Mithun Chakraborty : ಟಿಎಂಸಿಯ 38 ಶಾಸಕರು ಶೀಘ್ರದಲ್ಲಿ ಬಿಜೆಪಿಗೆ : ಮಿಥುನ್ ಚಕ್ರವರ್ತಿ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಲ್ಲಿ ಟಿಎಂಸಿಗೆ ಸೆಡ್ಡು ಹೊಡೆಯಲು ಕೇಸರಿ ಪಡೆ ಭಾರಿ ತಂತ್ರಗಾರಿಕೆಯೊಂದಿಗೆ ಸಿದ್ಧತೆ ನಡೆಸಿದೆ.
West Bengal Politics : ಬಿಜೆಪಿ ಮಹಾರಾಷ್ಟ್ರದ ನಂತರ ಈಗ ಪಶ್ಚಿಮ ಬಂಗಾಳದ ದೀದಿ ಸರ್ಕಾರದ ಮೇಲೆ ಕಣ್ಣಿಟ್ಟಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಲ್ಲಿ ಟಿಎಂಸಿಗೆ ಸೆಡ್ಡು ಹೊಡೆಯಲು ಕೇಸರಿ ಪಡೆ ಭಾರಿ ತಂತ್ರಗಾರಿಕೆಯೊಂದಿಗೆ ಸಿದ್ಧತೆ ನಡೆಸಿದೆ.
38 ತೃಣಮೂಲ ಕಾಂಗ್ರೆಸ್ ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ, ನಮ್ಮ ಪಕ್ಷದೊಂದಿಗೆ ಅವರು ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಬಾಲಿವುಡ್ ನಟ ಮತ್ತು ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ಹೇಳಿದ್ದಾರೆ.
ರೋಶನಿ ನಾಡಾರ್ ಈಗ ಭಾರತದ ನಂಬರ್ 1 ಶ್ರೀಮಂತೆ..!
ಕೋಲ್ಕತ್ತಾದಲ್ಲಿ ಮಿಥುನ್ ಸುದ್ದಿಗೋಷ್ಠಿ
ಕೋಲ್ಕತ್ತಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಿಥುನ್ ಚಕ್ರವರ್ತಿ, 38 ಶಾಸಕರ ಪೈಕಿ 21 ಶಾಸಕರು ಬಿಜೆಪಿಯೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ. ನೀವು ಬ್ರೇಕಿಂಗ್ ನ್ಯೂಸ್ ಕೇಳಲು ಬಯಸುವಿರಾ ಎಂದು ಮಿಥುನ್ ಹೇಳಿದ್ದಾರೆ. ಪ್ರಸ್ತುತ, 38 ಟಿಎಂಸಿ ಶಾಸಕರು ನಮ್ಮೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ, ಅವರಲ್ಲಿ 21 ಮಂದಿ ನಮ್ಮೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ವಿರುದ್ಧ ಮಮತಾ ವಾಗ್ದಾಳಿ
ಈ ಹಿಂದೆ, 2024 ರಲ್ಲಿ ಬಿಜೆಪಿ (ಅಧಿಕಾರಕ್ಕೆ) ಬರುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಭಾರತದಲ್ಲಿ ನಿರುದ್ಯೋಗ ಪ್ರಮಾಣವು ಶೇ.40 ರಷ್ಟು ಹೆಚ್ಚುತ್ತಿದೆ ಆದರೆ ಬಂಗಾಳದಲ್ಲಿ ಶೇ.45 ರಷ್ಟು ಕಡಿಮೆಯಾಗಿದೆ. ಇಂದು ಮಾಧ್ಯಮಗಳ ವಿಚಾರಣೆ ನಡೆಯುತ್ತಿದ್ದು, ಜನರನ್ನು ಆರೋಪಿಗಳೆಂದು ಕರೆಯುತ್ತಿದ್ದಾರೆ ಎಂದರು.
ಇದನ್ನೂ ಓದಿ : ಸೋನಿಯಾ ಗಾಂಧಿ ED ವಿಚಾರಣೆ ಮುಕ್ತಾಯ.. 3 ದಿನಗಳಲ್ಲಿ 100 ಕ್ಕೂ ಹೆಚ್ಚು ಸವಾಲು
ಬಂಗಾಳದಲ್ಲಿ ಬೇಯುವುದಿಲ್ಲ ಬಿಜೆಪಿಯವರ ಬೆಳೆ
ಅವರಿಗೆ (ಬಿಜೆಪಿ) ಕೆಲಸವಿಲ್ಲ, 3-4 ಏಜೆನ್ಸಿಗಳ ಮೂಲಕ ರಾಜ್ಯ ಸರ್ಕಾರಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಅವರ ಕೆಲಸ. ಅವರು ಮಹಾರಾಷ್ಟ್ರ, ಈಗ ಜಾರ್ಖಂಡ್ ಅನ್ನು ವಶಪಡಿಸಿಕೊಂಡಿದ್ದಾರೆ ಆದರೆ ಬಂಗಾಳದಲ್ಲಿ ಅವರ ಬಿಜೆಪಿಯವರ ಬೆಳೆ ಬೇಯುವುದಿಲ್ಲ . ಬಂಗಾಳದ ಸರ್ಕಾರ ಕೆಡುವುದು ಸುಲಭವಲ್ಲ ಏಕೆಂದರೆ ನೀವು ಮೊದಲು ರಾಯಲ್ ಬೆಂಗಾಲ್ ಟೈಗರ್‌ನೊಂದಿಗೆ ಹೋರಾಡಬೇಕು ಎಂದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.