ಉತ್ತರಾಖಂಡ್‌ ಸಿಎಂ ಆಯ್ಕೆ ಕಸರತ್ತು... ಮತ್ತೆ ಶಾಕ್ ಕೊಡುತ್ತಾ ಬಿಜೆಪಿ ಹೈಕಮಾಂಡ್!

ಇದೀಗ ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಪುಷ್ಕರ್ ಸಿಂಗ್ ಧಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ಮರಳುವ ಬಗ್ಗೆ ಅನಿಶ್ಚಿತತೆ ಎದುರಾಗಿದ್ದು, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಜೋರಾಗಿದೆ. 

Written by - VIJAY VEARAPPA | Edited by - Ranjitha R K | Last Updated : Mar 14, 2022, 04:19 PM IST
  • ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೋಲು
  • ಮುಖ್ಯಮಂತ್ರಿ ರೇಸ್ ನಲ್ಲಿವೆ ಬಹಳಷ್ಟು ಹೆಸರುಗಳು
  • ಯಾರಾಗುತ್ತಾರೆ ಹೊಸ ಸಿಎಂ ?
ಉತ್ತರಾಖಂಡ್‌ ಸಿಎಂ ಆಯ್ಕೆ ಕಸರತ್ತು... ಮತ್ತೆ ಶಾಕ್ ಕೊಡುತ್ತಾ ಬಿಜೆಪಿ ಹೈಕಮಾಂಡ್! title=
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೋಲು (file photo)

ಬೆಂಗಳೂರು : ಮಾಚ್‌೯ ೧೦ರಂದು ಪ್ರಕಟಗೊಂಡ ಪಂಚರಾಜ್ಯ ಚುನಾವಣೆಯ ಫಲಿತಾಂಶಗಳ ಫಲವಾಗಿ ಬಿಜೆಪಿ (BJP) ನಾಲ್ಕು ರಾಜ್ಯಗಳಲ್ಲಿ ಸರ್ಕಾರ ರಚಿಸುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದ್ದು, ಇದೀಗ ಮುಂದಿನ ಪ್ರಕ್ರಿಯೆಗಳು ನಡೆದಿವೆ. ಉತ್ತರಾಖಂಡದಲ್ಲಿ ಮುಖ್ಯಮಂತ್ರಿ (Uttarakhand CM)ಆಯ್ಕೆ ವಿಚಾರ ತೀವ್ರ ಕುತೂಹಲ ಕೆರಳಿಸಿದೆ.

ಹೌದು, 2017ರಿಂದ 2022ರವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವನ್ನು ಪುಷ್ಕರ್‌ ಸಿಂಗ್‌ ಧಾಮಿ (Pushkar singh Dhami) ಮುಖ್ಯಮಂತ್ರಿಯಾಗಿ ಮುನ್ನಡೆಸಿದ್ರು. ಆದ್ರೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೋಲನುಭವಿಸಿದ್ದಾರೆ. ನಿರ್ಗಮಿತ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕಾಂಗ್ರೆಸ್‌ನ ಭುವನ್ ಕಪ್ರಿ (Bhuwan Kapri) ವಿರುದ್ಧ 6,579 ಮತಗಳಿಂದ ಸೋಲು ಅನುಭವಿಸಿದ್ದಾರೆ. ಆದ್ರೆ ಸದ್ಯ ಹೊಸ ಮುಖ್ಯಮಂತ್ರಿ ಆಯ್ಕೆಯಾಗುವವರೆಗೂ ತಾವೇ ಹಂಗಾಮಿ ಸಿಎಂ ಆಗಿ ಮುಂದುವರೆಯಿರಿ ಎಂದು ರಾಜ್ಯಪಾಲರಾದ ಗುಮಿ೯ತ್‌ ಸಿಂಗ್‌ (Gurmeeth Singh) ಅವರು ಸೂಚನೆ ನೀಡಿದ್ದಾರೆ. ಇದರಿಂದ ಪುಷ್ಕರ್‌ ಸಿಂಗ್‌ ಧಾಮಿ ಸದ್ಯ ಹಂಗಾಮಿ ಸಿಎಂ ಆಗಿ ಕುರ್ಚಿಯಲ್ಲಿದ್ದಾರೆ. ಉತ್ತರಾಖಂಡ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ ಪಕ್ಷವೊಂದು ಎರಡನೇ ಬಾರಿಗೆ ಅಧಿಕಾರ ಉಳಿಸಿಕೊಂಡಿರುವುದು ಇದೇ ಮೊದಲು. ಆದ್ರೆ ಇದೀಗ ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ (Uttarakhand Assembly election) ಸೋತ ನಂತರ ಪುಷ್ಕರ್ ಸಿಂಗ್ ಧಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ಮರಳುವ ಬಗ್ಗೆ ಅನಿಶ್ಚಿತತೆ ಎದುರಾಗಿದ್ದು, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಜೋರಾಗಿದೆ. 

ಇದನ್ನೂ ಓದಿ : UP Police: ಎಮ್ಮೆ ನಂತರ ಈಗ ಮೇಕೆಗಳನ್ನು ಹುಡುಕುತ್ತಿರುವ ಯುಪಿ ಪೊಲೀಸರು!

ಈಗಾಗಲೇ ಮುಖ್ಯಮಂತ್ರಿ ರೇಸ್ ನಲ್ಲಿ ಬಹಳಷ್ಟು ಹೆಸರುಗಳು ಕೇಳಿಬರುತ್ತಿದ್ದು, ಆ ಪೈಕಿ ಚೌಬಟ್ಟಖಾಲ್ ಶಾಸಕ ಸತ್ಪಾಲ್ ಮಹಾರಾಜ್, ಶ್ರೀನಗರ ಗರ್ವಾಲ್ ಶಾಸಕ ಧನ್ ಸಿಂಗ್ ರಾವತ್, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸದ ಮಾಜಿ ಮುಖ್ಯಮಂತ್ರಿ ತ್ರಿವೇದಾ ಸಿಂಗ್ ರಾವತ್ ಮತ್ತು ದಿದಿಹತ್ ಶಾಸಕ ಬಿಷನ್ ಸಿಂಗ್  ಅವರ ಹೆಸರುಗಳು ಪ್ರಮುಖವಾಗಿವೆ. ಕನಿಷ್ಠ ಅರ್ಧ ಡಜನ್ ಮಂದಿ ಧಾಮಿ ಅವರ ಬದಲಿಯಾಗಿ ಸಿಎಂ ಸ್ಥಾನಕ್ಕೆ ಕಸರತ್ತು ನಡೆಸುತ್ತಿದ್ದಾರೆ. ಆದರೆ ಈ ಪೈಕಿ, ತ್ರಿವೇಂದ್ರ ಸಿಂಗ್ ರಾವತ್ (Trivendra Singh Rawat) ಅವರು ತಾವು ಸ್ಪರ್ಧೆಯಿಂದ ಹೊರಗುಳಿದಿರುವುದಾಗಿ ತಿಳಿಸಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ನಿರೀಕ್ಷೆಯು ಹೊರಹೊಮ್ಮಿದಾಗಲೆಲ್ಲಾ ಉತ್ತರಾಖಂಡದಲ್ಲಿ  ನಿರಂತರವಾಗಿ ಊಹಾಪೋಹಗಳು ಸೃಷ್ಟಿಯಾಗುತ್ತಲೇ ಇರುತ್ತದೆ. ಈ ಬಾರಿಯೂ ಕೂಡ ಹಾಗೇ ಆಗಿದೆ. ಆದ್ರೆ ಇಷ್ಟೂ ಸಂದರ್ಭಗಳಲ್ಲೂ ಎಲ್ಲಾ ಸಂಭವನೀಯ ಹೆಸರುಗಳನ್ನು ಪಕ್ಕಕ್ಕಿಟ್ಟು ಅಚ್ಚರಿಯ ಆಯ್ಕೆ ಮಾಡುವಲ್ಲಿಯೇ ಬಿಜೆಪಿ ಪ್ರಯೋಗಗಳನ್ನು ಮಾಡಿದೆ. ಈ ಬಾರಿ ಪಕ್ಷದ ಹೈಕಮಾಂಡ್‌ ಮುಂದಿನ ಸಿಎಂ ಯಾರು ಎಂಬುದನ್ನ ನಿರ್ಧರಿಸುತ್ತೋ ಅಥವಾ ಶಾಸಕಾಂಗ ಸಭೆಯಲ್ಲಿ ಚುನಾಯಿತ ಶಾಸಕರೇ ಅದನ್ನ ನಿರ್ಧರಿಸ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : ಹೋಳಿ ಹಬ್ಬಕ್ಕೂ ಮುನ್ನ ಗ್ರಾಹಕರಿಗೆ ಶಾಕ್!: ಎಲ್ಲಾ ಕಾರುಗಳ ಬೆಲೆ ಹೆಚ್ಚಿಸಿದ ಟಾಟಾ

ಆದಾಗ್ಯೂ ಗೆದ್ದ ಶಾಸಕರು ಒಟ್ಟಾಗಿ ಕುಳಿತು ಸಿಎಂ ಆಗುವ ನಾಯಕನನ್ನು ಆಯ್ಕೆ ಮಾಡುತ್ತಾರೆ ಎನ್ನುವ ಬಿಜೆಪಿ (BJP), ಇಂತಹ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನವನ್ನೂ ಮಾಡಿಲ್ಲ. ಸರ್ಕಾರ ರಚನೆಯ ಬಗ್ಗೆ ಕೇಂದ್ರದ ನಾಯಕತ್ವದಿಂದ ನಮಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಹರಿದ್ವಾರದ ಸ್ಥಾನವನ್ನು ಉಳಿಸಿಕೊಂಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಮದನ್ ಕೌಶಿಕ್ ಹೇಳಿದ್ದಾರೆ. ಧಮಿ ಬಗ್ಗೆ ಕೂಡ ಮಾತನಾಡಿರುವ ಅವರು, ತಮ್ಮ ಸ್ಥಾನವನ್ನು ಕಳೆದುಕೊಂಡಿರಬಹುದು. ಆದರೆ ಅವರು ಜನರ ಹೃದಯವನ್ನು ಗೆದ್ದಿದ್ದಾರೆ ಎಂದು ಹೇಳಿದ್ದಾರೆ. ಜೊತೆಗೆ ಉತ್ತರಾಖಂಡದಲ್ಲಿ (Uttarakhanad)ಪಕ್ಷದ ಗೆಲುವಿಗೆ ಧಮಿ ಅವರ ಯುವ ಮತ್ತು ಕ್ರಿಯಾಶೀಲ ನಾಯಕತ್ವವೇ ಕಾರಣ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಹಾಗಾಗಿ, ಪಕ್ಷವು ಇನ್ನೊಂದು ನಾಯಕತ್ವಕ್ಕೆ ಹೋಗುವ ಬದಲು ಧಾಮಿಯೊಂದಿಗೆ ಮುಂದುವರಿಯಬೇಕು ಎಂದಿದ್ದಾರೆ. 

ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಹೊರಬಿದ್ದ ನಂತರ, ಚಂಪಾವತ್ ಶಾಸಕ ಕೈಲಾಶ್ ಗೆಹ್ಟೋರಿ ಅವರು ಧಾಮಿಗಾಗಿ ತಮ್ಮ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಿದ್ದಾರೆ. ಕಾರಣ ಧಮಿಯವರನ್ನ ಮುಖ್ಯಮಂತ್ರಿಯನ್ನಾಗಿ ಮಾಡಿದರೆ, ಅವರು ಒಂದು ವಿಧಾನಸಭಾ ಸ್ಥಾನದಿಂದ ಗೆಲ್ಲಬೇಕಾಗುತ್ತದೆ. ಮತ್ತೊಂದು ಕಡೆ ದೋಯಿವಾಲಾದಿಂದ ಗೆದ್ದಿರುವ ಬ್ರಿಜ್ ಭೂಷಣ್ ಗೈರೋಲಾ ಅವರು ತಮ್ಮ ರಾಜಕೀಯ ಆಪ್ತ ತ್ರಿವೇಂದ್ರ ಸಿಂಗ್ ರಾವತ್ ಅವರಿಗೆ ಟಿಕೆಟ್ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ತಮ್ಮ ಸ್ಥಾನವನ್ನು ಬಿಟ್ಟುಕೊಡಲು ಮುಂದಾಗಿದ್ದಾರೆ. ಏನೇ ಇರಲಿ 2012ರಿಂದ ಅದೇ ಖತಿಮಾ ಕ್ಷೇತ್ರದಿಂದ ಆಯ್ಕೆಯಾಗುತ್ತಿದ್ದ ಧಮಿ ಅವರು ಈ ಬಾರಿ ಸೋತು ಕ್ಷೇತ್ರ ಕಳೆದುಕೊಂಡಿದ್ದು, ಆ ಮೂಲಕ ಸಿಟ್ಟಿಂಗ್‌ ಸಿಎಂ ಆದರೂ ಚುನಾವಣೆಯಲ್ಲಿ ಪರಾಭವಗೊಂಡ ನಾಯಕರ ಸಾಲಿಗೆ ಧಮಿ ಸೇರ್ಪಡೆಯಾಗಿದ್ದಾರೆ.‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News