ಡಿಪಿ ಬದಲಾಯಿಸಿದ ಧೋನಿ: ದೇಶದ ಬಗ್ಗೆ ಹೀಗೆಂದ ಕ್ಯಾಪ್ಟನ್ ಕೂಲ್
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬುತ್ತಿವೆ. ಭಾರತ ಸರ್ಕಾರದ ಮನವಿಯ ಮೇರೆಗೆ ದೇಶ ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ.
MS Dhoni Har Ghar Tiranga: ಟೀಂ ಇಂಡಿಯಾದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ) ತಮ್ಮ ಬಲಿಷ್ಠ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಧೋನಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿಲ್ಲ. ಆದರೆ ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ಅವರು ಕೈಗೊಂಡ ಒಂದು ಹೆಜ್ಜೆ ಅವರ ಅಭಿಮಾನಿಗಳಿಗೆ ಹೆಮ್ಮೆ ತರುವಂತೆ ಮಾಡಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬುತ್ತಿವೆ. ಭಾರತ ಸರ್ಕಾರದ ಮನವಿಯ ಮೇರೆಗೆ ದೇಶ ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಇದರ ಅಡಿಯಲ್ಲಿ, ಎಲ್ಲಾ ದೇಶವಾಸಿಗಳು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತ್ರಿವರ್ಣ ಧ್ವಜದ ಡಿಪಿ ಹಾಕುತ್ತಿದ್ದಾರೆ. ಇದೀಗ ಸ್ಟಾರ್ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರೊಫೈಲ್ ಬದಲಾಯಿಸಿದ್ದಾರೆ.
ಇದನ್ನೂ ಓದಿ: Har Ghar Tiranga : ಸಿಎಂ ಬೊಮ್ಮಾಯಿ ಚಾಲನೆ ನೀಡಿದ 'ಹರ್ ಘರ್ ತಿರಂಗಾ' : ಫೋಟೋಗಳು
ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ) ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿಲ್ಲ. ಆದರೂ ಸಹ ಆಗಾಗ್ಗ ಪೋಸ್ಟ್ಗಳನ್ನು ಮಾಡುತ್ತಾ ಅಭಿಮಾನಿಗಳ ಜತೆ ಸಂಪರ್ಕ ಹೊಂದಿರುತ್ತಾರೆ. ಇದೀಗ ಧೋನಿ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಚಿತ್ರವನ್ನು ತ್ರಿವರ್ಣ ಧ್ವಜಕ್ಕೆ ಬದಲಾಯಿಸಿದ್ದು ದೇಶಭಕ್ತಿಯನ್ನು ತೋರಿಸಿದ್ದಾರೆ.
ಪ್ರೊಫೈಲ್ ಬದಲಾಯಿಸಿದ್ದು ಮಾತ್ರವಲ್ಲ. ಡಿಪಿ ಮೇಲೆ “ನನ್ನ ಅದೃಷ್ಟ ನಾನೊಬ್ಬ ಭಾರತೀಯ ಎಂದು” ಅಂತ ಬರೆದುಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 39 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರೆ, ಧೋನಿ ಕೇವಲ ನಾಲ್ಕು ಜನರನ್ನು ಮಾತ್ರ ಅನುಸರಿಸುತ್ತಾರೆ.
ಮಹೇಂದ್ರ ಸಿಂಗ್ ಧೋನಿ (MS ಧೋನಿ) ಶ್ರೇಷ್ಠ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್. ಅಷ್ಟೇ ಅಲ್ಲದೆ ಶ್ರೇಷ್ಠ ನಾಯಕನಾಗಿ ಎಲ್ಲಾ ಮೂರು ಪ್ರಮುಖ ICC ಟ್ರೋಫಿಗಳನ್ನು ಗೆದ್ದ ಏಕೈಕ ಆಟಗಾರ ಎಂಎಸ್ ಧೋನಿ. ಭಾರತೀಯ ಕ್ರಿಕೆಟ್ ಅನ್ನು ಹೊಸ ಆಯಾಮಕ್ಕೆ ಕೊಂಡೊಯ್ದಿದ್ದಾರೆ ಎಂದರೆ ತಪ್ಪಾಗಲ್ಲ. ರಾಂಚಿಯನ್ನು ತೊರೆದು ರಾಷ್ಟ್ರೀಯ ಕ್ರಿಕೆಟ್ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಅವರು 2020 ಆಗಸ್ಟ್ 15 ರಂದು ತಮ್ಮ ನಿವೃತ್ತಿಯನ್ನು ಘೋಷಿಸಿದರು.
ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್: ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ) ಬ್ಯಾಟಿಂಗ್ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಇನ್ನು ಧೋನಿಗೆ ಕ್ರಿಕೆಟ್ ಮಾತ್ರವಲ್ಲ ಫುಟ್ ಬಾಲ್ ಎಂದರೆ ಪಂಚಪ್ರಾಣ. ಕ್ರಿಕೆಟ್ ಹೊರತಾಗಿ ಧೋನಿ ಫುಟ್ ಬಾಲ್ ಆಡುತ್ತಾರೆ. ಇವೆಲ್ಲಕ್ಕಿಂತಲೂ ಧೋನಿಗೆ ಭಾರತೀಯ ಸೇನೆ ಎಂದರೆ ಅಪಾರ ಗೌರವ. ಈ ಹಿನ್ನೆಲೆಯಲ್ಲಿ ದೇಶದ ಪ್ರತಿಷ್ಟಿತ ಗೌರವ ಸ್ವೀಕರಿಸುವ ಸಂದರ್ಭದಲ್ಲಿ ಸೇನಾ ಸಮವಸ್ತ್ರ ಧರಿಸಿ ಪ್ರಶಸ್ತಿಯನ್ನು ಪಡೆದಿದ್ದರು.
ಇದನ್ನೂ ಓದಿ:Alert! ನೀವೂ ಕೂಡ ಚೈನಾ ಕಂಪನಿಯ ಈ ಫೋನ್ ಗಳನ್ನು ಬಳಸುತ್ತೀರಾ? ತಕ್ಷಣ ಈ ಕೆಲಸ ಮಾಡಿ... ಇಲ್ದಿದ್ರೆ
ಇನ್ನು ಎಂ ಎಸ್ ಧೋನಿ ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಗೌರವಾನ್ವಿತ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಹೊಂದಿರುವುದು ಮಾತ್ರವಲ್ಲದೆ, ಅವರು ಅರ್ಹವಾದ ಪ್ಯಾರಾಟ್ರೂಪರ್ ಕೂಡ ಆಗಿದ್ದಾರೆ. 41 ವರ್ಷದ ಅವರು ಇತ್ತೀಚೆಗೆ ತಮ್ಮ ಜನ್ಮದಿನವನ್ನು ಆಚರಿಸಲು ಯುನೈಟೆಡ್ ಕಿಂಗ್‌ಡಮ್ ಗೆ ತೆರಳಿದ್ದರು. ಆ ಸಂದರ್ಭದಲ್ಲಿ ಇಂಗ್ಲೆಂಡ್ ವಿರುದ್ಧದ ಭಾರತದ ಪಂದ್ಯಗಳನ್ನು ಸಹ ವೀಕ್ಷಿಸಿದ್ದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.