ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಮೋಟಾರು ವಾಹನ ತಿದ್ದುಪಡಿ ಮಸೂದೆ 2019 ಅನ್ನು ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಪರಿಷ್ಕೃತ ಮಸೂದೆಯ ಹಲವು ನಿಬಂಧನೆಗಳು 2019ರ ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿವೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಹೊಸ ಕಾನೂನು ಭಾರಿ ದಂಡವನ್ನು ವಿಧಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಹೊಸ ನಿಯಮಗಳನ್ನು ತಿಳಿದಿರಬೇಕು. ಇಲ್ಲವೇ ನೀವು ಭಾರಿ ದಂಡವನ್ನು ಪಾವತಿಸಬೇಕಾಗಬಹುದು. ಹೊಸ ಕಾನೂನಿನ ಪ್ರಕಾರ, ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಮತ್ತು ಶಿಕ್ಷೆ ವಿಧಿಸಲು ಅವಕಾಶವಿದೆ. ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ನು 18 ರಾಜ್ಯಗಳ ಸಾರಿಗೆ ಸಚಿವರು ಜಂಟಿಯಾಗಿ ಸಿದ್ಧಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಹೊಸ ನಿಯಮಗಳಲ್ಲಿ ಏನಿದೆ?
1. ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದರೆ ಪೋಷಕರಿಗೆ ಶಿಕ್ಷೆಯಾಗುತ್ತದೆ. ಪೋಷಕರು / ವಾಹನ ಮಾಲೀಕರಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಲಾಗುವುದು.
2. ಕುಡಿದು ವಾಹನ ಚಲಾಯಿಸುವವರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.
3. ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವವರಿಗೆ 1000 ರೂ.ಗಳ ದಂಡ ವಿಧಿಸಲಾಗುತ್ತದೆ. ಇದೀಗ ಈ ದಂಡ 100 ರೂಪಾಯಿಯಾಗಿದ್ದು, ಇದನ್ನು ಹತ್ತು ಪಟ್ಟು 1000 ರೂಪಾಯಿಗೆ ಹೆಚ್ಚಿಸಲಾಗಿದೆ. ಅಲ್ಲದೆ, ಮೂರು ತಿಂಗಳ ಚಾಲನಾ ಪರವಾನಗಿಯನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
4. ಅಪಾಯಕಾರಿಯಾಗಿ ವಾಹನ ಚಲಾಯಿಸಿದರೆ 1000 ರೂಪಾಯಿ ದಂಡ ವಿಧಿಸಲು ಅವಕಾಶವಿತ್ತು. ಹೊಸ ಕಾನೂನಿನ ಪ್ರಕಾರ, ಈಗ 5000 ರೂಪಾಯಿಗಳ ದಂಡವನ್ನು ಪಾವತಿಸಬೇಕಾಗುತ್ತದೆ.
5. ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವವರಿಗೆ ಈವರೆಗೂ 500 ರೂಪಾಯಿಗಳ ದಂಡ ವಿಧಿಸಲಾಗುತ್ತಿತ್ತು. ಆದರೆ ಇದನ್ನು 10 ಪಟ್ಟು ಅಂದರೆ 5000 ರೂಪಾಯಿಗೆ ಹೆಚ್ಚಿಸಲಾಗಿದೆ.
6. ಚಾಲನಾ ಪರವಾನಗಿ ಸಸ್ಪೆಂಡ್ ಆದ ಬಳಿಕವೂ ವಾಹನ ಚಲಾಯಿಸಿದರೆ 5,000 ರೂ. ದಂಡ ವಿಧಿಸಲಾಗುತ್ತದೆ. ಪ್ರಸ್ತುತ ಇದು 500 ರೂ. ಇದೆ.
7. ಸ್ಟೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುವವರಿಗೆ ಈ ವರೆವಿಗೂ ವಿಧಿಸಲಾಗುತ್ತಿದ್ದ 100 ರೂ. ದಂಡವನ್ನು 10 ಪಟ್ಟು ಹೆಚ್ಚಿಸಲಾಗಿದ್ದು, ಇನ್ನು ಮುಂದೆ 1000 ರೂ. ದಂಡ ವಿಧಿಸಲಾಗುತ್ತದೆ.
8. ಓವರ್ ಸ್ಪೀಡ್ ವಾಹನ ಚಾಲನೆಗೆ ದಂಡವನ್ನು 400 ರೂ.ಗಳಿಂದ 1000-2000 ರೂ.ಗೆ ಹೆಚ್ಚಿಸಲಾಗಿದೆ.
9. ಕುಡಿದು ವಾಹನ ಚಲಾಯಿಸಿದರೆ 10 ಸಾವಿರ ರೂಪಾಯಿ ದಂಡ.
10. ಫೋನ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಲು 1000 ರೂ.ಗಳ ದಂಡ ವಿಧಿಸಲಾಗುತ್ತಿತ್ತು. ಇದೀಗ ಇದನ್ನು 5000 ರೂ.ಗೆ ಹೆಚ್ಚಿಸಲಾಗಿದೆ.