ನವದೆಹಲಿ: ಮುಂಗಾರು ಮಳೆ ಪ್ರಾರಂಭವಾಗಲು ಕೆಲವೇ ದಿನಗಳು ಮಾತ್ರ ಉಳಿದಿವೆ. ಏತನ್ಮಧ್ಯೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾನ್ಸೂನ್ ಕುರಿತು ತನ್ನ 2ನೇ ಮುನ್ಸೂಚನೆಯನ್ನು ಬಿಡುಗಡೆ ಮಾಡಿದೆ. ಜೂನ್ 4ರಂದು ಕೇರಳಕ್ಕೆ ಮುಂಗಾರು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನಶಾಸ್ತ್ರಜ್ಞರ ಪ್ರಕಾರ, ಹವಾಮಾನವು ಮುಂಗಾರಿಗೆ ಅನುಕೂಲಕರವಾಗಿದೆ. ಅದೇ ರೀತಿ ಮುಂದಿನ 2-3 ದಿನಗಳಲ್ಲಿ ಉತ್ತರ ಭಾರತದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ. ಈ ವರ್ಷ ಇಡೀ ಮುಂಗಾರು ಋತುವಿನಲ್ಲಿ ಸರಾಸರಿ ಮಳೆಯ ಶೇ.96-104ರಷ್ಟು ನಿರೀಕ್ಷಿಸಲಾಗಿದೆ.


COMMERCIAL BREAK
SCROLL TO CONTINUE READING

ಮುಂಗಾರು ಪೂರ್ವ ಮಳೆ


ಮಾನ್ಸೂನ್‌ನ ಪ್ರಗತಿಗೆ ಉತ್ತಮ ಪರಿಸ್ಥಿತಿಗಳು ಕಂಡುಬರುತ್ತಿವೆ ಎಂದು ಹವಾಮಾನ ಇಲಾಖೆ ಹೇಳಿದೆ. ನಾವು ಮೇ ತಿಂಗಳ ಬಗ್ಗೆ ಹೇಳುವುದಾದರೆ ಈಶಾನ್ಯ ರಾಜ್ಯಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಇದರ ಹೊರತಾಗಿಯೂ ದೇಶದ ಬಹುತೇಕ ಭಾಗಗಳಲ್ಲಿ ಉತ್ತಮ ಪೂರ್ವ ಮುಂಗಾರು ಮಳೆಯಾಗುವ ಸಾಧ್ಯತೆಯಿದೆ. IMD ಪ್ರಕಾರ ಮುಂಗಾರು ಪೂರ್ವ ಋತುವಿನಲ್ಲಿ ಈ ವರ್ಷ ಶಾಖದ ಅಲೆಯ ಪರಿಣಾಮವು ಹಿಂದಿನ ವರ್ಷಗಳಿಗೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ.


ಇದನ್ನೂ ಓದಿ: Shocking News: ಸಂಗಾತಿಯನ್ನು ಕೊಂದು ದೇಹ ತುಂಡರಿಸಿ ಫ್ರಿಡ್ಜ್‌ನಲ್ಲಿ ಇಟ್ಟ ವ್ಯಕ್ತಿ!   


ಜೂನ್‍ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ


IMD ಪ್ರಕಾರ ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಬಹುದು. ಈ ಅವಧಿಯಲ್ಲಿ ಸಾಮಾನ್ಯ ಮಳೆಯ ಶೇ.96ರಷ್ಟು ಎಂದು ಅಂದಾಜಿಸಲಾಗಿದೆ. ಸೆಪ್ಟೆಂಬರ್‍ವರೆಗೆ ಇಡೀ ದೇಶದಲ್ಲಿ ಮುಂಗಾರು ಅಬ್ಬರಿಸಲಿದೆ.


ಮುಂಗಾರು ಮಳೆಯ ಅವಧಿ


ಕೇರಳದಿಂದ ದೇಶದಲ್ಲಿ ಮುಂಗಾರು ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಮುಂಗಾರು ಇಲ್ಲಿಗೆ ಮೇ 25ರಿಂದ ಜೂನ್ 1ರವರೆಗೆ ತಲುಪುತ್ತದೆ. ವಿಳಂಬದ ಸಂದರ್ಭದಲ್ಲಿ 4-6 ದಿನಗಳ ವ್ಯತ್ಯಾಸವಿರಬಹುದು. ಇದಾದ ನಂತರ ತಮಿಳುನಾಡು, ಬಂಗಾಳಕೊಲ್ಲಿ, ಕೊಂಕಣದಲ್ಲಿ ಜೂನ್ 15ರವರೆಗೆ ಮತ್ತಷ್ಟು ಮುಂಗಾರು ಚುರುಕಾಗುತ್ತದೆ. ಮುಂದೆ ಅದು ಗುಜರಾತ್ ಮೂಲಕ ಕರ್ನಾಟಕದ ನಂತರ ಪಶ್ಚಿಮ ಬೆಲ್ಟ್ ತಲುಪುತ್ತದೆ.


ಇದನ್ನೂ ಓದಿ: Viral Video: ಪಾರ್ಕಿಂಗ್ ಏರಿಯಾದಲ್ಲಿ ಮಲಗಿಸಿದ್ದ 3 ವರ್ಷದ ಮಗು ಮೇಲೆ ಹರಿದ ಕಾರು!


ಎಲ್ ನಿನೊ ಆತಂಕ!


2023ರಲ್ಲಿ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ವರ್ಷ ವಾಯವ್ಯ ಭಾರತದಲ್ಲಿ ಶೇ.92ರಷ್ಟು ವಾಡಿಕೆ ಮಳೆಯಾಗುವ ಸಾಧ್ಯತೆ ಇದೆ. ಮಾನ್ಸೂನ್ ಸಮಯದಲ್ಲಿ ಎಲ್ ನಿನೊ ಹೆಚ್ಚಿನ ಸಂಭವನೀಯತೆ ಇರುತ್ತದೆ. ಎಲ್ ನಿನೊದ ಅಪಾಯವು 2024ರ ಅಂತ್ಯದವರೆಗೂ ಉಳಿಯಬಹುದು ಎನ್ನಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.