ನವದೆಹಲಿ: Parliament Session - ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ (Five State Assembly Elections 2022) ಫಲಿತಾಂಶ ಪ್ರಕಟವಾದ ಬಳಿಕ ಬಜೆಟ್ ಅಧಿವೇಶನದ ಎರಡನೇ ಹಂತದ ಕಲಾಪ ಸೋಮವಾರ ಆರಂಭವಾಗಿದೆ. ಅಧಿವೇಶನದ ಆರಂಭದಲ್ಲಿ ಲೋಕಸಭೆಯ ಕಲಾಪದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮಿಸಿದ್ದರು. ಪ್ರಧಾನಿ ಮೋದಿ ಲೋಕಸಭೆಗೆ (Lok Sabha) ಬಂದ ತಕ್ಷಣ ಬಿಜೆಪಿ ಸಂಸದರು ಮೋದಿ-ಮೋದಿ ಘೋಷಣೆಗಳನ್ನು ಮೊಳಗಿಸುವ ಮೂಲಕ ಪ್ರಧಾನಿ ಮೋದಿಯನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಪ್ರಧಾನಿ ಮೋದಿ ಕೂಡ ಅವರಿಗೆ ಕೈಮುಗಿದು ಧನ್ಯವಾದ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ನಿಮ್ಮ Aadhaar card ವಿವರಗಳನ್ನು ಬದಲಿಸುವ ಮೊದಲು ನೆನಪಿರಲಿ ಈ ವಿಷಯಗಳು!


ವಿದೇಶಿ ಪ್ರತಿನಿಧಿಗಳೂ ಉಪಸ್ಥಿತರಿದ್ದರು
ಈ ವೇಳೆ ಕೆಲವು ವಿದೇಶಿ ಪ್ರತಿನಿಧಿಗಳೂ ಸಂಸತ್ತಿನ ಕಲಾಪಗಳನ್ನು ವೀಕ್ಷಿಸಲು ಆಗಮಿಸಿದ್ದರು. ಘೋಷಣೆಗಳು ಮೊಳಗಿದಾಗ ಅವರೂ ಕೂಡ ಈ ಕ್ಷಣವನ್ನು ಕುತೂಹಲದಿಂದ ವಿಕ್ಷೀಸಿದ್ದಾರೆ. ಈ ವೇಳೆ ಲೋಕಸಭೆಯ ಸ್ಪೀಕರ್ ಕೂಡ ಮುಗುಳ್ನಗುತ್ತಿರುವುದು ಕಂಡುಬಂತು. ಗಮನಾರ್ಹವೆಂದರೆ ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ ಮತ್ತು ಪಂಜಾಬ್ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಜಯಗಳಿಸಿದೆ.


March 16 ರಿಂದ 12 ರಿಂದ 14 ವರ್ಷದ ಮಕ್ಕಳಿಗೆ Covid-19 ವ್ಯಾಕ್ಸೀನ್, ವೃದ್ಧರಿಗೆ Booster Dose

ಟ್ವೀಟ್ ಮಾಡಿದ ಅಮಿತ್ ಶಾ
ಸಂಸತ್ತಿನಲ್ಲಿ ಘೋಷಣೆ ಮೊಳಗಿದ ನಂತರ ಗೃಹ ಸಚಿವ ಅಮಿತ್ ಶಾ (Amit Shah) ಕೂಡ ಟ್ವೀಟ್ ಮಾಡಿದ್ದಾರೆ. 'ಸಂಸತ್ತಿನಿಂದ ಬೀದಿಗಳವರೆಗೆ, ಜನರ ಭರವಸೆಗಳು, ಜನರ ಆಕಾಂಕ್ಷೆಗಳು ಮತ್ತು ಸಾರ್ವಜನಿಕ ನಂಬಿಕೆಗೆ ಒಂದೇ ಹೆಸರು... ಮೋದಿ, ಮೋದಿ, ಮೋದಿ' ಎಂದು ಅವರು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.


ಇದನ್ನೂ ಓದಿ-ಉತ್ತರಾಖಂಡ್‌ ಸಿಎಂ ಆಯ್ಕೆ ಕಸರತ್ತು... ಮತ್ತೆ ಶಾಕ್ ಕೊಡುತ್ತಾ ಬಿಜೆಪಿ ಹೈಕಮಾಂಡ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.