ಬೆಂಗಳೂರು: ಆರ್ಥಿಕ ಅನಾಹುತವನ್ನು ತಪ್ಪಿಸಲು ಕೇಂದ್ರ ಸರ್ಕಾರ ವಿಪಕ್ಷಗಳಿಂದಲೂ ಸಲಹೆ ಪಡೆಯಲಿ ಎಂದು ರಾಜ್ಯ ಕಾಂಗ್ರೆಸ್ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ ಸಲಹೆ ನೀಡಿದೆ. 



COMMERCIAL BREAK
SCROLL TO CONTINUE READING

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ನರೇಂದ್ರ ಮೋದಿಯವರ  ಗಬ್ಬರ್ ಸಿಂಗ್ ಟ್ಯಾಕ್ಸ್, ನೋಟು ರದ್ಧತಿಯಂತಹ ಆರ್ಥಿಕ ನೀತಿಗಳ ಪರಿಣಾಮದಿಂದ ದೇಶದ ವಿತ್ತ ವ್ಯವಸ್ಥೆ ಪಾತಾಳದಲ್ಲಿ ನೆಲೆ ಕಂಡುಕೊಂಡಿದೆ. ನಿರಂತರವಾಗಿ ಆಗುತ್ತಿರುವ ಉದ್ಯಮ, ಉದ್ಯೋಗ ನಷ್ಟ, ಆರ್ಥಿಕ ಮುಗ್ಗಟ್ಟಿನ ಅತ್ಯಂತ ಅಪಾಯದ ದಿನಗಳ ಮುನ್ಸೂಚನೆ ನೀಡಿವೆ ಎಂದು ಬಣ್ಣಿಸಿದೆ.


ದೇಶದ ಅಭಿವೃದ್ಧಿ ಬಗೆಗೆ ಬಿಜೆಪಿ ಸರ್ಕಾರಕ್ಕೆ ಕನಿಷ್ಠ ಕಾಳಜಿಯೂ ಇಲ್ಲ ಎಂದು ಕಿಡಿ ಕಾರಿರುವ ಕಾಂಗ್ರೆಸ್, ಎನ್.ಡಿ.ಎ. ಮಿತ್ರ ಪಕ್ಷಗಳಿಗೆ ಆ ಜವಾಬ್ದಾರಿ ಇದ್ದಲ್ಲಿ, ಮುಂದಿನ‌ ಆರ್ಥಿಕ ಅನಾಹುತ ತಪ್ಪಿಸಲು, ಪರಿಹಾರ ಮಾರ್ಗೋಪಾಯ ಕಂಡುಕೊಳ್ಳಲು ಸರ್ವಪಕ್ಷ ಸಭೆ ಕರೆಯುವಂತೆ ಆಗ್ರಹಿಸಲಿ. ಆರ್ಥಿಕ ಅನಾಹುತ ತಪ್ಪಿಸಲು ಸರ್ಕಾರವು ವಿಪಕ್ಷಗಳಿಂದಲೂ ಸಲಹೆ ಪಡೆಯಲಿ ಎಂದು ಆಗ್ರಹಿಸಿದೆ.



ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟ ಕಾರು ಉತ್ಪಾದಕ ಕಂಪನಿ ಮಾರುತಿ, 2 ದಿನಗಳ ಉತ್ಪಾದನಾ ಸ್ಥಗಿತಕ್ಕೆ ನಿರ್ಧರಿಸಿದೆ. ಈಗಾಗಲೇ 33.99% ರಷ್ಟು ಇರುವ ಉತ್ಪಾದನಾ ಇಳಿಕೆ, ಸತತ 7ನೇ ತಿಂಗಳಿಗೂ ಮುಂದುವರೆದಿದೆ. ನರೆದ್ರ ಮೋದಿಯವರ ಅವೈಜ್ಞಾನಿಕ ಆರ್ಥಿಕ ನೀತಿಗಳಿಂದ ಸೃಷ್ಟಿಸಲ್ಪಟ್ಟ ವಿತ್ತ ಸಂಕಷ್ಟ, ದಿನ ದಿನಕ್ಕೂ ಜನರ ಕೊಳ್ಳುವ ಶಕ್ತಿ ಕುಗ್ಗಿಸಿದೆ ಎಂದು ಕಾಂಗ್ರೆಸ್ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದೆ.