ಮೋದಿ, ಕೆಸಿಆರ್, ಓವೈಸಿ ಎಲ್ಲಾ ಒಂದೇ, ಅವರನ್ನು ನಂಬಿ ಮುರ್ಖರಾಗಬೇಡಿ: ರಾಹುಲ್ ಗಾಂಧಿ
ಟಿಆರ್ ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್, ಪ್ರಧಾನಿ ಮೋದಿ ಅವರ ತೆಲಂಗಾಣ ರಬ್ಬರ್ ಸ್ಟಾಂಪ್ ನಂತೆ ಕಾರ್ಯನಿರ್ವಹಿಸುತ್ತಿದ್ದು, ಪ್ರಬುದ್ಧ ತೆಲಂಗಾಣದ ಜನತೆ ಅವರಿಂದ ಮರುಳಾಗಬೇಡಿ, ಮುರ್ಖರಾಗಬೇಡಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಎಐಎಂಐಎಂ ಮುಖ್ಯಸ್ಥ ಒವೈಸಿ, ಇವರೆಲ್ಲಾ ಒಂದೇ...ಅವರನ್ನು ನಂಬಿ ಮುರ್ಖರಾಗಬೇಡಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೆಲಂಗಾಣ ಜನತೆಗೆ ಕಿವಿಮಾತು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಟಿಆರ್ ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್, ಪ್ರಧಾನಿ ಮೋದಿ ಅವರ ತೆಲಂಗಾಣ ರಬ್ಬರ್ ಸ್ಟಾಂಪ್ ನಂತೆ ಕಾರ್ಯನಿರ್ವಹಿಸುತ್ತಿದ್ದು, ಪ್ರಬುದ್ಧ ತೆಲಂಗಾಣದ ಜನತೆ ಅವರಿಂದ ಮರುಳಾಗಬಾರದು. ಅಷ್ಟೇ ಅಲ್ಲ, ಟಿಆರ್ಎಸ್ ಬಿಜೆಪಿಯ ಬಿ ಟೀಮ್ ಮತ್ತು ಓವೈಸಿಯ ಎಐಎಂಐಎಂ ಬಿಜೆಪಿಯ ಸಿ ಟೀಮ್ ನಂತಿದ್ದು, ಬಿಜೆಪಿ ಹಾಗೂ ಕೆಸಿಆರ್ ವಿರುದ್ಧದ ಮತಗಳನ್ನು ವಿಭಜಿಸಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ತೆಲಂಗಾಣದಲ್ಲಿ ಡಿಸೆಂಬರ್ 7 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಬಿರುಸಿನ ಪ್ರಚಾರ ಆರಂಭಿಸಿದೆ. ಕಳೆದ 36 ವರ್ಷಗಳ ಶತ್ರುತ್ವವನ್ನು ಬದಿಗೊತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು, ತೆಲಂಗಾಣ ಚುನಾವಣೆಗೆ ಭಾರೀ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.