ಜೈಪುರ: ಮಿಗ್ -21 ಫೈಟರ್ ಜೆಟ್ ರಾಜಸ್ಥಾನದ ಬಿಕಾನೆರ್ ನಗರದ ಬಳಿ ಶುಕ್ರವಾರ ಮಧ್ಯಾಹ್ನ ಪತನಗೊಂಡಿದ್ದು, ಅದೃಷ್ಟವಶಾತ್ ಪೈಲಟ್ ಅಪಾಯದಿಂದ ಪಾರಾಗಿದ್ದಾರೆ.


COMMERCIAL BREAK
SCROLL TO CONTINUE READING

ನಿಯಮಿತ ಕಾರ್ಯಾಚರಣೆಗಾಗಿ NAL ವಾಯು ನೆಲೆಯಿಂದ ಹಾರಾಟ ಆರಂಭಿಸಿದ್ದ ವಿಮಾನವು ಶೋಭಾಸರ್ ಗ್ರಾಮದ ಸಮೀಪ 14 ಕಿಲೋಮೀಟರ್ ದೂರದಲ್ಲಿ ಪತನಗೊಂಡಿದೆ. ಭಾರತೀಯ ವಾಯುಪಡೆಯ ಒಂದು ತಂಡವು ಅಪಘಾತದ ಸ್ಥಳವನ್ನು ತಲುಪಿದೆ. 



ನಿಯಮಿತ ಕಾರ್ಯಾಚರಣೆಗಾಗಿ NAL ವಾಯು ನೆಲೆಯಿಂದ ಹಾರಾಟ ಆರಂಭಿಸಿದ್ದ ಮಿಗ್ -21 ಫೈಟರ್ ಜೆಟ್ ಇಂದು ಮಧ್ಯಾಹ್ನ ಬಿಕಾನೆರ್ ಸಮೀಪ ಪತನಗೊಂಡಿದೆ. ವಿಮಾನದ ಪೈಲಟ್ ಸುರಕ್ಷಿತವಾಗಿ ಹೊರಬಂದಿದ್ದು, ಅಪಾಯದಿಂದ ಪಾರಾಗಿದ್ದಾರೆ. ಎ ಕೊಯಿ (ವಿಚಾರಣಾ ನ್ಯಾಯಾಲಯ) ಅಪಘಾತದ ಕಾರಣವನ್ನು ತನಿಖೆ ಮಾಡುತ್ತದೆ ಎಂದು ಐಎಎಫ್ ಹೇಳಿಕೆಯಲ್ಲಿ ತಿಳಿಸಿದೆ.