ಕರೋನಾದಿಂದ ತಮ್ಮವರನ್ನು ಕಳೆದುಕೊಂಡವರ ನೋವಿನಲ್ಲಿ ಭಾಗಿ ; ನರೇಂದ್ರ ಮೋದಿ

ಬುದ್ಧ ಪೂರ್ಣಿಮಾ ಸಂದರ್ಭದಲ್ಲಿ ವೀಡಿಯೊ ಕಾನ್ಪೆರೆನ್ಸ್ ಮೂಲಕ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ (PM Modi) , ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಕರೋನಾದಿಂದಾಗಿ (Coronavirus) ತಮ್ಮವರನ್ನು ಕಳೆದುಕೊಂಡವರ ನೋವಿನಲ್ಲಿ ತಾನೂ ಭಾಗಿಯಾಗುತ್ತೇನೆ  ಎಂದು ಅವರು ಹೇಳಿದ್ದಾರೆ.  

Written by - Ranjitha R K | Last Updated : May 26, 2021, 12:42 PM IST
  • 'ಕರೋನಾ ಸಂತ್ರಸ್ತರ ದುಃಖದಲ್ಲಿ ನಾನೂ ಭಾಗಿ - ಮೋದಿ
  • 'ಸಾಂಕ್ರಾಮಿಕ ನಂತರ ಜಗತ್ತು ಬದಲಾಗುತ್ತದೆ'
  • 'ಕರೋನಾದೊಂದಿಗಿನ ಹೋರಾಟದಲ್ಲಿ ಲಸಿಕೆ ಮಹತ್ತರ ಅಸ್ತ್ರ'
ಕರೋನಾದಿಂದ ತಮ್ಮವರನ್ನು ಕಳೆದುಕೊಂಡವರ ನೋವಿನಲ್ಲಿ ಭಾಗಿ ; ನರೇಂದ್ರ ಮೋದಿ title=
'ಕರೋನಾ ಸಂತ್ರಸ್ತರ ದುಃಖದಲ್ಲಿ ನಾನೂ ಭಾಗಿ - ಮೋದಿ (Phoo ANI)

ನವದೆಹಲಿ : ಕರೋನಾ ಸಾಂಕ್ರಾಮಿಕ (Coronavirus) ರೋಗವು  ಮಾನವರು  ಎದುರಿಸುತ್ತಿರುವ ಭೀಕರ ಬಿಕ್ಕಟ್ಟು ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ. ಸಾಂಕ್ರಾಮಿಕ ರೋಗವು ಪ್ರತಿ ದೇಶದ ಮೇಲೆ ಪರಿಣಾಮ ಬೀರಿದೆ. ಕರೋನಾ (COVID-19) ಇಡೀ ವಿಶ್ವವನ್ನೇ ಬದಲಿಸಿಬಿಟ್ಟಿದೆ. ಕರೋನಾ ನಂತರ ಈ ಜಗತ್ತು ಮೊದಲಿನಂತೆ ಆಗುವುದಿಲ್ಲ ಎಂದು ಮೋದಿ ಹೇಳಿದ್ದಾರೆ. 

ಬುದ್ಧ ಪೂರ್ಣಿಮಾ ಸಂದರ್ಭದಲ್ಲಿ ವೀಡಿಯೊ ಕಾನ್ಪೆರೆನ್ಸ್ ಮೂಲಕ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ (PM Modi) , ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಕರೋನಾದಿಂದಾಗಿ (Coronavirus) ತಮ್ಮವರನ್ನು ಕಳೆದುಕೊಂಡವರ ನೋವಿನಲ್ಲಿ ತಾನೂ ಭಾಗಿಯಾಗುತ್ತೇನೆ  ಎಂದು ಅವರು ಹೇಳಿದ್ದಾರೆ.  

ಇದನ್ನೂ ಓದಿ : ನಾಳೆಯಿಂದ ಆರಂಭವಾಗಲಿದೆ Flipkart Sale ; ಅಗ್ಗದ ಬೆಲೆಗೆ ಸಿಗಲಿದೆ ಸ್ಮಾರ್ಟ್ ಪೋನ್

ಭಾರತ ಈ ಸವಾಲನ್ನು ಅತ್ಯಂತ ಧೈರ್ಯದಿಂದ ಎದುರಿಸುತ್ತಿದ್ದು, ಇದರಲ್ಲಿ ಲಸಿಕೆಗಳ (Vaccine) ಪಾತ್ರ ಮಹತ್ವದ್ದಾಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. COVID-19 ಮಾನವೀಯತೆ ಎದುರಿಸುತ್ತಿರುವ ಅತ್ಯಂತ ಭೀಕರ ಬಿಕ್ಕಟ್ಟು ಎಂದು ಅವರು ಹೇಳಿದ್ದಾರೆ. ಈ ಹಿಂದೆ ಇಂಥಹ ಸಾಂಕ್ರಾಮಿಕ ರೋಗವನ್ನು ನಾವೆಂದೂ ಕಂಡಿರಲಿಲ್ಲ, ಕರೋನಾ ಈ ಜಗತ್ತನ್ನು ಬದಲಿಸಿದೆ ಎಂದು ಪ್ರಧಾನ ಮಂತ್ರಿ ಹೇಳಿದ್ದಾರೆ.

ಕೋವಿಡ್ -19 ರ ನಂತರ, ಭೂಮಿ ಮೊದಲಿನಂತೆ ಇರುವುದಿಲ್ಲ. ಮುಂಬರುವ ದಿನಗಳಲ್ಲಿ ಕರೋನಾಗೆ ಮೊದಲು ಅಥವಾ ಕರೋನಾದ ನಂತರ ಎಂದು ಘಟನೆಗಳನ್ನು ನಾವು ನೆನಪಿಸಿಕೊಳ್ಳುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ. ಈ ಸಾಂಕ್ರಾಮಿಕದ ಬಗ್ಗೆ ಜನರಿಗೆ ಈಗ ತಿಳುವಳಿಕೆ ಬಂದಿದೆ. ನಮ್ಮಲ್ಲಿ ಲಸಿಕೆಗಳು ಲಭ್ಯವಿದೆ. ಜನರ ಜೀವ ಉಳಿಸುವಲ್ಲಿ ಮತ್ತು ಸಾಂಕ್ರಾಮಿಕ ರೋಗವನ್ನು ಸೋಲಿಸುವಲ್ಲಿ ಈ ಲಸಿಕೆ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ನಮ್ಮ  ವಿಜ್ಞಾನಿಗಳ ಬಗ್ಗೆ ಭಾರತ ಹೆಮ್ಮೆಪಡುತ್ತದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ : Post Office Savings Scheme: ಪೋಸ್ಟ್ ಆಫೀಸ್‌ನ ಅತ್ಯಂತ ಲಾಭದಾಯಕ ಯೋಜನೆ, ಕೇವಲ 5 ವರ್ಷ ಹೂಡಿಕೆ ಮಾಡಿ ಮೇಲೆ 14 ಲಕ್ಷ ರೂ. ಗಳಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News