ಮಾನ್ಸೂನ್ 2020: ದೇಶಾದ್ಯಂತ ಈ ಪ್ರದೇಶಗಳಲ್ಲಿ ಉತ್ತಮ ಮಳೆ
ಮಾನ್ಸೂನ್ ಸಾಮಾನ್ಯವಾಗಿ ಜುಲೈ ಮೊದಲ ವಾರದವರೆಗೆ ದೇಶದ ಎಲ್ಲಾ ಭಾಗಗಳಿಗೂ ತಲುಪುತ್ತದೆ.
ನವದೆಹಲಿ: ನಿರೀಕ್ಷಿತ ಅವಧಿಗೂ ಮೊದಲೇ ನೈಋತ್ಯ ಮಾನ್ಸೂನ್ ಇಡೀ ದೇಶವನ್ನು ತಲುಪಿದ್ದು ದೇಶಾದ್ಯಂತ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ.
2020 ರ ಜೂನ್ 26 ರ ಹೊತ್ತಿಗೆ ಮಾನ್ಸೂನ್ ಇಡೀ ಭಾರತವನ್ನು ಆವರಿಸಿದೆ ಎಂದು ಐಎಂಡಿಯ ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ. ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಉಳಿದ ಭಾಗಗಳಲ್ಲಿ ಕೂಡ ಉತ್ತಮ ಮಳೆಯಾಗುತ್ತಿದೆ ಎಂದವರು ಮಾಹಿತಿ ನೀಡಿದ್ದಾರೆ.
ಮಾನ್ಸೂನ್ ಸಾಮಾನ್ಯವಾಗಿ ಜುಲೈ ಮೊದಲ ವಾರದವರೆಗೆ ದೇಶದ ಎಲ್ಲಾ ಭಾಗಗಳಿಗೂ ತಲುಪುತ್ತದೆ, ಆದರೆ ಈ ಬಾರಿ ಅರೇಬಿಯನ್ ಸಮುದ್ರದ ಮೇಲೆ ಚಂಡಮಾರುತದ ಪುನರುತ್ಥಾನ ಮತ್ತು ಕೇರಳದಲ್ಲಿ ಮಾನ್ಸೂನ್ ಪ್ರಾರಂಭ ಮತ್ತು ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಚಂಡಮಾರುತದಿಂದಾಗಿ ಮಾನ್ಸೂನ್ ವೇಗವಾಗಿ ಚಲಿಸಲು ಸಹಾಯ ಮಾಡಿದೆ ಎಂದವರು ತಿಳಿಸಿದ್ದಾರೆ.
ಕೇರಳದಲ್ಲಿ ಕದ ತಟ್ಟಿದ MONSOON, ನಿಮ್ಮ ಪ್ರದೇಶದಲ್ಲಿ ಯಾವಾಗ ಮಳೆಯ ಸಿಂಚನ, ಇಲ್ಲಿದೆ IMD ಅಪ್ಡೇಟ್
ರಾಷ್ಟ್ರ ರಾಜಧಾನಿ ಗುರುವಾರ ತನ್ನ ಮೊದಲ ಮಾನ್ಸೂನ್ ಮಳೆಯಾಗಿದೆ. ಈ ವರ್ಷದ ಆರಂಭದಲ್ಲಿ ಐಎಂಡಿ ತನ್ನ ಅಂದಾಜಿನ ಪ್ರಕಾರ ಮಾನ್ಸೂನ್ ಜೂನ್ 27 ರಂದು ದೆಹಲಿಯನ್ನು ತಲುಪಲಿದೆ. 2019 ರಲ್ಲಿ ಮಾನ್ಸೂನ್ ಜೂನ್ 29 ರಂದು ರಾಜಧಾನಿಯಲ್ಲಿ ಬಡಿದಿದೆ. ಕಳೆದ ಕೆಲವು ವರ್ಷಗಳಲ್ಲಿ ಮಾನ್ಸೂನ್ ನಿರೀಕ್ಷಿತ ದಿನಾಂಕಕ್ಕಿಂತ ಮೊದಲು ನಗರವನ್ನು ತಲುಪಿದೆ ಎಂದವರು ತಿಳಿಸಿದರು.
ನೈಋತ್ಯ ಮಾನ್ಸೂನ್ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದು ಐಎಂಡಿ ಈ ಹಿಂದೆ ಹೇಳಿದೆ. ಮಾನ್ಸೂನ್ ಪೂರ್ವ ಉತ್ತರ ಪ್ರದೇಶವನ್ನು ತಲುಪಿದೆ. ಜೂನ್ 23 ರಂದು ಇದು ಉತ್ತರಾಖಂಡ ಮತ್ತು ಮಧ್ಯಪ್ರದೇಶದ ಕೆಲವು ಭಾಗಗಳನ್ನು ತಲುಪಲಿದೆ.
ಹರಿಯಾಣ (Haryana), ಚಂಡೀಗಢ (Chandigarh) ಮತ್ತು ದೆಹಲಿ (Delhi) ಭಾಗಗಳಲ್ಲಿ ಜೂನ್ 24 ಮತ್ತು 25 ರಂದು ಮುಂಗಾರು ಪೂರ್ವದ ಮಳೆಯ ಮುನ್ಸೂಚನೆ ನೀಡಲಾಗಿದೆ.
ಜೂನ್ 29 ರವರೆಗೆ ಭಾರಿ ಮಳೆಯ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು, ಪ್ರವಾಹ ಎಚ್ಚರಿಕೆಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಹಾರ ವಿಪತ್ತು ನಿರ್ವಹಣಾ ಇಲಾಖೆ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.