ನವದೆಹಲಿ: ದೇಶದಲ್ಲಿ ಅಗ್ಗದ ಮತ್ತು ಶುದ್ಧ ಇಂಧನವನ್ನು ಒದಗಿಸುವ ದೊಡ್ಡ ಯೋಜನೆಯೊಂದನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಪ್ರಾರಂಭಿಸಿದೆ. ದೇಶದ 5 ಸಾವಿರ ಸಂಕುಚಿತ ಜೈವಿಕ ಅನಿಲ (ಸಿಬಿಜಿ) ಸ್ಥಾವರಗಳಲ್ಲಿ ಎರಡು ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲು ಸಿದ್ಧತೆ ನಡೆಸಲಾಗಿದೆ.


COMMERCIAL BREAK
SCROLL TO CONTINUE READING

ಪೆಟ್ರೋನೆಟ್ ಎಲ್ಎನ್‌ಜಿ (Petronet LNG Mou) ಜೊತೆಗೆ ಒಪ್ಪಂದ :
ಇಂಧನ ಕಂಪನಿಗಳಾದ ಜೆಬಿಎಂ ಗ್ರೂಪ್, ಅದಾನಿ ಗ್ಯಾಸ್, ಪೆಟ್ರೋನೆಟ್ ಎಲ್ಎನ್‌ಜಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚಿಗೆ ಈ ಘೋಷಣೆ ಮಾಡಿದ್ದಾರೆ. ಜೈವಿಕ ಮತ್ತು ಬೆಳೆ ಅವಶೇಷಗಳಿಂದ ತಯಾರಿಸಿದ ಈ ಇಂಧನ (Fuel) ಕ್ಷೇತ್ರದಲ್ಲಿ ಅಪಾರ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಸಚಿವಾಲಯ ಈ ಕ್ರಮ ಕೈಗೊಂಡಿದೆ. ಇದರಿಂದ ರೈತರಿಗೂ (Farmers) ಹೆಚ್ಚಿನ ಲಾಭವಾಗಲಿದೆ ಎಂದು ಹೇಳಲಾಗಿದೆ.


ಕಚ್ಚಾ ತೈಲದರ ಹೆಚ್ಚಳ, ಮತ್ತೆ ಪೆಟ್ರೋಲ್-ಡೀಸೆಲ್ ದರ ಏರಿಕೆ ಸಾಧ್ಯತೆ


ಹಸಿರು ಇಂಧನ ಅಗ್ಗವಾಗಲಿದೆ :
ಈ ಕುರಿತಂತ ಮಾತನಾಡಿದ್ದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಇಂದು ನಾವು ಶುದ್ಧ, ಅಗ್ಗದ ಮತ್ತು ಸುಸ್ಥಿರ ಇಂಧನಕ್ಕಾಗಿ ನಿರಂತರ ಹುಡುಕಾಟದಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿದ್ದೇವೆ. ಸುಸ್ಥಿರ ಪರ್ಯಾಯ ಆರ್ಥಿಕ ಸಾರಿಗೆ  (SATAT)ಗಾಗಿ ನಾವು ಸ್ಪಷ್ಟವಾದ ಮಾರ್ಗಸೂಚಿಯನ್ನು ರಚಿಸಿದ್ದೇವೆ ಎಂದು ಹೇಳಿದರು.


600 ಸಿಬಿಜಿ ಸ್ಥಾವರಗಳನ್ನು ಸ್ಥಾಪಿಸಲಾಗುವುದು:
ಭಾರತೀಯ ಉದ್ಯಮದೊಂದಿಗೆ ಸಂಬಂಧ ಹೊಂದಿರುವ ಜನರು ಸುಸ್ಥಿರ ಪರ್ಯಾಯ ಆರ್ಥಿಕ ಸಾರಿಗೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ಈಗಾಗಲೇ 600 ಸಿಬಿಜಿ ಸ್ಥಾವರಗಳಿಗೆ ಉದ್ದೇಶಿತ ಪತ್ರಗಳನ್ನು ನೀಡಲಾಗಿದ್ದು, ಇತ್ತೀಚಿಗೆ 900 ಸ್ಥಾವರಗಳಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಒಟ್ಟು 1500 ಸಿಬಿಜಿ ಸ್ಥಾವರಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ ಎಂದು ತಿಳಿದುಬಂದಿದೆ.


69 ಸಾವಿರ ಪೆಟ್ರೋಲ್ ಪಂಪ್‌ಗಳಲ್ಲಿ E-vehicle ಚಾರ್ಜಿಂಗ್ ಕಿಯೋಸ್ಕ್ ಅಳವಡಿಕೆ!


2023 ರ ವೇಳೆಗೆ 5000 ಸ್ಥಾವರಗಳು:
ವಾಸ್ತವವಾಗಿ ಸಾರಿಗೆ ಕ್ಷೇತ್ರಕ್ಕೆ ಪರ್ಯಾಯ ಮತ್ತು ಶುದ್ಧ ಇಂಧನವನ್ನು ಉತ್ಪಾದಿಸಲು ಮತ್ತು ಸಿಬಿಜಿಯ ಲಭ್ಯತೆಯನ್ನು ಹೆಚ್ಚಿಸಲು 1 ಅಕ್ಟೋಬರ್ 2018 ರಂದು ಭಾರತ ಸರ್ಕಾರವು SATATನ ಉಪಕ್ರಮವನ್ನು ಪ್ರಾರಂಭಿಸಿತು. ಸರ್ಕಾರ 2023-24ರ ವೇಳೆಗೆ 5 ಸಾವಿರ ಸಿಬಿಜಿ ಸ್ಥಾವರಗಳನ್ನು ಸ್ಥಾಪಿಸುವ ಯೋಜನೆಯನ್ನು ಹೊಂದಿದೆ.