Madhya Pradesh unlock update: ಮಧ್ಯಪ್ರದೇಶದಲ್ಲಿ ಕರೋನಾವೈರಸ್ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ ಮತ್ತು ಜೂನ್ 1 ರಿಂದ ರಾಜ್ಯದಲ್ಲಿ ಅನ್ಲಾಕ್ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ. ಬುಧವಾರ ಸಂಜೆ ರಾಜ್ಯದ ಜನರೊಂದಿಗೆ ಸಂವಾದ ನಡೆಸಿದ ಮುಖ್ಯಮಂತ್ರಿ  ಚೌಹಾಣ್, ಕರೋನಾವನ್ನು ಹೇಗೆ ಸೋಲಿಸಬೇಕು ಎಂಬುದರ ಕುರಿತು ಪ್ರಮುಖ ಸಲಹೆಗಳನ್ನು ನೀಡಿದರು. ಕರೋನ ಬೆದರಿಕೆ ಇನ್ನೂ ಕಡಿಮೆಯಾಗಿಲ್ಲ, ವೈರಸ್ ಇನ್ನೂ ಹೋಗಿಲ್ಲ. ಆದ್ದರಿಂದ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ನಮ್ಮೆಲ್ಲರ ಪ್ರಯತ್ನದಿಂದ ಕರೋನದ ನಿಯಂತ್ರಣ ಕಂಡುಬಂದಿದೆ ಎಂದರು.


COMMERCIAL BREAK
SCROLL TO CONTINUE READING

ಕರೋನವನ್ನು ಹೇಗೆ ನಿಯಂತ್ರಿಸಬೇಕೆಂದು ಸಲಹೆ ನೀಡಿದ ಸಿಎಂ ಶಿವರಾಜ್ :
ಕರೋನವನ್ನು ನಿಯಂತ್ರಿಸುವಲ್ಲಿ ಮಧ್ಯಪ್ರದೇಶವು (Madhya Pradesh) ದೇಶಕ್ಕೆ ಮಾದರಿಯಾಗಿದೆ, ಜನರಿಂದ ಜನರಿಗಾಗಿ ಕರೋನಾವನ್ನು ಸೋಲಿಸುವುದು ಜನರ ಮಾದರಿಯಾಗಿದೆ ಎಂದು ಸಿಎಂ ಹೇಳಿದರು. ರಾಜ್ಯದಲ್ಲಿ ಸರ್ಕಾರದ ಪ್ರಯತ್ನದಿಂದ  ಮಾತ್ರ ಕರೋನಾವನ್ನು ನಿಯಂತ್ರಿಸಲಿಲ್ಲ, ಬದಲಾಗಿ ನಾವು ಬಿಕ್ಕಟ್ಟನ್ನು ಎದುರಿಸಲು ಕ್ರೈಸಿಸ್ ಮ್ಯಾನೇಜ್ಮೆಂಟ್ ಗ್ರೂಪ್ ಅನ್ನು ರಚಿಸಿದ್ದೇವೆ. ಗ್ರಾಮದ ಕ್ರೈಸಿಸ್ ಮ್ಯಾನೇಜ್ಮೆಂಟ್ ಗ್ರೂಪ್, ಸಿಟಿ ವಾರ್ಡ್ನ ಕ್ರೈಸಿಸ್ ಮ್ಯಾನೇಜ್ಮೆಂಟ್ ಗ್ರೂಪ್, ಬ್ಲಾಕ್ನ ಕ್ರೈಸಿಸ್ ಮ್ಯಾನೇಜ್ಮೆಂಟ್ ಗ್ರೂಪ್ ಮತ್ತು ಜಿಲ್ಲೆಯ ಕ್ರೈಸಿಸ್ ಮ್ಯಾನೇಜ್ಮೆಂಟ್ ಗ್ರೂಪ್. ಈ ಗುಂಪುಗಳು ಉತ್ತಮ ಕೆಲಸ ಮಾಡಿದ್ದು, ಇದರಿಂದಾಗಿ ರಾಜ್ಯದಲ್ಲಿ ಕರೋನ ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ- Personal Loan Requirement: ಕೇವಲ ನಿಮಿಷಗಳಲ್ಲಿ ಪರ್ಸನಲ್ ಲೋನ್ ಪಡೆಯುವ ವಿಧಾನ ತಿಳಿಯಿರಿ


ಈಗ ಕರೋನದ ಮೂರನೇ ತರಂಗವನ್ನು ತಡೆಯಬೇಕಾಗಿದೆ- ಸಿಎಂ
ಈಗ ಕರೋನಾ ಮೂರನೇ ತರಂಗದ ಬಗ್ಗೆ ಭೀತಿ ಇದೆ. ನಾವು ನಿಗಾವಹಿಸದಿದ್ದರೆ, ಕರೋನಾ (Coronavirus) ನಿಯಮಗಳನ್ನು ಪಾಲಿಸದಿದ್ದರೆ ಸೋಂಕು ಮತ್ತೆ ತಲ್ಲಣ ಸೃಷ್ಟಿಸುತ್ತದೆ.  ಈ ಸೋಂಕು ಸ್ಫೋಟಗೊಂಡರೆ, ಅದು ಮೂರನೇ ತರಂಗವಾಗುತ್ತದೆ. ಆದ್ದರಿಂದ, ನಾವು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ದಿನದಿಂದ ದಿನಕ್ಕೆ ಅಗತ್ಯ ಚಟುವಟಿಕೆಗಳನ್ನು ನಡೆಸುವ ಮೂಲಕ ಮೂರನೇ ತರಂಗವನ್ನು ತಡೆಯಲು ಪ್ರಯತ್ನಿಸಬೇಕು. ಇದಕ್ಕಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು.


ಅನ್ಲಾಕ್ ಜೂನ್ 1 ರಿಂದ ಪ್ರಾರಂಭವಾಗುತ್ತದೆ:
ಲಾಕ್‌ಡೌನ್ (Lockdown) ನಂತರ ಚಟುವಟಿಕೆಗಳು ಅನ್‌ಲಾಕ್‌ನೊಂದಿಗೆ ಪ್ರಾರಂಭವಾಗುತ್ತವೆ. ಆದರೆ ಸಂಪೂರ್ಣವಾಗಿ ಅನ್‌ಲಾಕ್‌ ಆಗುವುದಿಲ್ಲ. ರಾಜಕೀಯ ರ್ಯಾಲಿಗಳು, ಸಭೆಗಳು, ಧಾರ್ಮಿಕ ಕಾರ್ಯಕ್ರಮಗಳು ಸಂಪೂರ್ಣವಾಗಿ ಮುಚ್ಚಲ್ಪಡುತ್ತವೆ. ಕನಿಷ್ಠ ಸಂಖ್ಯೆಯ ಜನರ ಉಪಸ್ಥಿತಿಯಲ್ಲಿ ವಿವಾಹಗಳು ನಡೆಯಲಿವೆ. ಮದುವೆಗೆ ಹಾಜರಾಗುವವರು ಕರೋನಾ ಪರೀಕ್ಷೆ ಮಾಡಿಸಿರಬೇಕು. ಸ್ಥಳದಲ್ಲಿ ಕರೋನಾ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗುವುದು. ಈ ರೀತಿ ನಾವು ಮೈಮರೆಯದೆ ಎಲ್ಲಾ ನಿಟ್ಟಿನಲ್ಲೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದರು.


ಇದನ್ನೂ ಓದಿ- LPG Booking ವ್ಯವಸ್ಥೆಯಲ್ಲಿ ಹೊಸ ನಿಯಮ ತರಲು ಸರ್ಕಾರದ ಸಿದ್ಧತೆ


ರಾಜ್ಯದಲ್ಲಿ ಪ್ರತಿದಿನ 75 ಸಾವಿರ ಪರೀಕ್ಷೆಗಳನ್ನು ನಡೆಸಲಾಗುವುದು. ಮಾಸ್ಕ್ ಗಳನ್ನು ಬಳಸುವುದು, ಅಂಗಡಿಯ ಮುಂದೆ ಸಾಮಾಜಿಕ ಅಂತರಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು, ಶಿಸ್ತನ್ನು ಅನುಸರಿಸುವುದು ಅಗತ್ಯವಾಗಿರುತ್ತದೆ. ಜನಸಮೂಹವನ್ನು ಒಟ್ಟುಗೂಡಿಸಲು ಸಾಧ್ಯವಾಗದಂತೆ ಸೆಕ್ಷನ್ 144 ಮುಂದುವರಿಯುತ್ತದೆ. ಇದರೊಂದಿಗೆ ಪರೀಕ್ಷೆಗಳೂ ಮುಂದುವರಿಯಲಿವೆ. ಫಿವರ್ ಕ್ಲಿನಿಕ್ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ, ಮೊಬೈಲ್ ಪರೀಕ್ಷಾ ತಂಡವೂ ಸಹ ಕಾರ್ಯನಿರ್ವಹಿಸುತ್ತದೆ. ಸೋಂಕಿತರಿಗೆ ವೈದ್ಯಕೀಯ ಕಿಟ್ ನೀಡುವ ಮೂಲಕ ಮನೆಯ ಪ್ರತ್ಯೇಕತೆಯಲ್ಲಿ ಇರಲು ಅಥವಾ ಕೋವಿಡ್ ಕೇರ್ ಸೆಂಟರ್ನಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗುವುದು ಎಂದವರು ಮಾಹಿತಿ ನೀಡಿದರು.


ಇದೇ ಸಂದರ್ಭದಲ್ಲಿ ಕರೋನಾ ಮೂರನೇ ತರಂಗದ ಬಗ್ಗೆ ಎಚ್ಚರಿಕೆ ವಹಿಸುವ ಅವಶ್ಯಕತೆಯಿದೆ ಎಂದು ಎಚ್ಚರಿಸಿದ ಮುಖ್ಯಮಂತ್ರಿಗಳು ಜನರು ಅಜಾಗರೂಕವಾಗಿದ್ದರೆ, ದೊಡ್ಡ-ಪ್ರಮಾಣದ ನಷ್ಟ ಸಂಭವಿಸಲಿದೆ. ಸೋಂಕು ಹಿಡಿತಕ್ಕೆ ಬಂದಿದೆ ಎಂದು ಜನಸಮೂಹವು ಸೇರಲು ಪ್ರಾರಂಭಿಸಿದರೆ, ಸೋಂಕು ಹರಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ, ಕರೋನಾ ಕರ್ಫ್ಯೂ ಕ್ರಮೇಣ ತೆರೆಯುತ್ತದೆ. ಸೆಕ್ಷನ್ -144 ರಾಜ್ಯದಲ್ಲಿ ಜಾರಿಯಲ್ಲಿದ್ದರೂ ಗ್ರಾಮದಲ್ಲಿ ಬ್ಲಾಕ್ ಮತ್ತು ಜಿಲ್ಲೆಯ ಕ್ರೈಸಿಸ್ ಮ್ಯಾನೇಜ್ಮೆಂಟ್ ಗ್ರೂಪ್ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ.  ಇದಕ್ಕಾಗಿ ನಾವು ಮಾರ್ಗಸೂಚಿಯನ್ನು ಸಿದ್ಧಪಡಿಸಿದ್ದೇವೆ  ಎಂದು ವಿವರಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.