ಹೈದರಾಬಾದ್: ಪಾರ್ಕಿಂಗ್ ಏರಿಯಾದಲ್ಲಿ ಮಲಗಿದ್ದ 3 ವರ್ಷದ ಮಗುವಿನ ಮೇಲೆ SUV ಕಾರು ಹರಿದು ಮಗು ಮೃತಪಟ್ಟಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ಕಲಬುರಗಿಯ ಶಹಬಾದ್ ಮೂಲದ ಕವಿತಾ ಎಂಬುವರು ತನ್ನ 2 ಮಕ್ಕಳೊಂದಿಗೆ ಕೆಲಸ ಹುಡುಕಿಕೊಂಡು ಹೈದರಬಾದ್‍ಗೆ ಬಂದಿದ್ದರು. ಬುಧವಾರ ಬೆಳಗ್ಗೆ 8 ಗಂಟೆಗೆ ಹಯತ್‌ನಗರದ ಲೆಕ್ಚರ್ಸ್ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ಕೆಲಸ ಮಾಡಲು ತೆರಳಿದ್ದರು. ಮಧ್ಯಾಹ್ನ ಊಟದ ಬಳಿಕ ತನ್ನ 3 ವರ್ಷದ ಮಗು ಲಕ್ಷ್ಮೀಯನ್ನು ಸೆಕೆ ಅಂತಾ ಹೇಳಿ ಅಪಾರ್ಟ್‍ಮೆಂಟ್‍ನ ಬೇಸ್‍ಮೆಂಟ್‍ನಲ್ಲಿ ಮಲಗಿಸಿದ್ದರು.
ಇದನ್ನೂ ಓದಿ: Viral Video: ಪ್ರಿಯಕರಿನಿಗಾಗಿ ನಡುಬೀದಿಯಲ್ಲೇ ಮಾರಾಮಾರಿ, ಒಬ್ಬನಿಗೆ ಇಷ್ಟೊಂದು ಹುಡ್ಗೀರಾ?
ಪಾರ್ಕಿಂಗ್ ಏರಿಯಾದಲ್ಲಿ ಮಗು ಮಲಗಿ ಗಾಢ ನಿದ್ದೆಯಲ್ಲಿತ್ತು. ಈ ವೇಳೆ ಪಾರ್ಕ್ ಮಾಡಲು ಅಂತಾ ಬಂದ SUV ಕಾರು ಮಲಗಿದ್ದ ಮಗುವಿನ ಮೇಲೆ ಹರಿದಿದೆ. ಪರಿಣಾಮ ತಲೆಗೆ ತೀವ್ರ ಏಟಾಗಿ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
#Hyderabad: In a tragedy incident reported in Hayat Nagar RTC Colony, a 2 year old died after a car ran over it.
The mother works at a construction site and left the baby Lakshmi,in a nearby parking area. Unfortunately, a car ran over the baby, resulting in the child's death. pic.twitter.com/kq4eJ2mVie
— NewsMeter (@NewsMeter_In) May 24, 2023
ಘಟನೆ ಸಂಬಂಧ ಮಗುವಿನ ತಾಯಿ ಕವಿತಾ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿಯಲ್ಲಿ ಈ ಆಘಾತಕಾರಿ ಘಟನೆಯ ವಿಡಿಯೋ ರೆಕಾರ್ಡ್ ಆಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Shocking News: ಸಂಗಾತಿಯನ್ನು ಕೊಂದು ದೇಹ ತುಂಡರಿಸಿ ಫ್ರಿಡ್ಜ್‌ನಲ್ಲಿ ಇಟ್ಟ ವ್ಯಕ್ತಿ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.