ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಆಗಸ್ಟ್​ನಲ್ಲಿ ಕಿಸಾನ್​ ರೈಲು ಯೋಜನೆಯನ್ನ ಘೋಷಣೆ ಮಾಡಿದ್ದರು. ನಗರ ಪ್ರದೇಶಗಳಲ್ಲಿಯೂ ತಮ್ಮ ಆಹಾರ ಉತ್ಪನ್ನಗಳನ್ನ ಮಾರಾಟ ಮಾಡಲು ಅನುಕೂಲವಾಗುವ ಸಲುವಾಗಿ ಈ ಯೋಜನೆ ಜಾರಿಗೆ ತರೋದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಇದೀಗ 2021ರ ಕೇಂದ್ರ ಬಜೆಟ್​ನಲ್ಲಿ ಕಿಸಾನ್​ ರೈಲು ಯೋಜನೆ ವಿಸ್ತರಣೆಯನ್ನ ಸರ್ಕಾರ ಪ್ರಕಟಿಸುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ರೈಲ್ವೆ ಸಚಿವಾಲಯ 2021-22ರ ಆರ್ಥಿಕ ವರ್ಷದಲ್ಲಿ ಹೆಚ್ಚಿನ ರೈತರನ್ನ ತಲುಪಲು ಎದುರು ನೋಡುತ್ತಿದೆ. ಅಲ್ಲದೇ ಈ ಯೋಜನೆ ರೈತ(Farmers)ರ ಕಲ್ಯಾಣಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ. ಮಾತ್ರವಲ್ಲದೇ ರೈತರ ಆದಾಯವನ್ನ ದ್ವಿಗುಣಗೊಳಿಸುವ ಧ್ಯೇಯವನ್ನ ಸಾಧಿಸಲು ಸಹಾಯ ಮಾಡುತ್ತದೆ.


Indian Railway Recruitment 2021: 10ನೇ ತರಗತಿ ಪಾಸ್ ಆದವರಿಗೆ ಬಂಪರ್ ಉದ್ಯೋಗಾವಕಾಶ


ಈ ಕಿಸಾನ್​ ರೈಲಿನಲ್ಲಿ ರೈತರು ತಾವು ಬೆಳೆದ ಹಣ್ಣು ಹಾಗೂ ತರಕಾರಿಗಳನ್ನ ರಾಷ್ಟ್ರಾದ್ಯಂತ 50 ಪ್ರತಿಶತ ಸಬ್ಸಿಡಿ ದರದಲ್ಲಿ ಸಾಗಿಸಬಹುದಾಗಿದೆ. ತಮ್ಮ ಉತ್ಪನ್ನಗಳ ಮಾರಾಟಕ್ಕೆ ರೈತರು 50 ಪ್ರತಿಶತ ಸಹಾಯಧನ ಪಡೆಯಲಿದ್ದಾರೆ. ಈ ಸೌಕರ್ಯದಿಂದಾಗಿ ರೈತರು ತಮ್ಮ ಉತ್ಪನ್ನಗಳ ಮೇಲೆ ಸಾಮಾನ್ಯ ದರಕ್ಕಿಂತ ಹೆಚ್ಚಿನ ಲಾಭ ಪಡೆಯಲಿದ್ದಾರೆ.


Lunar eclipse 2021: ಈ ವರ್ಷದ ಮೊದಲ ಚಂದ್ರ ಗ್ರಹಣ ಯಾವಾಗ ? ಎಲ್ಲಿ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ