ಪಾಟ್ನಾ: ಒಂದು ಕಡೆ ಬಿಹಾರದಲ್ಲಿ ಜನರು ತೀವ್ರ ಶಾಖದ ಭೀತಿಯಿಂದ ನಿರಂತರವಾಗಿ ತತ್ತರಿಸುತ್ತಿದ್ದಾರೆ ಮತ್ತು ಮತ್ತೊಂದೆಡೆ, ಮೆದುಳು ಜ್ವರದಿಂದಾಗಿ ಮಕ್ಕಳ ಸಾವಿನ ಪ್ರಮಾಣವು ಸ್ಥಿರವಾಗಿ ಹೆಚ್ಚುತ್ತಿದೆ. ಮುಜಾಫರಪುರ ಜಿಲ್ಲೆಯಲ್ಲಿ ಇದುವರೆಗೆ 110  ಮಕ್ಕಳು ಸಾವನ್ನಪ್ಪಿದ್ದಾರೆ. 


COMMERCIAL BREAK
SCROLL TO CONTINUE READING

ಆರೋಗ್ಯ ಸಚಿವ ಹರ್ಷ್ ವರ್ಧನ್ ಭಾನುವಾರ ಮುಜಾಫರ್ಪುರಕ್ಕೆ ಭೇಟಿ ನೀಡಿದರು. ಭೇಟಿಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಹರ್ಷ್ ವರ್ಧನ್, "ರೋಗವನ್ನು ನಿಯಂತ್ರಿಸಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ. ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲಾಗುವುದು" ಎಂದು ಹೇಳಿದರು.


ಮತ್ತೊಂದೆಡೆ, ಬಿಹಾರದ ಜನರು ಬಿಸಿಲಿನ ತಾಪಕ್ಕೆ ತತ್ತರಿಸಿದ್ದಾರೆ. ಈ ಕಾರಣದಿಂದ ಗಯಾದಲ್ಲಿ 18 ಜನರು ಮೃತಪಟ್ಟಿದ್ದಾರೆ. ಗಯಾ ನಾರಾಯಣ್ ಮಗಧ ವೈದ್ಯಕೀಯ ಆಸ್ಪತ್ರೆಯಲ್ಲಿ 18 ಮಂದಿ ಸಾವನ್ನಪ್ಪಿದ ಸುದ್ದಿ ಸ್ಥಳೀಯ ಜನರನ್ನು ಬೆಚ್ಚಿಬೀಳಿಸಿದೆ.


ಬಿಹಾರದ ಅತ್ಯಂತ ಪ್ರಸಿದ್ಧ ಸ್ಥಳಗಳಲ್ಲಿ ಗಯಾ ಕೂಡ ಒಂದಾಗಿದೆ. ನಗರದ ಅನೇಕ ಪ್ರಮುಖ ರಸ್ತೆಗಳು ಮಧ್ಯಾಹ್ನದ ನಂತರ ನಿರ್ಜನವಾಗಿದ್ದವು. ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಕೂಡ ಹೆಚ್ಚಿನ ಓಡಾಟ ಕಂಡುಬರುವುದಿಲ್ಲ. ಯಾವುದೇ ಪ್ರಯಾಣಿಕರು ಮಧ್ಯಾಹ್ನ ಬಸ್‌ನಲ್ಲಿ ಪ್ರಯಾಣಿಸುತ್ತಿಲ್ಲ. 


ಭಾನುವಾರ, ಬಿಹಾರದಲ್ಲಿ 30 ಜನ ಮೃತಪಟ್ಟಿದ್ದಾರೆ. ಅದೇ ಸಮಯದಲ್ಲಿ, ಅನೇಕ ಸತ್ತವರ ಹೆಸರನ್ನು ಆಡಳಿತವು ನೋಂದಾಯಿಸಿಲ್ಲ ಎಂದು ಜನರು ಆರೋಪಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಮೃತಪಟ್ಟವರ ಹೆಸರು ಸಹ ನೋಂದಣಿಯಾಗಿಲ್ಲ.