ಛಾಪ್ರಾ: ಸಿಕ್ಕಾಪಟ್ಟೆ ಅಳುತ್ತಿದ್ದ ಮಗುವನ್ನು ಸುಮ್ಮನಿರಿಸಲು ಸಾಧ್ಯವಾಗದ ತಾಯಿಯೊಬ್ಬಳು ಅದರ ತುಟಿಗೆ ಫೆವಿಕ್ವಿಕ್ ಹಚ್ಚಿದ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಎಎನ್ಐ ವರದಿ ಮಾಡಿದ್ದು, "ಹೊರಗಡೆ ಕೆಲಸ ಮುಗಿಸಿ ಮನೆಗೆ ಬಂದಾಗ ಮಗು ಸುಮ್ಮನಿರುವುದು  ನೋಡಿ ಅನುಮಾನ ಬಂತು. ಹತ್ತಿರ ಹೋಗಿ ನೋಡಿದಾಗ ಮಗನ ಬಾಯಿಂದ ನೊರೆ ಬರುತ್ತಿರುವುದು ಕಾಣಿಸಿತು. ಈ ಬಗ್ಗೆ ಪತ್ನಿ ಶೋಭಾಳನ್ನು ಪ್ರಶ್ನಿಸಿದಾಗ, ಮಗ ಸಿಕ್ಕಾಪಟ್ಟೆ ಅಳುತ್ತಿದ್ದ. ಹಾಗಾಗಿ ಬಾಯಿಗೆ ಗಮ್ ಹಾಕಿದ್ದಾಗಿ ತಿಳಿಸಿದಳು" ಎಂದು ಮಗುವಿನ ತಂದೆ ತಿಳಿಸಿದ್ದಾರೆ. 


ಬಳಿಕ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗು ಅಪಾಯದಿಂದ ಪಾರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.