ನವದೆಹಲಿ:   2018 ರ ಕೇಂದ್ರ ಬಜೆಟ್ ಅಧಿವೇಶನ  ಕುರಿತು ಸಂಸತ್ತಿನಲ್ಲಿ ಭಾಷಣ ಮಾಡುತ್ತಾ  ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾಂಗ್ರೆಸ್' ನಾಯಕ ಮಲ್ಲಿಕಾರ್ಜುನ್ ಖರ್ಗೆಯವರನ್ನು  ತರಾಟೆಗೆ ತೆಗೆದುಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ನಿನ್ನೆ ದಿನ ಸಂಸತ್ತಿನಲ್ಲಿ  ಲೋಕಸಭೆಯಲ್ಲಿನ ಕಾಂಗ್ರೆಸ್ ನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಭಾಷಣವನ್ನು ಬಶೀರ್ ಭದ್ರ ಶಾಯರಿಯಿಂದ ಆರಂಭಿಸಿದ್ದರು, ಈ ಬಗ್ಗೆ ಪ್ರಸ್ತಾಪಿಸಿರುವ ಮೋದಿಯವರು ಖರ್ಗೆಯವರ ಶಾಯರಿ ಕರ್ನಾಟಕದ ಮುಖ್ಯಮಂತ್ರಿಗಳು ಕೇಳಿಸಿಕೊಂಡಿರಬಹುದು. ಖರ್ಗೆಯವರು ಕರ್ನಾಟಕದ ಜನತೆಯನ್ನುದ್ದೇಶಿಸಿ ಮಾತನಾಡಿದ್ದರಾ ಅಥವಾ ತಮ್ಮದೇ ಸರ್ಕಾರದ ನೀತಿ- ನಿರ್ಧಾರಗಳ ಬಗ್ಗೆ ಭಾಷಣ ಮಾಡಿದ್ದಾರಾ? ನೀವು ದೇಶವನ್ನೇ ವಿಭಜಿಸಿದ್ದೀರಿ ಎಂದು ವ್ಯಂಗ ವಾಡಿದ್ದಾರೆ. ಇನ್ನು ಮುಂದುವರೆದು ದೇಶವನ್ನು  ವಿಭಜನೆ ಮಾಡಿರುವುದು ನಿಮ್ಮ ಇತಿಹಾಸದಲ್ಲಿದೆ .ನಿಮ್ಮ ಈ ಕಾರ್ಯಕ್ಕೆದೇಶದ  125 ಕೋಟಿ ಜನ ಪಾಠ ಕಲಿಸಿದ್ದಾರೆ. ಎಂದರು. 


ಭಾಷಣದೂದ್ದಗಲಕ್ಕೂ ಖರ್ಗೆಯವರನ್ನು ಗುರಿಯಾಗಿಸಿಕೊಂಡಂತೆ ಕಂಡ ಮೋದಿ,ಬೀದರ್-ಕಲಬುರಗಿ 110 ಕಿ.ಮೀ ರೈಲ್ವೇ ಯೋಜನೆಯನ್ನು ಮಂಜೂರು ಮಾಡಿದ್ದು, ವಾಜಪೇಯಿ ಸರ್ಕಾರ ಮತ್ತು  ಆ ಯೋಜನೆಯನ್ನು  ಅದನ್ನು ಪೂರ್ತಿ ಮಾಡಲು ಹಣಕಾಸು ಬಿಡುಗಡೆ ಮಾಡಿದ್ದು ಯಡಿಯೂರಪ್ಪ ಸರ್ಕಾರ ಎಂದು ಮೋದಿ ತಿಳಿಸಿದರು.