ಜೂನ್ 29ರಿಂದ ದೆಹಲಿಗೆ ಆಗಮಿಸಲಿದೆ ಮಾನ್ಸೂನ್
ದೆಹಲಿ ಸೇರಿದಂತೆ ಉತ್ತರ ಭಾರತದ ಜೂನ್ 29 ರಿಂದ ಜುಲೈ 1ರ ನಡುವೆ ಹೆಚ್ಚಿನ ಭಾಗವನ್ನು ತಲುಪಲಿದೆ.
ನವದೆಹಲಿ: ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಜೂನ್ 29 ರಿಂದ ಜುಲೈ 1ರ ನಡುವೆ ವಾಯುವ್ಯ ಮಾನ್ಸೂನ್ ಆಗಮಿಸುವ ನಿರೀಕ್ಷೆ ಇದೆ. ಶೀಘ್ರದಲ್ಲೇ ಮಾನ್ಸೂನ್ ಉತ್ತರ ಭಾರತದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಇದು ದೆಹಲಿಯ ನಿವಾಸಿಗಳಿಗೆ ಪರಿಹಾರವನ್ನು ತರಲಿದೆ ಎಂದು ನಿರೀಕ್ಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮತ್ತು ಖಾಸಗಿ ಹವಾಮಾನ ಮುನ್ಸೂಚನೆ ಏಜೆನ್ಸಿಯ ಸ್ಕೈಮೇಟ್ ಪ್ರಕಾರ ಮಾನ್ಸೂನ್ ಮಂಗಳವಾರ ಮತ್ತು ಬುಧವಾರ ದೆಹಲಿಯನ್ನು ಪ್ರವೇಶಿಸಲಿದೆ. ಆದರೆ ದೀರ್ಘಕಾಲೀನ ಸರಾಸರಿ (ಎಲ್ಪಿಎ) ಮಳೆಯು ಸ್ಪಷ್ಟವಾಗಿಲ್ಲ.
ಜೂನ್ 29 ಮತ್ತು ಜುಲೈ 1 ರ ನಡುವೆ ವಾಯವ್ಯ ಮಾನ್ಸೂನ್ ನಿರೀಕ್ಷೆಯಿದೆ ಎಂದು ಐಎಂಡಿ ಹಿರಿಯ ವಿಜ್ಞಾನಿ ಎಮ್ ಮೋಹಪಾತ್ರ ತಿಳಿಸಿದ್ದಾರೆ. ಪೂರ್ವ ಮಾನ್ಸೂನ್ ಮಳೆ ಜೂನ್ 27 ರ ಹೊತ್ತಿಗೆ ಸಂಭವಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.
ಮಾನ್ಸೂನ್ ಪುನಃ ಸಕ್ರಿಯಗೊಂಡಿದೆ ಮತ್ತು ಉತ್ತರದ ಕಡೆಗೆ ಚಲಿಸುತ್ತಿದೆ ಎಂದು ಸ್ಕೈಮೇಟ್ ನಿರ್ದೇಶಕ ಮಹೇಶ್ ಪಲಾವಾತ್ ಹೇಳಿದರು. ಇದು ಗುಜರಾತ್, ಮಧ್ಯಪ್ರದೇಶ, ವಿದರ್ಭ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಹಲವಾರು ಭಾಗಗಳಲ್ಲಿ ಆಗಮಿಸಲಿದೆ. ಮಾನ್ಸೂನ್ ಉತ್ತರಕ್ಕೆ ಸಾಗುತ್ತಿರುವುದು ಉತ್ತಮ ಚಿಹ್ನೆ, ಈ ವೇಳೆಯಲ್ಲಿ ಮಾನ್ಸೂನ್ ದೆಹಲಿಯಲ್ಲಿ ನಿಗದಿತ ಸಮಯಕ್ಕೆ ತಲುಪಲಿದೆ ಎಂದು ಅವರು ಹೇಳಿದರು.
ಜೂನ್ ಮೊದಲ ಎರಡು ವಾರಗಳಲ್ಲಿ ಮಾನ್ಸೂನ್ ಮಳೆ 19% ನಷ್ಟಿತ್ತು, ಆದರೆ ಜೂನ್ 13 ರ ನಂತರ ಜೂನ್ 19 ರ ವೇಳೆಗೆ ಇದು 4% ನಷ್ಟಿತ್ತು. ಮಾನ್ಸೂನ್ ಮಸುಕಾಗಿದ್ದರೂ ಪಶ್ಚಿಮ ಭಾಗದ ಕಡಲತೀರಗಳು ಮತ್ತು ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ.