ಅಗರ್ತಲಾ: ತ್ರಿಪುರ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದು, ಮಾಣಿಕ್‌ ಸರ್ಕಾರ್ ಅವರ ಸರ್ಕಾರ "ಹೀರಾ'' ಸರ್ಕಾರದಿಂದ ಬದಲಾಗಲಿದೆ ಹೀರಾ ಎಂದರೆ ಹೈವೇ, ಐ-ವೇ (ಡಿಜಿಟಲ್‌ ಕನೆಕ್ಟಿವಿಟಿ), ರೋಡ್‌ ವೇ ಮತ್ತು ಏರ್‌ ವೇ- ಎಂದು ಹೇಳಿದರು. 


COMMERCIAL BREAK
SCROLL TO CONTINUE READING

ಫೆ.18ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ, ಇಂದು ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಣಿಕ್ ಸರ್ಕಾರ್ ಓರ್ವ ಅಜ್ಞಾತ ಮಂತ್ರವಾದಿ ಯಾಗಿದ್ದು, ಶೀಘ್ರದಲ್ಲೇ ಆತನ ಕರಾಳ ಯುಗ ಅಂತ್ಯವಾಗಲಿದೆ ಎಂದು ಹೇಳಿದ್ದಾರೆ.


ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ನೇತೃತ್ವದ ಮಾಣಿಕ್ ಸರ್ಕಾರದಲ್ಲಿ ತ್ರಿಪುರಾ ಜನರು ಕನಿಷ್ಠ ವೇತನವನ್ನೂ ಪಡೆಯಲಾಗುತ್ತಿಲ್ಲ. ಪ್ರಸ್ತುತ ಸರ್ಕಾರವು ರಾಜ್ಯದ ಜನರಿಗೆ ಮೋಸ ಮಾಡಿದೆ ಎಂದು ಆರೋಪಿಸಿದ ಮೋದಿ, ರಾಜ್ಯದಲ್ಲಿ ಈಳನೀ ವೇತನ ಆಯೋಗದ ಶಿಫಾರಸುಗಳನ್ನು ಏಕೆ ಜಾರಿಗೊಳಿಸಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದರು. 


ತ್ರಿಪುರದಲ್ಲಿ ತಮ್ಮ ವಿರುದ್ಧ ಮಾತನಾಡುವವರಲ್ಲಿ ಭಯದ ವಾತಾವರಣವನ್ನು ಸರ್ಕಾರ್ ಸ್ಥಾಪಿಸಿದ್ದರೂ, ಬಿಜೆಪಿಯು ವ್ಯಾಪಾರ, ಪ್ರವಾಸೋದ್ಯಮ, ಯುವಜನರ ತರಬೇತಿಗೆ ಹೆಚ್ಚಿನ ಆಧ್ಯತೆ ನೀಡಿದೆ. ಅಲ್ಲದೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈಶಾನ್ಯ ಭಾರತದ ರಾಜ್ಯಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದರು.