೇಶನ್ ಎಂಜಿನಿಯರಿಂಗ್ (AICTE) ವಿದ್ಯಾರ್ಥಿಗಳಿಗೆ ಮುಖ್ಯವಾದ ವಿಷಯವೊಂದನ್ನು ಪ್ರಕಟಿಸಿದೆ. ಇದರ ಪ್ರಕಾರ, ಇನ್ನು ವಿದ್ಯಾರ್ಥಿಗಳು 12 ನೇ ತರಗತಿಯಲ್ಲಿ ಗಣಿತ (Maths) ಮತ್ತು ಭೌತಶಾಸ್ತ್ರವನ್ನು (Physics) ಅಧ್ಯಯನ ಮಾಡದೆಯೇ ಬಿ.ಟೆಕ್‌ನಲ್ಲಿ ಪ್ರವೇಶ ಪಡೆಯುವುದು ಸಾಧ್ಯವಾಗುತ್ತದೆ. ಈ ವ್ಯವಸ್ಥೆಯು ಹೊಸ ಶೈಕ್ಷಣಿಕ ವರ್ಷದಿಂದ (2021-22) ಪ್ರಾರಂಭವಾಗಲಿದೆ.
ಈ ವರ್ಷದಿಂದ ಈ ನಿಯಮಗಳು ಅನ್ವಯ :
ಹೊಸ ನಿಯಮದ ಪ್ರಕಾರ, ಬಿ.ಟೆಕ್ (BTech)ಪ್ರವೇಶಕ್ಕಾಗಿ, ವಿದ್ಯಾರ್ಥಿಗಳು 12 ನೇ ತರಗತಿಯಲ್ಲಿ ಕನಿಷ್ಠ 45 ಶೇಕಡಾ ಅಂಕಗಳನ್ನು ಪಡೆಯಬೇಕಾಗುತ್ತದೆ. ಇದರೊಂದಿಗೆ, 14 ವಿಷಯಗಳ ಪಟ್ಟಿಯಲ್ಲಿ ಯಾವುದೇ 3 ವಿಷಯಗಳಲ್ಲಿ ಉತ್ತೀರ್ಣರಾಗುವುದು ಅನಿವಾರ್ಯವಾಗಿರುತ್ತದೆ. ಈ 14 ವಿಷಯಗಳಲ್ಲಿ ಗಣಿತ (maths), ಭೌತಶಾಸ್ತ್ರ (Physics), ರಸಾಯನಶಾಸ್ತ್ರ, ಕಂಪ್ಯೂಟರ್ ವಿಜ್ಞಾನ (Computer Science), ಎಲೆಕ್ಟ್ರಾನಿಕ್ಸ್, ಐಟಿ, ಜೀವಶಾಸ್ತ್ರ, ಇನ್ ಫಾರ್ಮೆಟಿಕ್ ಪ್ರಾಕ್ಟಿಸ್, ಬಯೋಟೆಕ್ನಾಲಜಿ, ಟೆಕ್ನಿಕಲ್ ಬ್ಯುಸಿನೆಸ್ ಸಬ್ ಜೆಕ್ಟ್, , ಎಂಜಿನಿಯರಿಂಗ್ ಗ್ರಾಫಿಕ್ಸ್, ಬ್ಯುಸ್ ನೆಸ್ ಸ್ಟಡೀಸ್, ಎಂತ್ರಪ್ರೆನ್ಯೂರ್ ಶಿಪ್ ಸೇರಿವೆ. ಈ ಯಾವುದೇ ವಿಷಯಗಳಲ್ಲಿ, ಶೇಕಡಾ 45 ರಷ್ಟು ಅಂಕಗಳನ್ನು ಪಡೆಯಬೇಕಾಗುತ್ತದೆ. ಇನ್ನು ರಿಸರ್ವ್ ಕೆಟಗರಿ ವಿದ್ಯಾರ್ಥಿಗಳು (Students) ಕನಿಷ್ಠ 40 ಅಂಕಗಳನ್ನು ಪಡೆಯಬೇಕಾಗುತ್ತದೆ.
ಇದನ್ನೂ ಓದಿ : Coronavirus: ದೇಶದ ಈ ಭಾಗದಲ್ಲಿ ಮಾರ್ಚ್ 31ರವರೆಗೆ ಶಾಲಾ-ಕಾಲೇಜು ಬಂದ್, ನೈಟ್ ಕರ್ಫ್ಯೂ
ವಾಣಿಜ್ಯ ವಿದ್ಯಾರ್ಥಿಗಳು ಸಹ ಪ್ರವೇಶ ಪಡೆಯುವುದು ಸಾಧ್ಯ :
ವಿವಿಧ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಗಣಿತ, ಭೌತಶಾಸ್ತ್ರ, ಎಂಜಿನಿಯರಿಂಗ್ ಡ್ರಾಯಿಂಗ್‌ನಲ್ಲಿ ಬ್ರಿಡ್ಜ್ ಕೋರ್ಸ್ ನೀಡಬೇಕು ಎಂದು (AICTE ) ವಿಶ್ವವಿದ್ಯಾಲಯಗಳನ್ನು ಕೇಳಿದೆ. ಇದರಿಂದ ಬಿಇ, ಬಿಟೆಕ್ ಪ್ರೊಗ್ರಾಂ ಗೆ ಅಗತ್ಯವಿರುವ ವಿಷಯಗಳನ್ನು ಪಡೆಯುವುದು ಸಾಧ್ಯವಾಗುತ್ತದೆ.. ಇದಲ್ಲದೆ, ಎಂಜಿನಿಯರಿಂಗ್‌ನಲ್ಲಿ (engineering) 3 ವರ್ಷದ ಡಿಪ್ಲೊಮಾ ಮಾಡುವವರು ಸಹ ಬಿ.ಟೆಕ್‌ನಲ್ಲಿ ಲ್ಯಾಟರಲ್ ಎಂಟ್ರಿ ಪಡೆಯಲು ಸಾಧ್ಯವಾಗುತ್ತದೆ. ಒಂದು ವೇಳೆ ಲ್ಯಾಟರಲ್ ಎಂಟ್ರಿ ಕೊನೆಯಾದಲ್ಲಿ, ಮೊದಲ ವರ್ಷದಲ್ಲಿ ಖಾಲಿಯಿರುವ ಸೀಟುಗಳ ಆಧಾರದ ಮೇಲೆ ಎಡ್ಮಿಶನ್ (admission) ಮಾಡಬೇಕಾಗುತ್ತದೆ.
ಇದನ್ನೂ ಓದಿ : Indian Air Force Recruitment 2021: ವಾಯುಸೇನೆಯಲ್ಲಿ 10, 12 ನೇ ತರಗತಿ ಪಾಸ್ ಆದವರಿಗೆ Job ಅವಕಾಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.