ಜಮ್ಮು: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಕಾಶ್ಮೀರದಲ್ಲಿ ಚಾಲ್ತಿಯಲ್ಲಿರುವ ವಿವಾದಾತ್ಮಕ ಸಶಸ್ತ್ರಪಡೆ ಕಾಯ್ದೆ(Armed Forces (Special Powers) Act (AFSPA))ಯನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಭದ್ರತಾ ಪರಿಸ್ಥಿತಿ ಕ್ಷೀಣಿಸುತ್ತಿರುವುದರಿಂದ ಕಣಿವೆಯಲ್ಲಿ ಸೈನ್ಯದ ಉಪಸ್ಥಿತಿ ಹೆಚ್ಚಾಗಿದೆ. ಸೇನೆಯ ಮೇಲೆ ಕಲ್ಲೆಸೆಯುವುದು, ಉಗ್ರರ ಚಟುವಟಿಕೆ ಹೆಚ್ಚುವುದು ಇತ್ಯಾದಿಗಳಿಂದಾಗಿ ನಾವು ಜಮ್ಮು ಕಾಶ್ಮೀರದಲ್ಲಿ ಹೆಚ್ಚೆಚ್ಚು ಸೇನೆ ಮತ್ತು ಪೊಲೀಸರ ಉಪಸ್ಥಿತಿಯನ್ನು ಕಾಣಲೇಬೇಕಾಗುತ್ತದೆ. ಅದು ನಡೆಯದಿರಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ ಎಂದು ಹೇಳಿದರು. 


ಭಾರತೀಯ ಸೇನೆಯು ವಿಶ್ವದಲ್ಲೇ ಅತ್ಯಂತ ಶಿಸ್ತುಬದ್ಧ ಶಕ್ತಿಯಾಗಿದ್ದು, ಭದ್ರತಾ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂದು ಅವರು ಇಲ್ಲಿರುವ ಕಾರಣದಿಂದಾಗಿಯೇ ನಾವು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ ಎಂದು ಅವರು ಹೇಳಿದರು.