ರಾಜಸ್ಥಾನದಲ್ಲಿ 14 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿ

ರಾಜಸ್ಥಾನದಲ್ಲಿ ಕರೋನವೈರಸ್ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ರಾಜ್ಯ ಸರ್ಕಾರವು ಗುರುವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ.ಲಾಕ್‌ಡೌನ್ ಮೇ 10 ರ ಬೆಳಿಗ್ಗೆ 5:00 ರಿಂದ ಮೇ 24 ರ ಬೆಳಿಗ್ಗೆ 5:00 ರವರೆಗೆ ಜಾರಿಗೆ ಬರಲಿದೆ.

Last Updated : May 7, 2021, 01:17 AM IST
  • ರಾಜಸ್ಥಾನದಲ್ಲಿ ಕರೋನವೈರಸ್ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ರಾಜ್ಯ ಸರ್ಕಾರವು ಗುರುವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ.
  • ಲಾಕ್‌ಡೌನ್ ಮೇ 10 ರ ಬೆಳಿಗ್ಗೆ 5:00 ರಿಂದ ಮೇ 24 ರ ಬೆಳಿಗ್ಗೆ 5:00 ರವರೆಗೆ ಜಾರಿಗೆ ಬರಲಿದೆ.
 ರಾಜಸ್ಥಾನದಲ್ಲಿ 14 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿ  title=
ಸಾಂದರ್ಭಿಕ ಚಿತ್ರ

ನವದೆಹಲಿ: ರಾಜಸ್ಥಾನದಲ್ಲಿ ಕರೋನವೈರಸ್ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ರಾಜ್ಯ ಸರ್ಕಾರವು ಗುರುವಾರ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ.ಲಾಕ್‌ಡೌನ್ ಮೇ 10 ರ ಬೆಳಿಗ್ಗೆ 5:00 ರಿಂದ ಮೇ 24 ರ ಬೆಳಿಗ್ಗೆ 5:00 ರವರೆಗೆ ಜಾರಿಗೆ ಬರಲಿದೆ.

ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ವಿವಾಹಗಳನ್ನು ನಿಷೇಧಿಸಲಾಗಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಚಿವರ ಜೊತೆಗಿನ ಸಭೆಯ ನಂತರ ಈ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: 'ಮೂರನೇ ಕೊರೊನಾ ಅಲೆಗೆ ಈಗಲೇ ಸಿದ್ಧರಾಗಿ"- ಕೇಂದ್ರಕ್ಕೆ ಸುಪ್ರೀಂ ಸೂಚನೆ

ಬುಧವಾರ, ರಾಜ್ಯದಲ್ಲಿ  COVID-19 ಪರಿವರ್ತನೆಯ ಸರಪಳಿಯನ್ನು ಮುರಿಯುವ ಕ್ರಮಗಳ ಕುರಿತು ಗೆಹ್ಲೋಟ್ ಐದು ಮಂತ್ರಿಗಳ ಗುಂಪನ್ನು ರಚಿಸಿದ್ದರು. ಅದು ಗುರುವಾರ ಗೆಹ್ಲೋಟ್‌ಗೆ ವರದಿಯನ್ನು ಸಲ್ಲಿಸಿತ್ತು.

ಲಾಕ್‌ಡೌನ್ ವಿಧಿಸಲು ವರದಿ ಸೂಚಿಸಿದೆ. ಇದರ ನಂತರ, ಗುರುವಾರ ಸಂಜೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಂತ್ರಿ ಮಂಡಳಿಯ ಸಭೆಯಲ್ಲಿ, ಸಮಿತಿಯು ಶಿಫಾರಸುಗಳ ಬಗ್ಗೆ ಚರ್ಚೆ ಮಾಡಿ ಈ ಘೋಷಣೆ ಮಾಡಿತು.

ಇದನ್ನೂ ಓದಿ: NEET-JEE ಪರೀಕ್ಷೆಗಳ ಮುಂದೂಡುವಿಕೆಯ ಕುರಿತು ಟ್ವೀಟ್ ಮಾಡಿದ Sonu Sood ಮಾಡಿದ ಮನವಿ ಏನು?

ಲಾಕ್ ಡೌನ್  ಹಾಕಲು ಸೂಚಿಸಿದ ಮಂತ್ರಿಗಳ ಗುಂಪಿನಲ್ಲಿ ನಗರಾಭಿವೃದ್ಧಿ ಸಚಿವ ಶಾಂತಿ ಧಾರಿವಾಲ್, ಜಲಾಡೆ ಸಚಿವ ಡಾ.ಬಿ.ಡಿ.ಕಲ್ಲಾ, ವೈದ್ಯಕೀಯ ಸಚಿವ ಡಾ.ರಘು ಶರ್ಮಾ, ಶಿಕ್ಷಣ ರಾಜ್ಯ ಸಚಿವ ಗೋವಿಂದ್ ಸಿಂಗ್ ದೋಟಾಸರಾ ಮತ್ತು ರಾಜ್ಯ ಸಚಿವ ಡಾ.ಸುಭಾಷ್ ಗರ್ಗ್ ಸೇರಿದ್ದಾರೆ.

ಇದನ್ನೂ ಓದಿ : Oxygen ಕೊರತೆಯಿಂದಾಗಿ ಭಯಪಡಬೇಡಿ, ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಸಿಲಿಂಡರ್‌ ತಲುಪಿಸಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News