ನವದೆಹಲಿ: ಮಿಝೊರಾಂ ರಾಜ್ಯಪಾಲರಾಗಿ ಕರ್ತವ್ಯನಿರ್ವಹಿಸುತ್ತಿದ್ದ ಕುಮ್ಮನಂ ರಾಜಶೇಖರನ್ ಅವರು ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ರಾಜಶೇಖರನ್ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಸಲ್ಲಿಸಿದ್ದು ಅವರ ರಾಜೀನಾಮೆ ಅಂಗೀಕೃತಗೊಂಡಿದೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.


ನೂತನ ರಾಜ್ಯಪಾಲರ ನೇಮಕ ಆಗುವವರೆಗೆ ಅಸ್ಸಾಂ ರಾಜ್ಯದ ರಾಜ್ಯಪಾಲರಾಗಿರುವ ಪ್ರೊ. ಜಗದೀಶ್ ಮುಖಿ ಅವರಿಗೆ ಹೆಚ್ಚುವರಿಯಾಗಿ ಮಿಝೊರಾಂ ರಾಜ್ಯದ ರಾಜ್ಯಪಾಲರ ಹೊಣೆಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.


ಸದ್ಯ ಮುಂಬರುವ ಲೋಕಸಭೆ ಚುನಾವನೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ರಾಜಶೇಖರನ್ ಅವರು ರಾಜ್ಯಪಾಲರ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.  ಕೇರಳದ ಮಾಜಿ ಬಿಜೆಪಿ ಮುಖಂಡರಾಗಿದ್ದ ರಾಜಶೇಖರನ್ ತಿರುವನಂತಪುರದಿಂದ​ ಕಾಂಗ್ರೆಸ್​​ ಅಭ್ಯರ್ಥಿ ಶಶಿ ತರೂರ್​ ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. 


ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದೀರ್ಘಕಾಲೀನ ಒಡನಾಡಿಯಾಗಿರುವ ರಾಜಶೇಖರನ್ ಅವರು ಕೇರಳ ರಾಜ್ಯದವರಾಗಿದ್ದು ಇಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2018ರ ಮೇ 25ರಂದು ಮಿಝೊರಾಂ ರಾಜ್ಯದ ರಾಜ್ಯಪಾಲರಾಗಿ ನೇಮಕವಾಗಿದ್ದರು.