ಜೈಪುರ: MiG21 Crash - ಭಾರತೀಯ ವಾಯುಪಡೆಗೆ (Indian Air Force) ಮತ್ತೊಂದು ಆಘಾತವಾಗಿದೆ. ಸೇನೆಯ MiG-21 ವಿಮಾನ ರಾಜಸ್ಥಾನದ (Rajasthan) ಜೈಸಲ್ಮೇರ್‌ನಲ್ಲಿ (Jaisalmer)  ಅಪಘಾತಕ್ಕೀಡಾಗಿದೆ. ದೊರೆತ ಮಾಹಿತಿಯ ಪ್ರಕಾರ, ಗಂಗಾ ಗ್ರಾಮದ ಬಳಿಯ DNP ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಪೊಲೀಸ್ ಪಡೆ, ಅಗ್ನಿಶಾಮಕ ದಳ ಮತ್ತು ಆಡಳಿತದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

MiG21 Crash) ಪೈಲಟ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.  ಶೋಧ ತಂಡವು ಪೈಲಟ್‌ನ ದೇಹವನ್ನು ಹೊರತೆಗೆದಿದೆ ಆದರೆ ದೇಹ ಬೆಂಕಿಯಲ್ಲಿ ತೀವ್ರವಾಗಿ ಸುಟ್ಟುಹೋದ ಕಾರಣ ಅವರನ್ನು ಉಳಿಸಲು ಸಾಧ್ಯವಾಗಿಲ್ಲ. ಮಾಹಿತಿಯ ಪ್ರಕಾರ, ಭಾರತ-ಪಾಕಿಸ್ತಾನ ಗಡಿಯ (Indo-Pak Border) ಪಕ್ಕದಲ್ಲಿರುವ ಜೈಸಲ್ಮೇರ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಹವಾಮಾನ ವೈಪರೀತ್ಯ ಅಥವಾ ತಾಂತ್ರಿಕ ದೋಷವೇ ಇದಕ್ಕೆ ಕಾರಣವಾದರೂ ನಂತರ ತನಿಖೆ ನಡೆಸಲಾಗುವುದು. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-BofA Alert: ಮುಂದಿನ ಆರ್ಥಿಕ ವರ್ಷದ ಕುರಿತು BofA ಭವಿಷ್ಯವಾಣಿ, ಹೇಳಿದ್ದೇನು?


ಕುನ್ನೂರ್ ಅಪಘಾತದಲ್ಲಿ CDS ತನ್ನ ಪ್ರಾಣ ಕಳೆದುಕೊಂಡಿದ್ದರು
ಇತ್ತೀಚೆಗಷ್ಟೇ ದೇಶದ ಮೊದಲ CDS ಜನರಲ್ ಬಿಪನ್ ರಾವತ್ ಅವರ ಹೆಲಿಕಾಪ್ಟರ್ ಕುನ್ನೂರಿನಲ್ಲಿ ಅಪಘಾತಕ್ಕೀಡಾಗಿದ್ದು, ರಾವತ್ ಅವರ ಪತ್ನಿ ಸೇರಿದಂತೆ 14 ಜನರು ಸಾವನ್ನಪ್ಪಿದ್ದರು. ಈ ಅಪಘಾತದ ಬಗ್ಗೆ ವಾಯುಪಡೆಯಿಂದ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಮಿಗ್ ವಿಮಾನಗಳಲ್ಲಿ ಈ ಹಿಂದೆಯೂ ಇಂತಹ ಅಪಘಾತಗಳು ಸಂಭವಿಸಿದ್ದು, ಅವುಗಳ ಸುರಕ್ಷತೆಯ ಬಗ್ಗೆ ಹಲವು ಬಾರಿ ಪ್ರಶ್ನೆಗಳು ಎದ್ದಿವೆ.


ಇದನ್ನೂ ಓದಿ-Motercycle ಖರೀದಿಸಬೇಕೆ? ಹಾಗಾದರೆ ಈ ಸುದ್ದಿ ಓದಿ, ಲಾಭ ನಿಮ್ಮದಾಗಿಸಿಕೊಳ್ಳಿ


ಇದಕ್ಕೂ ಮೊದಲು ನವೆಂಬರ್‌ನಲ್ಲಿ ಅರುಣಾಚಲ ಪ್ರದೇಶದಲ್ಲಿ ಮಿಗ್ -21 ವಿಮಾನ (Mig Fighter Aircraft) ಪತನಗೊಂಡಿತ್ತು ಆದರೆ ಪೈಲಟ್ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾಗಿದ್ದರು. ರಾಜಸ್ಥಾನದ ಬಾರ್ಮರ್‌ನಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಪೈಲಟ್‌ನ ಜೀವ ಉಳಿಸಲಾಗಿದೆ. 1964 ರಲ್ಲಿ, ಈ ವಿಮಾನವನ್ನು ಮೊದಲ ಸೂಪರ್ಸಾನಿಕ್ ಫೈಟರ್ ಜೆಟ್ ಆಗಿ ವಾಯುಪಡೆಗೆ ಸೇರಿಸಲಾಗಿದೆ. ಆರಂಭಿಕ ಜೆಟ್‌ಗಳನ್ನು ರಷ್ಯಾದಲ್ಲಿ ತಯಾರಿಸಲಾಗಿವೆ ಮತ್ತು ನಂತರ ಭಾರತವು ಈ ವಿಮಾನವನ್ನು ಜೋಡಿಸುವ ಹಕ್ಕುಗಳು ಮತ್ತು ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಅಂದಿನಿಂದ, 1971 ರ ಇಂಡೋ-ಪಾಕ್ ಯುದ್ಧ, 1999 ರ ಕಾರ್ಗಿಲ್ ಯುದ್ಧ ಸೇರಿದಂತೆ ಹಲವು ಸಂದರ್ಭಗಳಲ್ಲಿ MiG-21 ಪ್ರಮುಖ ಪಾತ್ರ ವಹಿಸಿದೆ. ರಷ್ಯಾ 1985 ರಲ್ಲಿ ಈ ವಿಮಾನ ತಯಾರಿಕೆಯನ್ನು ನಿಲ್ಲಿಸಿದೆ. ಆದರೆ ಭಾರತವು ಅದರ ನವೀಕರಿಸಿದ ರೂಪಾಂತರವನ್ನು ಬಳಸುತ್ತಿದೆ.


ಇದನ್ನೂ ಓದಿ-Biggest Recovery In History! ದಾಳಿಯ ಬಳಿಕ ನೋಟುಗಳನ್ನು ಸಾಗಿಸಲು ಲಾರಿಯೇ ಬರಮಾಡಿಕೊಳ್ಳಲಾಗಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.