ಭೋಪಾಲ್ : ಮಧ್ಯಪ್ರದೇಶದ ಸಿಧಿ ಎಂಬಲ್ಲಿ ಬುಡಕಟ್ಟು ಕಾರ್ಮಿಕನೊಬ್ಬನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರವೇಶ್ ಶುಕ್ಲಾ ಅವರ ಮನೆಯನ್ನು ಬುಲ್ಡೋಜರ್‌ನಿಂದ ನೆಲಸಮ ಮಾಡಲಾಗಿದೆ. ಪ್ರವೇಶ್ ಶುಕ್ಲಾ  ಬುಡಕಟ್ಟು ಕಾರ್ಮಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅವರನ್ನು ಬಂಧಿಸಲಾಯಿತು.


COMMERCIAL BREAK
SCROLL TO CONTINUE READING

ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರವು ಸಿದ್ದಿ ಜಿಲ್ಲೆಯ ಬಡ ಬುಡಕಟ್ಟು ಗುತ್ತಿಗೆ ಕಾರ್ಮಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪ ಹೊತ್ತಿರುವ ಪ್ರವೇಶ್ ಶುಕ್ಲಾ ಅವರ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡವನ್ನು ನೆಲಸಮಗೊಳಿಸಿದೆ.


ಇದನ್ನೂ ಓದಿ: ಭಾರತದ ಈ ಹೆಜ್ಜೆಗೆ ಚೀನಾಗೆ ಖುಷಿಯೋ ಖುಷಿ: ಪಬ್ಲಿಕ್’ನಲ್ಲಿಯೇ ಹಾಡಿ ಹೊಗಳಿದ್ದೇಕೆ?


ಘಟನೆಯ ನಂತರ ಪ್ರವೇಶ್ ಶುಕ್ಲಾ ಮೇಲೆ ಕ್ರಮಕ್ಕೆ ಸಾರ್ವಜನಿಕರ ಆಕ್ರೋಶ ಮತ್ತು ಭಾರೀ ವಿರೋಧ ವ್ಯಕ್ತವಾಗಿತ್ತು. ಸುದ್ದಿ ಸಂಸ್ಥೆ ANI ಹಂಚಿಕೊಂಡ ವೀಡಿಯೊದಲ್ಲಿ, ಪ್ರವೇಶ್ ಶುಕ್ಲಾ ಅವರ ಮನೆಯನ್ನು ನೆಲಸಮಗೊಳಿಸಿರುವ ದೃಶ್ಯವನ್ನು ಕಾಣಬಹುದು. 


ಭಾರೀ ಪೊಲೀಸ್ ಭದ್ರತೆಯೊಂದಿಗೆ ಬುಲ್ಡೋಜರ್ ನಿಂದ ಅಕ್ರಮವಾಗಿ ನಿರ್ಮಿಸಿದ್ದ ಮನೆಯನ್ನು ನೆಲಸಮಗೊಳಿಸಲಾಗಿದೆ. ಇನ್ನು ಪ್ರತಿಪಕ್ಷ ಕಾಂಗ್ರೆಸ್ ಮೂತ್ರ ವಿಸರ್ಜನೆ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿದರೆ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶುಕ್ಲಾ ವಿರುದ್ಧ ಎನ್ಎಸ್ಎ ಅಡಿಯಲ್ಲಿ ಪ್ರಕರಣಕ್ಕೆ ಆದೇಶಿಸಿದ್ದಾರೆ.


ಇದನ್ನೂ ಓದಿ: "ನನ್ನ ಸಿದ್ಧಾಂತಕ್ಕೆ ದ್ರೋಹ ಮಾಡಿದವರು ನನ್ನ ಫೋಟೋವನ್ನು ಬಳಸುವಂತಿಲ್ಲ"-ಶರದ್ ಪವಾರ್ 


ಇನ್ನು ಮಧ್ಯಪ್ರದೇಶದ ಬಿಜೆಪಿ ಶಾಸಕ ಪ್ರವೇಶ್ ಶುಕ್ಲಾ ಅವರು ಸಿಗರೇಟ್ ಸೇದುತ್ತಾ, ಕುಡಿದ ಅಮಲಿನಲ್ಲಿ ನೆಲದ ಮೇಲೆ ಕುಳಿತಿದ್ದ ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೆಲ ದಿನಗಳ ಹಿಂದೆ ಘಟನೆ ನಡೆದಿದೆ ಎನ್ನಲಾಗಿದ್ದು, ಸಂತ್ರಸ್ತನ ಕುಟುಂಬದವರು ಭಯದಿಂದ ದೂರು ದಾಖಲಿಸಿರಲಿಲ್ಲ ಎನ್ನಲಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರವೇಶ್ ಶುಕ್ಲಾ ಅರೆಸ್ಟ್ ಎಂಬ ಹ್ಯಾಶ್ ಟ್ಯಾಗ್ ಟ್ವಿಟರ್‌ನಲ್ಲಿ ಭಾರತದಾದ್ಯಂತ ಟ್ರೆಂಡ್ ಆಗಿದೆ. 


ಘಟನೆಯ ತನಿಖೆಗಾಗಿ ಭಾರತೀಯ ಜನತಾ ಪಕ್ಷವು 4 ಸದಸ್ಯರ ಸಮಿತಿಯನ್ನು ರಚಿಸಿದೆ ಎಂದು ಪಕ್ಷದ ರಾಜ್ಯ ಅಧ್ಯಕ್ಷ ವಿ ಟಿ ಶರ್ಮಾ ಹೇಳಿದರು. ಸಮಿತಿಯ ನೇತೃತ್ವವನ್ನು ಜಂಜಟ್ಟಿ ವಿಕಾಸ ಪ್ರತಿಕರಣ್ ಅಧ್ಯಕ್ಷ ರಾಮಲಾಲ್ ರೌಡಾಲ್ ವಹಿಸಿದ್ದಾರೆ. ಸಮಿತಿಯ ಸದಸ್ಯರಲ್ಲಿ ಶಾಸಕರಾದ ಶರದ್ ಕೋಹ್ ಮತ್ತು ಅಮರ್ ಸಿಂಗ್ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಕಂಡೇವ್ ಸಿಂಗ್ ಸೇರಿದ್ದಾರೆ.


ಇದನ್ನೂ ಓದಿ: ವಿವಿಧ ರಾಜ್ಯಗಳ ಪಕ್ಷದ ಹೊಸ ಮುಖ್ಯಸ್ಥರನ್ನು ನೇಮಿಸಿದ ಬಿಜೆಪಿ 


ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು), 504 (ಶಾಂತಿ ಕದಡುವ ಉದ್ದೇಶದಿಂದ ಅವಮಾನ), ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್‌ಎಸ್‌ಎ) ಅಡಿಯಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ.


ಆರೋಪಿಯು ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ, ಆದರೆ ಆಡಳಿತ ಪಕ್ಷವು ಆರೋಪವನ್ನು ನಿರಾಕರಿಸಿದೆ. ಸುದ್ದಿ ಸಂಸ್ಥೆ ಪಿಟಿಐಗೆ ಮಾತನಾಡಿದ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ, ವ್ಯಕ್ತಿಯ ಕೃತ್ಯವನ್ನು "ಭಯಾನಕ, ಖಂಡನೀಯ ಮತ್ತು ಮಾನವೀಯತೆಗೆ ಅವಮಾನ" ಎಂದು ಕಿಡಿಕಾರಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.