ನವದೆಹಲಿ: ರಾಜ್ಯಸಭೆಯ 51 ಕ್ಕೂ ಹೆಚ್ಚು ಸದಸ್ಯರು 2020 ರ ಏಪ್ರಿಲ್‌ನಲ್ಲಿ ನಿವೃತ್ತರಾಗಲಿದ್ದಾರೆ, ಇದರಲ್ಲಿ ರಾಜ್ಯಸಭೆಯ ಉಪಾಧ್ಯಕ್ಷ ಹರಿವನ್ಶ್, ಹಿರಿಯ ಎನ್‌ಸಿಪಿ ನಾಯಕ ಶರದ್ ಪವಾರ್ ಮತ್ತು ಕೇಂದ್ರ ಸಮಾಜ ಕಲ್ಯಾಣ ಸಚಿವ ರಾಮದಾಸ್ ಅಥವಾಲೆ ಸೇರಿದ್ದಾರೆ.


COMMERCIAL BREAK
SCROLL TO CONTINUE READING

ಮಹಾರಾಷ್ಟ್ರದಿಂದ ಏಳು ರಾಜ್ಯಸಭಾ ಸ್ಥಾನಗಳು ಖಾಲಿ ಇದ್ದರೆ, ತಮಿಳುನಾಡಿನ ಆರು ಸದಸ್ಯರು ನಿವೃತ್ತರಾಗಲಿದ್ದಾರೆ. ಇದಲ್ಲದೆ, ಪಶ್ಚಿಮ ಬಂಗಾಳ ಮತ್ತು ಬಿಹಾರದಿಂದ ತಲಾ 5, ಗುಜರಾತ್ ಮತ್ತು ಆಂಧ್ರಪ್ರದೇಶದಿಂದ ತಲಾ ನಾಲ್ಕು, ರಾಜಸ್ಥಾನ, ಒಡಿಶಾ ಮತ್ತು ಮಧ್ಯಪ್ರದೇಶದಿಂದ ತಲಾ ಮೂರು ಮತ್ತು ತೆಲಂಗಾಣ, ಜಾರ್ಖಂಡ್ ಮತ್ತು ಛತ್ತೀಸ್‌ಗ ಗಡ್ ದಿಂದ ತಲಾ ಎರಡು ಸ್ಥಾನಗಳು ಖಾಲಿಯಾಗಲಿವೆ.


ಹಿಮಾಚಲ ಪ್ರದೇಶ, ಹರಿಯಾಣ, ಅಸ್ಸಾಂ, ಮೇಘಾಲಯ, ಮಣಿಪುರದಿಂದ ತಲಾ ಒಬ್ಬರು ನಿವೃತ್ತಿ ಹೊಂದಲಿದ್ದಾರೆ.ಈ ವರ್ಷ ಮೇಲ್ಮನೆಯ ಒಟ್ಟು 69 ಸದಸ್ಯರು ನಿವೃತ್ತರಾಗಲಿದ್ದು, ಮತ್ತೆ ಸದನಕ್ಕೆ ಪ್ರವೇಶಿಸಲು ಸುಮಾರು 51 ಸದಸ್ಯರನ್ನು ಮರು ಆಯ್ಕೆ ಮಾಡಬೇಕಾಗಿದೆ.


ರಾಜ್ಯಸಭೆಯ ಗರಿಷ್ಠ ಶಕ್ತಿ 245 ಆಗಿದ್ದು,  233 ಸದಸ್ಯರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳಾಗಿದ್ದರೆ, 12 ಜನರನ್ನು ರಾಷ್ಟ್ರಪತಿಗಳು ನಾಮನಿರ್ದೇಶನ ಮಾಡಿರುತ್ತಾರೆ.