Astrology: ಬುಧವಾರದಂದು ನೀವು ಮಾಡುವ ಈ ಕೆಲಸದಿಂದ ಆರ್ಥಿಕ ನಷ್ಟ ಸಂಭವಿಸಬಹುದು!

                     

Astrology: ಬುಧವಾರ (Wednesday) ಸೃಷ್ಟಿಕರ್ತ ಗಣೇಶನಿಗೆ  (Ganesh) ಸಮರ್ಪಿಸಲಾಗಿದೆ. ಈ ದಿನ ಗಣೇಶನನ್ನು ಪೂಜಿಸುವಾಗ ಹಲವು ನಿಯಮಗಳನ್ನು ಪಾಲಿಸಬೇಕು. ಜ್ಯೋತಿಷ್ಯದಲ್ಲಿ, ಬುಧವಾರ ಮಾಡಬಾರದ ಕೆಲಸಗಳ ಬಗ್ಗೆ ಹೇಳಲಾಗಿದೆ ಏಕೆಂದರೆ ಈ ಕೆಲಸವನ್ನು ಮಾಡುವುದರಿಂದ ವ್ಯಕ್ತಿಯು ಹಣದ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಬುಧವಾರದಂದು ಯಾವುದೇ ರೀತಿಯ ಹೂಡಿಕೆಗೆ ಶುಭ ಎಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ ಬುಧವಾರ ಹೂಡಿಕೆ ಮಾಡದಿದ್ದರೆ ಒಳಿತು ಎಂದು ಹೇಳಲಾಗುತ್ತದೆ. ಏಕೆಂದರೆ ಈ ದಿನ ಮಾಡಿದ ಹೂಡಿಕೆಯು ನಷ್ಟವನ್ನು ಉಂಟುಮಾಡುತ್ತದೆ. ಅಥವಾ ಈ ದಿನ ಯಾರೊಂದಿಗೂ ಕ್ರೆಡಿಟ್ ವಹಿವಾಟುಗಳನ್ನು ಮಾಡಬಾರದು. ಬುಧವಾರ ನೀಡಿದ ಸಾಲ ಸುಲಭವಾಗಿ ಕೈಸೇರುವುದಿಲ್ಲ ಮತ್ತು ತೆಗೆದುಕೊಂಡ ಸಾಲವನ್ನು ಮರುಪಾವತಿಸುವಲ್ಲಿ ಹಲವು ತೊಂದರೆಗಳು ಎದುರಾಗುತ್ತವೆ.

2 /5

ಕಪ್ಪು ಬಟ್ಟೆಗಳನ್ನು ಧರಿಸಬೇಡಿ: ಬುಧವಾರ ಕಪ್ಪು ಬಟ್ಟೆಗಳನ್ನು ಧರಿಸಬಾರದು. ಇದು ತುಂಬಾ ಅಶುಭಕರ. ವಿಶೇಷವಾಗಿ ಮಹಿಳೆಯರು ಕಪ್ಪು ಬಟ್ಟೆಗಳನ್ನು ಧರಿಸಬಾರದು. 

3 /5

ಕೆಟ್ಟ ಪದಗಳನ್ನು ಬಳಸಬೇಡಿ: ಎಂದಿಗೂ ಕೂಡ ಬೇರೆಯವರೊಂದಿಗೆ ಮಾತನಾಡುವಾಗ ನಿಂದನಾತ್ಮಕ ಪದಗಳನ್ನು ಬಳಸಬಾರದು. ಆದರೆ ವಿಶೇಷವಾಗಿ ಬುಧವಾರ, ಇದನ್ನು ಮಾಡಬಾರದು. ಇದನ್ನೂ ಓದಿ- Karwa Chauth 2021: ಕರ್ವಾ ಚೌತ್‌ನಲ್ಲಿ ವಿಶೇಷ ಸಂಯೋಗ; ಈ ರೀತಿ ವ್ರತಾಚರಣೆಯಿಂದ ಇಷ್ಟಾರ್ಥ ಸಿದ್ಧಿ ಪ್ರಾಪ್ತಿ

4 /5

ಈ ದಿಕ್ಕಿಗೆ ಪ್ರಯಾಣಿಸಬೇಡಿ: ಬುಧವಾರ ಪಶ್ಚಿಮ ದಿಕ್ಕಿಗೆ ಪ್ರಯಾಣಿಸಬೇಡಿ. ಅಂತಹ ಪ್ರಯಾಣವು ಹಾನಿಯನ್ನು ಉಂಟುಮಾಡುತ್ತದೆ.  ಇದನ್ನೂ ಓದಿ- Lucky Zodiac Sign: ಈ ರಾಶಿಯ ಜನ ಹಣದ ವಿಷಯದಲ್ಲಿ ತುಂಬಾ ಅದೃಷ್ಟವಂತರು, ನೀವು ಸಹ ಭಾಗಿಯಾಗಿದ್ದೀರಾ!

5 /5

ತಾಯಿಯಂದಿರು ತಲೆಗೆ ಸ್ನಾನ ಮಾಡಬಾರದು: ಹೆಣ್ಣು ಮಕ್ಕಳನ್ನು ಹೊಂದಿರುವ ತಾಯಂದಿರು ಬುಧವಾರ ತಮ್ಮ ಕೂದಲನ್ನು ತೊಳೆಯಬಾರದು. ಇದು ಅವರ ಮಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. (ಎಲ್ಲಾ ಫೋಟೋಗಳು ಸಾಂದರ್ಭಿಕ ಚಿತ್ರಗಳಾಗಿವೆ)  (ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)