ಚೆನ್ನೈ : ತಮಿಳುನಾಡಿನ 8ನೇ ಸಿಎಂ ಆಗಿ ಎಂ.ಕೆ.ಸ್ಟಾಲಿನ್ (ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್) ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಬೆಳಗ್ಗೆ ಚೆನ್ನೈಯ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಂ.ಕೆ ಸ್ಟಾಲಿನ್(MK Stalin) ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನವನ್ನು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರು ಬೋಧಿಸಿದರು.


ಇದನ್ನೂ ಓದಿ : SBI Alert: ಸ್ಟೇಟ್ ಬ್ಯಾಂಕಿನ ಡಿಜಿಟಲ್ ಸೇವೆಗಳಲ್ಲಿ ಅಡಚಣೆ! ನಿಮ್ಮ ಪ್ರಮುಖ ಕೆಲಸವನ್ನು ತಕ್ಷಣ ನಿರ್ವಹಿಸಿ


ತಮಿಳು ನಾಡಿನ ಖ್ಯಾತ ರಾಜಕಾರಣಿ ಡಿಎಂಕೆ ಪಕ್ಷದ ಸ್ಥಾಪಕ ಎಂ ಕರುಣಾನಿಧಿ(M Karunanidhi)ಯವರ ಪುತ್ರ ಎಂ.ಕೆ.ಸ್ಟಾಲಿನ್ 2018, ಆಗಸ್ಟ್ 28ರಿಂದ ಪಕ್ಷವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.


ಇದನ್ನೂ ಓದಿ : CBSE Class 10th Result 2021: 10ನೇ ತರಗತಿಯ ಫಲಿತಾಂಶ ಇನ್ನಷ್ಟು ವಿಳಂಬ ಸಾಧ್ಯತೆ ; ಕಾರಣ ಇಲ್ಲಿದೆ


ಎಂ. ಕೆ.ಸ್ಟಾಲಿನ್ ಅವರು ಈ ಹಿಂದೆ 2009ರಲ್ಲಿ ತಮಿಳುನಾಡಿನ(Tamil Nad) ಉಪ ಮುಖ್ಯಮಂತ್ರಿಯಾಗಿ, 2006ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಿದ್ದಾಗ ಗ್ರಾಮೀಣಾಭಿವೃದ್ಧಿ ಮತ್ತು ಸ್ಥಳೀಯ ಆಡಳಿತ ಸಚಿವ ಖಾತೆ, ಚೆನ್ನೈ ಮಹಾನಗರ ಪಾಲಿಕೆಯ ಮೇಯರ್ ಹುದ್ದೆ ಅಲಂಕರಿಸಿ ಆಗಿ ಸರ್ಕಾರದ ಆಡಳಿತದಲ್ಲಿ ಅಪಾರ ಅನುಭವ ಹೊಂದಿದ್ದಾರೆ.


ಇದನ್ನೂ ಓದಿ : Air Ambulance- ಟೇಕ್ಆಫ್ ವೇಳೆ ವಿಮಾನದಿಂದ ಬೇರ್ಪಟ್ಟ ಚಕ್ರ, ಮುಂದೆ....


2018ರಲ್ಲಿ ಎಂ ಕರುಣಾನಿಧಿಯವರ ನಿಧನ ಬಳಿಕ ಡಿಎಂಕೆ(DMK Party) ಅಧ್ಯಕ್ಷ ಹುದ್ದೆಯನ್ನು ಪೂರ್ಣ ಪ್ರಮಾಣದಲ್ಲಿ ಸ್ಟಾಲಿನ್ ಅವರು ವಹಿಸಿಕೊಂಡರು. ಅಭಿಮಾನಿಗಳಿಂದ ಪ್ರೀತಿಯಿಂದ ತಲಪತಿ ಎಂದು ಸ್ಟಾಲಿನ್ ಗೆ  ಕರೆಯುತ್ತಾರೆ.


ಇದನ್ನೂ ಓದಿ : ತಮಿಳುನಾಡಿನ ನೂತನ ಸಚಿವ ಸಂಪುಟದಲ್ಲಿ ಸ್ಟಾಲಿನ್, ಗಾಂಧಿ, ನೆಹರು...!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.