AI ಯ ಸಹಾಯದಿಂದ `ಆಧುನಿಕ ಭಾರತ`ದ ಕನಸು ಪೂರ್ಣ: ಮೈಕ್ರೋಸಾಫ್ಟ್
ಸರ್ಕಾರದ ಉತ್ತಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(AI) ಬಳಸಬಹುದು.
ಮುಂಬೈ: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(AI) ಸಹಾಯದಿಂದ "ಆಧುನಿಕ ಭಾರತ"ದ ಕನಸು ಸಾಕಾರಗೊಳ್ಳಲಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ.
ಟೆಕ್ನಾಲಜಿ ಕಂಪೆನಿ ಮೈಕ್ರೋಸಾಫ್ಟ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(AI) 'ಏಜ್ ಆಫ್ ಇಂಟೆಲಿಜೆನ್ಸ್' ಎಂಬ ಶ್ವೇತ ಪತ್ರವನ್ನು ಅನಾವರಣಗೊಳಿಸಿದೆ. ಆರೋಗ್ಯ ಸೇವೆಗಳು, ಉದ್ಯೋಗ, ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ AI ಅನ್ನು ಸಾಮಾಜಿಕ-ಆರ್ಥಿಕ ಅವಕಾಶಗಳಿಗೆ ವಿಸ್ತರಿಸಬಹುದು ಎಂದು ಶ್ವೇತಪತ್ರದಲ್ಲಿ ಹೇಳಲಾಗಿದೆ.
NASSCOM ಟೆಕ್ನಾಲಜಿ ಮತ್ತು ಲೀಡರ್ಶಿಪ್ ಫೋರಮ್ (NTLF) 2019ರಲ್ಲಿ ಈ ಶ್ವೇತಪತ್ರವನ್ನು ಅನಾವರಣಗೊಳಿಸಲಾಯಿತು. ಸರ್ಕಾರದ ಉತ್ತಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(AI) ಸಹಕಾರಿಯಾಗಲಿದೆ. ಇದರಲ್ಲಿ ಸವಾಲುಗಳು ಮತ್ತು ಅವಕಾಶಗಳನ್ನು ರಚಿಸಲಾಗಿದೆ. ಸರ್ಕಾರದ ನೀತಿಗಳು, ಅಂತರ್ಜಾಲ ಮತ್ತು ಸಂಪರ್ಕದಂತಹ ಇತ್ತೀಚಿನ ತಂತ್ರಜ್ಞಾನಗಳ ಬಳಕೆ, ಮುಂಬರುವ ವರ್ಷಗಳಲ್ಲಿ ಡಿಜಿಟಲ್ ರೂಪಾಂತರದ ಅನುಕೂಲಗಳನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ.
ಇದಲ್ಲದೆ, ತಂತ್ರಜ್ಞಾನ ಉದ್ಯಮವು ಸಕ್ರಿಯವಾಗಿ ಪಾಲುದಾರರಾಗಲು ಮತ್ತು AI ಯಲ್ಲಿ ಭಾರತದ ಜಾಗತಿಕ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ಮೈಕ್ರೋಸಾಫ್ಟ್ ಕರೆನೀಡುತ್ತದೆ. ತಂತ್ರಜ್ಞಾನದ ಅಗತ್ಯತೆಗಳಲ್ಲಿ ಸ್ಕೇಲ್, ದಕ್ಷತೆ ಮತ್ತು ಸಮರ್ಥನೀಯತೆ ಸಾಧಿಸಲು ಬೆನ್ನೆಲುಬಾಗಿರುವ ಅನೇಕ ಉಪಕ್ರಮಗಳು ಮುಖ್ಯವಾಗುತ್ತವೆ. ಇದರಲ್ಲಿ, ಕ್ಲೌಡ್ ಇನ್ಫ್ರಾಸ್ಟ್ರಕ್ಚರ್ನ ಶೀಘ್ರ ಅನುಷ್ಠಾನ ಮತ್ತು ಇಂಟೆಲಿಜೆಂಟ್ ಕ್ಲೌಡ್ ಸೇವೆಗಳು ಎಐ ಅಳವಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎನ್ನಲಾಗಿದೆ.
ಮೈಕ್ರೋಸಾಫ್ಟ್ ಭಾರತದ ಅಧ್ಯಕ್ಷ ಅನಂತ್ ಮಹೇಶ್ವರಿ ಮಾತನಾಡಿ, "ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(AI) ನಲ್ಲಿ ಮಾನವ ಕೇಂದ್ರಿತ ವಿಧಾನವನ್ನು ಸಕ್ರಿಯಗೊಳಿಸುವುದು ನಮ್ಮ ಉದ್ದೇಶ. ಭಾರತವು AI ಯನ್ನು ಅಳವಡಿಸಿಕೊಳ್ಳುವ ಹಂತದಲ್ಲಿದೆ. ಅದಕ್ಕಾಗಿ ನಾಲ್ಕು ಆಧಾರ ಸ್ತಂಭಗಳಿವೆ- ಕೈಗಾರಿಕೆಗಳಲ್ಲಿ ಡಿಜಿಟಲ್ ರೂಪಾಂತರವನ್ನು ಶಕ್ತಗೊಳಿಸುವುದು, ನಾವೀನ್ಯತೆಗಾಗಿ ಒಕ್ಕೂಟಗಳನ್ನು ರೂಪಿಸುವುದು, ಭವಿಷ್ಯದ ಸಿದ್ಧ ಕಾರ್ಯಪಡೆಯ ನಿರ್ಮಾಣ ಮತ್ತು ನಿರಂತರ ಸಾಮಾಜಿಕ ಪರಿಣಾಮವನ್ನು ರಚಿಸುವುದರಿಂದ AI ಯ ಸಾಮರ್ಥ್ಯವನ್ನು ಅನ್ಲಾಕ್ ಮಾಡುತ್ತದೆ ಮತ್ತು ವೇಗಗೊಳಿಸುತ್ತದೆ. AI ಅಭಿವೃದ್ಧಿ ಮತ್ತು ಬಳಕೆಗಾಗಿ ಅಭಿವೃದ್ಧಿಪಡಿಸಿದ ನೈತಿಕ ಚೌಕಟ್ಟಿನೊಳಗೆ ಇದನ್ನು ಮಾಡಬೇಕಾಗಿದೆ" ಎಂದರು.
ಭಾರತವು ಭಾಷಾ ವೈವಿಧ್ಯತೆಯನ್ನು ಹೊಂದಿದೆ:
ಉದಾಹರಣೆಗೆ, ಅದರ ಭಾಷಾ ವೈವಿಧ್ಯತೆ ಮತ್ತು ಸಾಕ್ಷರತೆಯ ಕಾರಣ ಭಾರತದ ಏಕೀಕರಣವು ಒಂದು ಪ್ರಮುಖ ಸವಾಲಾಗಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ. ಭಾಷೆಯ ಅಡ್ಡಿ ಕಾರಣದಿಂದ ಡಿಜಿಟಲ್ ಸೇವೆಗಳು ಸುಲಭವಾಗಿ ಲಭ್ಯವಿಲ್ಲ. AI ಈ ಅಡಚಣೆ ತೆಗೆದುಹಾಕುತ್ತದೆ. ಧ್ವನಿ ಗುರುತಿಸುವಿಕೆ, ಪಠ್ಯದಿಂದ ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಿಗೆ ಭಾಷಾಂತರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಸಂಪೂರ್ಣವಾಗಿ ಲಭ್ಯವಾದಲ್ಲಿ, ಅವರ ಆಯ್ಕೆಯ ಭಾಷೆಯಲ್ಲಿ ಎಲ್ಲ ನಾಗರಿಕರಿಗೂ ಎಲ್ಲಾ ಸೇವೆಗಳನ್ನು ನೀಡಲಾಗುವುದು. ಎಲ್ಲಾ ಪ್ರಮುಖ ಭಾರತೀಯ ಭಾಷೆಗಳಲ್ಲಿ ಈ ಸೇವೆಗಳನ್ನು ಒದಗಿಸಲು ಡೆವಲಪರ್ಗಳೊಂದಿಗೆ ಮೈಕ್ರೋಸಾಫ್ಟ್ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ.