ಇಂದೋರ್: ಮಧ್ಯಪ್ರದೇಶದ ಗುನಾದಲ್ಲಿ ಚುನಾವಣೆಗಾಗಿ ನಿಯೋಜನೆಗೊಂಡಿದ್ದ ಚುನಾವಣೆಯ ಮತಗಟ್ಟೆ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರನ್ನು ಸೋಹನ್ಲಾಲ್ ಬಟಮ್ ಎಂದು ಗುರುತಿಸಲಾಗಿದೆ. 


COMMERCIAL BREAK
SCROLL TO CONTINUE READING

ಇಂದೋರ್ ವಿಧಾನಸಭೆ  ಸಂಖ್ಯೆ -5 ರಲ್ಲಿಯೂ ಚುನಾವಣೆಗೆ ನಿಯೋಜನೆಗೊಂಡಿದ್ದ ಅಧಿಕಾರಿಯೊಬ್ಬರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಮಾಹಿತಿ ಪ್ರಕಾರ, ದೀಪಿಕಾ ಬಾಲ್ ಮಂದಿರ ನೆಹರೂ ನಗರದ ಮತಗಟ್ಟೆ ವಿಶೇಷ ಅಧಿಕಾರಿ ಕೈಲಾಶ್ ಪಟೇಲ್ ಅವರು ಉತ್ಕೃಷ್ಟ ವಿದ್ಯಾಲಯದ ಬೂತ್ ನಲ್ಲಿ ನಿಯೋಜನೆಗೊಂಡಿದ್ದರು. ಕರ್ತವ್ಯ ನಿರ್ವಹಿಸುವ ವೇಳೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಹತ್ತಿರದ ಶೆಲ್ಬಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾರೆ. ಇದಲ್ಲದೆ ಇಂದೋರ್ ನಿಂದ ಕೂಡ ಓರ್ವ ಅಧಿಕಾರಿಯ ಸಾವಿನ ಬಗ್ಗೆ ವರದಿಯಾಗಿದೆ.


ಕಟ್ನಿಯ ಡಿಎಸ್ಪಿ ಮನೋಜ್ ವರ್ಮಾ ಅಮಾನತು:
ಏತನ್ಮಧ್ಯೆ, ಇಂದೋರ್ನ ಅಧಿಕಾರಿಗಳ ಕಳಪೆ ಆರೋಗ್ಯ ಮತ್ತು ಗುನಾ ಅಧಿಕಾರಿಯೊಬ್ಬರ ಸಾವಿನ ನಡುವೆ ಕಟ್ನಿ ಜಿಲ್ಲೆಯಲ್ಲಿ ಉಪ ಪೊಲೀಸ್ ಅಧೀಕ್ಷಕ(ಡಿಎಸ್ಪಿ) ಮನೋಜ್ ವರ್ಮಾ ಅವರನ್ನು ಮಂಗಳವಾರ ಅಮಾನತುಗೊಳಿಸಿರುವ ಬಗ್ಗೆ ವರದಿಯಾಗಿದೆ. ಪೋಲಿಸ್ ಮುಖ್ಯಕಾರ್ಯಾಲಯದಿಂದ ಮಂಗಳವಾರ ಬಿಡುಗಡೆಯಾದ ಅಧಿಸೂಚನೆ ಪ್ರಕಾರ ಕಟ್ನಿ ಉಪ ಅಧೀಕ್ಷಕ ಮನೋಜ್ ವರ್ಮಾ ಅವರನ್ನು ನವೆಂಬರ್ 24 ರಂದು ಭೋಪಾಲ್ನ ಪೊಲೀಸ್ ಪ್ರಧಾನ ಕಚೇರಿಗೆ ವರ್ಗಾಯಿಸಲಾಗಿತ್ತು. ಆದರೆ ಆದೇಶವನ್ನು ನಿರ್ಲಕ್ಷಿಸಿದ ಮನೋಜ್ ವರ್ಮಾ ನಿಗದಿತ ಸಮಯದಲ್ಲಿ ಅಧಿಕಾರ ವಹಿಸಿಕೊಳ್ಳಲಿಲ್ಲ. 1966 ರಲ್ಲಿ ಮಧ್ಯಪ್ರದೇಶ ಸಿವಿಲ್ ಸರ್ವೀಸಸ್ ನಿಯಮಗಳ ಅಡಿಯಲ್ಲಿ ಅಶಿಸ್ತಿನ ಕಾರಣದಿಂದ ಡಿಜಿಪಿ ರಿಷಿ ಕುಮಾರ್ ಶುಕ್ಲಾ ಅವರು ಮನೋಜ್ ವರ್ಮಾ ಅವರನ್ನು ಅಮಾನತು ಮಾಡಿದ್ದಾರೆ.