ನವದೆಹಲಿ: Dengue Fever Latest Update - ಡೆಂಗ್ಯೂ ಜ್ವರದ  (Dengue Fever) ಚಿಕಿತ್ಸೆಯಲ್ಲಿ ವಿಜ್ಞಾನಿಗಳುಹೊಸ ಮೈಲಿಗಲ್ಲನ್ನು  ಸಾಧಿಸಿದ್ದಾರೆ. ಲಖನೌನಲ್ಲಿರುವ ಕೇಂದ್ರ ಔಷಧ ಸಂಶೋಧನಾ ಸಂಸ್ಥೆಯ (CDRI Lucknow) ವಿಜ್ಞಾನಿಗಳು ಡಂಗಿ ಜ್ವರಕ್ಕೆ ಔಷಧಿಯೊಂದನ್ನು ಕಂಡು ಹಿಡಿದಿದ್ದಾರೆ. ಶೀಘ್ರದಲ್ಲೇ ಈ ಔಷಧವನ್ನು ವೈದ್ಯಕೀಯ ಕಾಲೇಜುಗಳಲ್ಲಿ ಪರೀಕ್ಷೆ ನಡೆಸಲಾಗುವುದು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಡೆಂಗ್ಯೂ ಒಂದು ವೈರಲ್ ಜ್ವರ (Dengue Viral Fever). ಇದರಲ್ಲಿ ರೋಗಿಯು ಅಸಹನೀಯ ನೋವನ್ನು ಅನುಭವಿಸುತ್ತಾನೆ (Dengue Fever Symptoms) ಮತ್ತು ಒಂದು ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ  ಸಾವು ಕೂಡ ಸಂಭವಿಸುತ್ತದೆ. ಮೂಳೆಗಳಲ್ಲಿ ತೀವ್ರವಾದ ನೋವು ಇರುವುದರಿಂದ ಇದನ್ನು ಬ್ರೇಕ್-ಬೋನ್ ಜ್ವರ (Break Bone Fever) ಎಂದೂ ಕರೆಯುತ್ತಾರೆ. ಇದುವರೆಗೆ ಡೆಂಗ್ಯೂಗೆ (Dengue) ಯಾವುದೇ ಖಚಿತ ಚಿಕಿತ್ಸೆ (Dengue Fever Treatment) ಇಲ್ಲ. ಕಾಯಿಲೆಯ ರೋಗಲಕ್ಷಣಗಳ ಆಧಾರದ ಮೇಲೆ  ಇದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಇದೀಗ ವಿಜ್ಞಾನಿಗಳು ಅದರ ಚಿಕಿತ್ಸೆಗೆ ಔಷಧಿಯೊಂದನ್ನು (Medicine For Dengue Fever)  ಕಂಡುಹಿಡಿದಿದ್ದಾರೆ. ಬಂದೆ ಬಿಟ್ತು ನಿಮ್ಮ PF ಖಾತೆಗೆ ಬಡ್ಡಿ ಹಣ, ಈ ರೀತಿ ಪರಿಶೀಲಿಸಿ, e-statement ಡೌನ್ಲೋಡ್ ಮಾಡಿ


ಈ ಸ್ಥಳಗಳಲ್ಲಿ ಟ್ರಯಲ್ ನಡೆಯಲಿದೆ 
ದೇಶದ 20 ವೈದ್ಯಕೀಯ ಕಾಲೇಜುಗಳಲ್ಲಿ ಡೆಂಗ್ಯೂ ಔಷಧದ ಪ್ರಯೋಗಕ್ಕೆ ಸಿದ್ಧತೆಗಳನ್ನು ನಡೆಸಲಾಗಿದೆ. ಇವುಗಳಲ್ಲಿ ಕಾನ್ಪುರ, ಲಖನೌ, ಆಗ್ರಾ, ಮುಂಬೈ, ಥಾಣೆ, ಪುಣೆ, ಔರಂಗಾಬಾದ್, ಅಹಮದಾಬಾದ್, ಕೋಲ್ಕತಾ, ಬೆಂಗಳೂರು, ಮಂಗಳೂರು, ಬೆಳಗಾವಿ, ಚೆನ್ನೈ, ಚಂಡೀಗಡ, ಜೈಪುರ, ವಿಶಾಖಪಟ್ಟಣಂ, ಕಟಕ್, ಖುರ್ದಾ, ಜೈಪುರ ಮತ್ತು ನಾಥವಾರ ಶಾಮೀಲಾಗಿವೆ. 


ಇದನ್ನೂ ಓದಿ-T20 WC 2021 : ಈ 3 ಸ್ಪಿನ್ನರ್‌ಗಳಿಂದ ಎದುರಾಳಿ ತಂಡಗಳ ಎದೆಯಲ್ಲಿ ಶುರುವಾಗುತ್ತೆ ಭಯ!


ಟ್ರಯಲ್ ಗಾಗಿ ಈ ಷರತ್ತುಗಳು ಪಾಲಿಸಬೇಕಾಗಲಿದೆ
ಡೆಂಗ್ಯೂ ರೋಗಿಯ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ರೋಗಿಗೆ 48 ಗಂಟೆಗಳ ಮುಂಚಿತವಾಗಿ ಡೆಂಗ್ಯೂ ದೃಢಪಟ್ಟಿರಬೇಕು. ಪ್ರಯೋಗಕ್ಕಾಗಿ ರೋಗಿಯನ್ನು ಎಂಟು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಿಸಲಾಗುತ್ತದೆ ಮತ್ತು ಏಳು ದಿನಗಳವರೆಗೆ ಒಂದು ಡೋಸ್ ಔಷಧವನ್ನು ನೀಡಲಾಗುತ್ತದೆ. ಚಿಕಿತ್ಸೆಯ ನಂತರ 17 ದಿನಗಳವರೆಗೆ ರೋಗಿಯನ್ನು ಮೇಲ್ವಿಚಾರಣೆಯಲ್ಲಿ ಇರಿಸಲಾಗುತ್ತದೆ.


ಇದನ್ನೂ ಓದಿ-Astrology: ಬುಧವಾರದಂದು ನೀವು ಮಾಡುವ ಈ ಕೆಲಸದಿಂದ ಆರ್ಥಿಕ ನಷ್ಟ ಸಂಭವಿಸಬಹುದು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ