ಕೇರಳದಲ್ಲಿ ಕದ ತಟ್ಟಿದ MONSOON, ನಿಮ್ಮ ಪ್ರದೇಶದಲ್ಲಿ ಯಾವಾಗ ಮಳೆಯ ಸಿಂಚನ, ಇಲ್ಲಿದೆ IMD ಅಪ್ಡೇಟ್

ನೈಋತ್ಯ ಮಾನ್ಸೂನ್ ಅಂದುಕೊಂಡಂತೆ ಕೇರಳದಲ್ಲಿ ಕದ ತಟ್ಟಿದೆ. ಈ ಕುರಿತು ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ನೈಋತ್ಯ ಮಾನ್ಸೂನ್ ಕೇರಳಕ್ಕೆ ಎಂಟ್ರಿ ಹೊಡೆದಿದೆ.  

Updated: Jun 1, 2020 , 02:47 PM IST
ಕೇರಳದಲ್ಲಿ ಕದ ತಟ್ಟಿದ MONSOON, ನಿಮ್ಮ ಪ್ರದೇಶದಲ್ಲಿ ಯಾವಾಗ ಮಳೆಯ ಸಿಂಚನ, ಇಲ್ಲಿದೆ IMD ಅಪ್ಡೇಟ್

ನವದೆಹಲಿ: ನೈಋತ್ಯ ಮಾನ್ಸೂನ್ ಅಂದುಕೊಂಡಂತೆ ಕೇರಳದಲ್ಲಿ ಎಂಟ್ರಿ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ಹವಾಮಾನ ಇಲಾಖೆ ಕೇರಳದ ಹೆಚ್ಚಿನ ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಾಗಿದೆ. ಅಷ್ಟೇ ಅಲ್ಲ ಮುಂದಿನ ಕೆಲವೇ ಗಂಟೆಗಳಲ್ಲಿ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಜೂನ್ 1 ರಂದು ಕೇರಳಕ್ಕೆ ಮಾನ್ಸೂನ್ ಆಗಮನವನ್ನು ಐಎಂಡಿ ಖಚಿತಪಡಿಸಿದೆ. ಏತನ್ಮಧ್ಯೆ, ಮಳೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಕೇರಳದ ಕೆಲವು ಪ್ರದೇಶಗಳಲ್ಲಿ ಅಲರ್ಟ್ ಜಾರಿಗೊಳಿಸಲಾಗಿದೆ. ಇದೇ ವೇಳೆ, ಐಎಂಡಿ ತನ್ನ ವೆಬ್‌ಸೈಟ್‌ನಲ್ಲಿ ದೇಶದ ವಿವಿಧ ಪ್ರದೇಶಗಳಲ್ಲಿ ಮಾನ್ಸೂನ್ ಆಗಮನದ ದಿನಾಂಕವನ್ನು ಕೂಡ ಅಪ್ಡೇಟ್ ಮಾಡಿದೆ.

ಸದ್ಯ ಕೇರಳದ ಬಹುತೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ, ಇದರಿಂದಾಗಿ ತಾಪಮಾನದಲ್ಲಿ ಗಮನಾರ್ಹ ಕುಸಿತ ದಾಖಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ತಿರುವನಂತಪುರದಲ್ಲಿ ದಿನದ ಉಷ್ಣತೆಯು 25 ಡಿಗ್ರಿಗೆ ಇಳಿಕೆಯಾಗಿದೆ. ಭಾರಿ ಮಳೆಯ ಮಧ್ಯೆ, ರಾಜ್ಯದ ಹವಾಮಾನ ಇಲಾಖೆ (ಐಎಂಡಿ) ರಾಜ್ಯದ 9 ಜಿಲ್ಲೆಗಳಿಗೆ Yellow Alert ಜಾರಿಗೊಳಿಸಿದೆ. ತಿರುವನಂತಪುರಂ, ಕೊಲ್ಲಂ, ಪಥನಮತ್ತಟ್ಟ, ಆಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಈ ಎಚ್ಚರಿಕೆ ನೀಡಿದೆ. ದಕ್ಷಿಣ ಕರಾವಳಿ ಪ್ರದೇಶಗಳಾದ ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ.

ಈ ಬಾರಿ ಮಾನ್ಸೂನ್ ಕೇರಳಕ್ಕೆ ಸ್ವಲ್ಪ ತಡವಾಗಿ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಕೆಲವು ದಿನಗಳ ಹಿಂದೆಯಷ್ಟೇ ತನ್ನ ಮುನ್ಸೂಚನೆಯಲ್ಲಿ ತಿಳಿಸಿತ್ತು. ಈ ವರ್ಷ ಕೇರಳದಲ್ಲಿ ಮಾನ್ಸೂನ್ ಜೂನ್ 5 ರವರೆಗೆ 4 ದಿನ ವಿಳಂಬವಾಗಿ ಎಂಟ್ರಿ ನೀಡಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿತ್ತು.

ನಿಮ್ಮ ಪ್ರದೇಶಕ್ಕೆ ಮಾನ್ಸೂನ್ ಯಾವಾಗ ತಲುಪಲಿದೆ
ಜೂನ್ 1: ಕೇರಳ, ಲಕ್ಷದೀಪ್, ಅಂಡಮಾನ್
ಜೂನ್ 1 ರಿಂದ ಜೂನ್ 5 ರವರೆಗೆ: ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ
ಜೂನ್ 5 ರಿಂದ ಜೂನ್ 10 ರವರೆಗೆ: ಮಧ್ಯ ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ
ಜೂನ್ 10 ರಿಂದ 15: ಮಹಾರಾಷ್ಟ್ರ, ಒಡಿಶಾ, ಚತ್ತೀಸ್ಗಡ ಮತ್ತು ಮಧ್ಯಪ್ರದೇಶದ ತಗ್ಗು ಪ್ರದೇಶ, ಜಾರ್ಖಂಡ್, ಅರ್ಧ ಬಿಹಾರಕ್ಕೆ ತಲುಪಲಿದೆ.
ಜೂನ್ 15 ರಿಂದ 20: ಗುಜರಾತ್ ನ ಕೆಳಭಾಗ, ಮಧ್ಯಪ್ರದೇಶ, ಚತ್ತೀಸ್ಗಡ, ಪೂರ್ವ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ
ಜೂನ್ 20 ರಿಂದ 25: ಸಂಪೂರ್ಣ ಗುಜರಾತ್, ಪಶ್ಚಿಮ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ
ಜೂನ್ 25 ರಿಂದ 30: ರಾಜಸ್ಥಾನ, ದೆಹಲಿ, ಹರಿಯಾಣ, ಪಂಜಾಬ್
ಜೂನ್ 30 ರಿಂದ ಜುಲೈ 5: ಸಂಪೂರ್ಣ ಭಾರತವನ್ನು ಆವರಿಸಲಿದೆ.