ನವದೆಹಲಿ: ಮುಂಬೈ ಮೆಟ್ರೋ ರೈಲ್ ಕಾರ್ಪೊರೇಶನ್ ಲಿಮಿಟೆಡ್ (ಎಂಎಂಆರ್ಸಿಎಲ್) ಶುಕ್ರವಾರ ಮತ್ತು ಶನಿವಾರದ ನಡುವೆ ಆರೆ ಕಾಲೋನಿಯಲ್ಲಿ 2,141 ಮರಗಳನ್ನು ಕಡಿಯಲಾಗಿದೆ ಎಂದು ತಿಳಿಸಿದೆ. ಅಕ್ಟೋಬರ್ 21 ರಂದು ಮುಂದಿನ ವಿಚಾರಣೆಯವರೆಗೆ ಮತ್ತಷ್ಟು ಕಡಿತವನ್ನು ತಡೆಯಲು ಸುಪ್ರೀಂ ಕೋರ್ಟ್ ಆದೇಶಿಸಿದ ಕೆಲವೇ ಗಂಟೆಗಳ ನಂತರ ಈ ಮಾಹಿತಿಯನ್ನು ನೀಡಿದೆ.


COMMERCIAL BREAK
SCROLL TO CONTINUE READING

ಸುಪ್ರೀಂಕೋರ್ಟ್ ನ ತೀರ್ಪಿಗೆ ಪ್ರತಿಕ್ರಿಯಿಸಿರುವ ಮುಂಬೈ ಮೆಟ್ರೋ 'ಇಂದು ಅಂಗೀಕರಿಸಲ್ಪಟ್ಟ ಗೌರವಾನ್ವಿತ ಸುಪ್ರೀಂ ಕೋರ್ಟಿನ ಆದೇಶವನ್ನು ನಾವು ಗೌರವಿಸುತ್ತೇವೆ. ಆರೆ ಮಿಲ್ಕ್ ಕಾಲೋನಿಯಲ್ಲಿನ ಕಾರ್ ಶೆಡ್ ಸ್ಥಳದಲ್ಲಿ ಮುಂದೆ ಮರ ಕಡಿಯುವ ಯಾವುದೇ ಕಾರ್ಯವನ್ನು ಕೈಗೊಳ್ಳಲಾಗುವುದಿಲ್ಲ. ಈಗಾಗಲೇ ಕಡಿದ ಮರಗಳನ್ನು ತೆರವುಗೊಳಿಸುವುದು ಸೇರಿದಂತೆ ಇತರ ಕಾರ್ಯಗಳು ಮುಂದುವರಿಯಲಿವೆ ಎಂದು ತಿಳಿಸಿದೆ.


ನಿಗದಿತ ಸ್ಥಳದಲ್ಲಿ ಕಟ್ಟಡಗಳ ನಿರ್ಮಾಣವು ಯೋಜಿಸಿದಂತೆ ಮುಂದುವರಿಯುತ್ತದೆ, ಸುಪ್ರೀಂಕೋರ್ಟ್ ಆದೇಶದ ಬಗ್ಗೆ ರಾಜ್ಯ ಸರ್ಕಾರದ ಹಿಂದಿನ ವ್ಯಾಖ್ಯಾನವನ್ನು ದೃಡಪಡಿಸಿ, ಅದು ಮರಗಳನ್ನು ಕಡಿಯುವುದಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿಯನ್ನು ಮಾತ್ರ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಹೇಳಿರುವುದನ್ನು ಎಂಎಂಆರ್ಸಿಎಲ್ ಉಲ್ಲೇಖಿಸಿದೆ. ತನ್ನ ಹಸಿರು ಉಪಕ್ರಮಗಳ ಭಾಗವಾಗಿ 23,846 ಮರಗಳನ್ನು ನೆಟ್ಟಿದೆ ಮತ್ತು 25,000 ಸಸಿಗಳನ್ನು ವಿತರಿಸಿದೆ ಎಂದು ಎಂಎಂಆರ್ಸಿಎಲ್ ಹೇಳಿಕೆಯಲ್ಲಿ ತಿಳಿಸಿದೆ.


ಐದು ಲಕ್ಷಕ್ಕೂ ಹೆಚ್ಚು ಮರಗಳನ್ನು ಹೊಂದಿರುವ ಮತ್ತು ವಿವಿಧ ಬಗೆಯ ಪಕ್ಷಿ ಮತ್ತು ಪ್ರಾಣಿ ಪ್ರಭೇದ ಮತ್ತು 27 ಬುಡಕಟ್ಟು ಹಳ್ಳಿಗಳಿಗೆ ನೆಲೆಯಾಗಿರುವ ಆರೆ ಕಾಲೋನಿಯಲ್ಲಿ ಮರಗಳನ್ನು ಕಡಿಯುವುದರ ಬಗ್ಗೆ ಬಾಂಬೆ ಹೈಕೋರ್ಟ್‌ ನಾಲ್ಕು ಅರ್ಜಿಗಳನ್ನು ವಜಾಗೊಳಿಸಿ ಅರಣ್ಯ ಎಂದು ಘೋಷಿಸುವುದಕ್ಕೆ ತಡೆಯೋಡ್ಡಿತ್ತು. ಇದಾದ ನಂತರ ಕೋರ್ಟ್ ನ ಆದೇಶದ ಮತ್ತು ಸರ್ಕಾರದ ಕ್ರಮದ ವಿರುದ್ಧವಾಗಿ ತೀವ್ರವಾಗಿ ಪ್ರತಿಭಟನೆ ನಡೆದಿತ್ತು.