ಮೇಘಾಲಯ ವಿಧಾನಸಭೆ ಚುನಾವಣೆ ಮತ ಎಣಿಕೆ ಶನಿವಾರ ಬೆಳಿಗ್ಗೆ ಆರಂಭವಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ಹಿಂದಿಕ್ಕಿ ರಾಷ್ಟ್ರೀಯ ಪಕ್ಷಗಳ ಪಕ್ಷ (ಎನ್ಪಿಪಿ) ಮುನ್ನಡೆ ಸಾಧಿಸಿದೆ. ಇಂದು ಬೆಳಿಗ್ಗೆ 9 ಗಂಟೆವರೆಗೆ 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಳೆದ 10 ವರ್ಷಗಳ ಕಾಲ ರಾಜ್ಯವನ್ನು ಆಳಿದ ಕಾಂಗ್ರೆಸ್ ಏಳು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಬಿಜೆಪಿ ನಾಲ್ಕು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.


COMMERCIAL BREAK
SCROLL TO CONTINUE READING

10 ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷ ಪ್ರಚಾರ ನಡೆಸಿತ್ತಾದರೂ, ರಾಷ್ಟ್ರೀಯ ಜನತಾ ಪಕ್ಷ (ಎನ್ಪಿಪಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ)ಗಳಿಂದ ಮೇಘಾಲಯದಲ್ಲಿ ಕಠಿಣ ಸವಾಲನ್ನು ಎದುರಿಸುತ್ತಿದೆ. 


60 ಕ್ಷೇತ್ರಗಳ ಮೇಘಾಲಯ ವಿಧಾನಸಭಾ ಚುನಾವಣೆ ಫೆಬ್ರವರಿ 27 ರಂದು ನಡೆಯಿತು. ಮೇಘಾಲಯದಲ್ಲಿ 60 ವಿಧಾನಸಭಾ ಸ್ಥಾನಗಳಲ್ಲಿ 55 ಸ್ಥಾನಗಳನ್ನು ಪರಿಶಿಷ್ಟ ಪಂಗಡಗಳಿಗೆ ಮೀಸಲಿಡಲಾಗಿದೆ. 


ಮೂರು ಚುನಾವಣೋತ್ತರ ಸಮೀಕ್ಷೆಗಳಲ್ಲಿ, 60 ಸದಸ್ಯರ ಮೇಘಾಲಯ ವಿಧನಸಬೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟವಾದ ಬಹುಮತವನ್ನು ಯಾರೂ ಊಹಿಸಿಲ್ಲ. ಸರ್ಕಾರ ರಚನೆಗೆ ಒಂದು ರಾಜಕೀಯ ಪಕ್ಷ ಅಥವಾ ಮೈತ್ರಿಯಿಂದ ಕನಿಷ್ಠ 30 ಸ್ಥಾನಗಳ ಅಗತ್ಯವಿದೆ. 2013 ರ ವಿಧಾನಸಭಾ ಚುನಾವಣೆಯಲ್ಲಿ  ಕಾಂಗ್ರೆಸ್ 29 ಸ್ಥಾನಗಳನ್ನು ಗಳಿಸಿತ್ತು.


ಜನಕಿಬಾತ್-ನ್ಯೂಸ್ ಎಕ್ಸ್ ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷ 13-17 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದ್ದು, ಮತ ಹಂಚಿಕೆ ಶೇಕಡಾ 21 ರಷ್ಟಿದೆ. ಸಿವೋಟರ್ ಚುನಾವಣೋತ್ತರ ಸಮೀಕ್ಷೆಯು ಕಾಂಗ್ರೆಸ್ ಪಕ್ಷಕ್ಕೆ 13-19 ಸ್ಥಾನಗಳನ್ನು 36.5 ಪ್ರತಿಶತದಷ್ಟು ಮತಗಳೊಂದಿಗೆ ಗಳಿಸುವುದಾಗಿ ಹೇಳಿದೆ. ಆಕ್ಸಿಸ್-ಮೈ ಇಂಡಿಯಾ ಸಮೀಕ್ಷೆಯು ಕಾಂಗ್ರೆಸ್ ಪಕ್ಷ 20 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ.


ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ಸ್ಥಾನವನ್ನೂ ಗಳಿಸಲಾಗದಿದ್ದರೂ ಸಹ, ಆಕ್ಸಿಸ್-ಮೈ ಇಂಡಿಯಾ ಸಮೀಕ್ಷೆ ಬಿಜೆಪಿ 30 ಸ್ಥಾನಗಳನ್ನು ಗಳಿಸುವ ನಿರೀಕ್ಷೆ ವ್ಯಕ್ತಪಡಿಸಿದೆ. ಜನಕಿಬಾತ್-ನ್ಯೂಸ್ ಎಕ್ಸ್ ಚುನಾವಣೋತ್ತರ ಸಮೀಕ್ಷೆಯು ಬಿಜೆಪಿ 8-12 ಸ್ಥಾನಗಳನ್ನು, ಸಿವಟೇರ್ ಚುನಾವಣೋತ್ತರ ಸಮೀಕ್ಷೆಯು ಬಿಜೆಪಿಗೆ 4-8 ಸ್ಥಾನಗಳನ್ನು ಗಳಿಸಲಿದೆ ಎಂದು ತಿಳಿಸಿದೆ. 


ಕಾಂಗ್ರೆಸ್ ಪಕ್ಷ 59 ​​ಅಭ್ಯರ್ಥಿಗಳನ್ನು ಮತ್ತು ಬಿಜೆಪಿ 47 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಿತ್ತು. ಮೊದಲ ಬಾರಿಗೆ ಮೇಘಾಲಯ ಮುಖ್ಯಮಂತ್ರಿ ಮುಕುಲ್ ಸಂಗ್ಮಾ 2 ಕ್ಷೇತ್ರಗಳಿಂದ ಸ್ಪರ್ಧಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್ 30 ರಂದು ಐವರು ಶಾಶಕರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಎನ್ಸಿಪಿ ಸೇರಿದ ಪರಿಣಾಮ ತೀವ್ರ ಹಿನ್ನಡೆಯನ್ನು ಎದುರಿಸಿತ್ತು. ನಂತರ ಇತರ ಮೂವರು ಶಾಸಕರು ಕೂಡ ಎನ್ಪಿಪಿಗೆ ಸೇರಿದ್ದಾರೆ.


ಫೆಬ್ರುವರಿ 27 ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ಶೇ. 74.62 ರಷ್ಟು ಮತದಾನ ದಾಖಲಾಗಿತ್ತು.