August 31ರ ವರೆಗೆ ಈ ರಾಶಿಗಳ ಜನರಿಗೆ ಅಪಾರ ಧನಲಾಭ ! ಕಾರಣ ಇಲ್ಲಿದೆ

Venus Transit 2022: ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಶಿ ಪರಿವರ್ತನೆ ಎಲ್ಲ ರಾಶಿಗಳ ಜಾತಕದವರ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಆಗಸ್ಟ್ 7 ರಂದು ಶುಕ್ರ ಗ್ರಹ ಕರ್ಕ ರಾಶಿಯನ್ನು ಪ್ರವೇಶಿಸಿದ್ದಾನೆ ಹಾಗೂ ಶುಕ್ರನ ಈ ಗೋಚರ 3 ರಾಶಿಗಳ ಜಾತಕದವರಿಗೆ ವಿಶೇಷ ಲಾಭ ನೀಡಲಿದೆ.  

Written by - Nitin Tabib | Last Updated : Aug 13, 2022, 01:24 PM IST
  • ಆಗಸ್ಟ್ 7 ರಂದು ಕರ್ಕ ರಾಶಿಯಲ್ಲಿ ಶುಕ್ರಗೋಚರ ಸಂಭವಿಸಿದೆ.
  • ಆಗಸ್ಟ್ 31 ರವರೆಗೆ ಶುಕ್ರ ಕರ್ಕ ರಾಶಿಯಲ್ಲಿಯೇ ವಿರಾಜಮಾನನಾಗಿರಲಿದ್ದಾನೆ.
  • ಶುಕ್ರನ ಈ ಗೋಚರ ಒಟ್ಟು 3 ರಾಶಿಗಳ ಜಾತಕದವರಿಗೆ ವಿಶೇಷ ಲಾಭ ನೀಡಲಿದೆ.
August 31ರ ವರೆಗೆ ಈ ರಾಶಿಗಳ ಜನರಿಗೆ ಅಪಾರ ಧನಲಾಭ ! ಕಾರಣ ಇಲ್ಲಿದೆ title=
Shukra Gochar 2022

Shukra Gochar 2022: ಜೋತಿಷ್ಯ ಶಾಸ್ತ್ರದ ಪ್ರಕಾರ ಒಂದು ನಿಶ್ಚಿತ ಸಮಯದಲ್ಲಿ ಪ್ರತಿಯೊಂದು ಗ್ರಹ ತನ್ನ ರಾಶಿಯನ್ನು ಪರಿವರ್ತಿಸುತ್ತದೆ. ಗ್ರಹಗಳ ಈ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರುತ್ತದೆ. ಆಗಸ್ಟ್ ತಿಂಗಳಿನಲ್ಲಿ ಹಲವು ದೂದ ಗ್ರಹಗಳು ತನ್ನ ರಾಶಿಗಳನ್ನು ಪರಿವರ್ತಿಸಲಿವೆ. ಇವುಗಳಲ್ಲಿ ಈಗಾಗಲೇ ಶುಕ್ರ ಗ್ರಹ ಆಗಸ್ಟ್ 7 ರಂದು ಕರ್ಕ ರಾಶಿಯಲ್ಲಿ ಗೋಚರಿಸಿದೆ. ಶುಕ್ರ ಆಗಸ್ಟ್ 31ರವರೆಗೆ ಅದೇ ರಾಶಿಯಲ್ಲಿ ವಿರಾಜಮಾನನಾಗಿರಲಿದೆ. ಸಾಮಾನ್ಯವಾಗಿ ಶುಕ್ರನನ್ನು ಧನ, ವೈಭವ, ಐಶ್ವರ್ಯ, ವಿಲಾಸಿ ಹಾಗೂ ಭೌತಿಕ ಸುಖಗಳಿಗೆ ಕಾರಕ ಗ್ರಹ ಎಂದು ಕರೆಯಲಾಗುತ್ತದೆ. ಹಾಗೆ ನೋಡಿದರೆ ಶುಕ್ರನ ಈ ಗೋಚರ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಆದರೆ, ವಿಶೇಷವಾಗಿ ಮೂರು ರಾಶಿಗಳ ಜನರ ಜೀವನದಲ್ಲಿ ಈ ಅವಧಿಯಲ್ಲಿ ಅಪಾರ ಧನ ಪ್ರಾಪ್ತಿಯ ಸಂಕೇತಗಳನ್ನು ನೀಡುತ್ತಿದೆ. ತಿಳಿದುಕೊಳ್ಳೋಣ ಬನ್ನಿ,

ಕನ್ಯಾ ರಾಶಿ - ಜೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನ ಈ ಕರ್ಕ ಗೋಚರದಿಂದ ಕನ್ಯಾ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಕನ್ಯಾ ರಾಶಿಯ 11 ನೇ ಭಾವದಲ್ಲಿ ಶುಕ್ರದೇವನ ಈ ಭ್ರಮಣ ಸಾಗಲಿದೆ. ಇದರಿಂದ ಈ ರಾಶಿಯ ಜಾತಕದವರ ಆದಾಯದಲ್ಲಿ ವೃದ್ಧಿ ಇರುವ ಸಾಧ್ಯತೆ ಇದೆ. ಜೊತೆಗೆ ಆದಾಯದ ಹೊಸ ಮೂಲಗಳು ಕೂಡ ಸೃಷ್ಟಿಯಾಗಲಿವೆ. ಮಾಧ್ಯಮ, ಚಲನಚಿತ್ರ, ಬ್ಯಾಂಕಿಂಗ್ ಅಥವಾ ಫ್ಯಾಶನ್ ಡಿಸೈನಿಂಗ್ ವೃತ್ತಿಜೀವನಕ್ಕೆ ಸಂಬಂಧಿಸದ ಜನರಿಗೆ ವಿಶೇಷ ಧನಲಾಭವಾಗುವ ಸಾಧ್ಯತೆ ಇದೆ. ಶುಕ್ರ ಗೋಚರದ ಅವಧಿಯಲ್ಲಿ ವ್ಯಾಪಾರ ಮತ್ತು ವೃತ್ತಿಜೀವನದಲ್ಲಿ ಆಶಾತೀತ ಸಫಲತೆ ನಿಮ್ಮದಾಗಲಿದೆ. ಈ ಅವಧಿಯಲಿ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ಪಚ್ಚೆ ಹಾಗೂ ಓಪಲ್ ರತ್ನ ಧಾರಣೆ ನಿಮ್ಮ ಪಾಲಿಗೆ ಶ್ರೇಯಸ್ಕರ ಸಾಬೀತಾಗಲಿದೆ.

ತುಲಾ ರಾಶಿ - ತುಲಾ ರಾಶಿಯ ದಶಮ ಭಾವದಲ್ಲಿ ಶುಕ್ರನ ಭ್ರಮಣ ಸಾಗಲಿದೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಈ ಸ್ಥಾನವನ್ನು ಬಿಸ್ನೆಸ್ ಹಾಗೂ ನೌಕರಿಯ ಭಾವ ಎಂದು ಹೇಳಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ಹೊಸ ಉದ್ಯೋಗ ನಿಮ್ಮನ್ನು ಆರಿಸಿಕೊಂಡು ಬರುವ ಸಾಧ್ಯತೆ ಇದೆ. ಈಗಾಗಲೇ ನೌಕರಿಯಲ್ಲಿ ಇರುವ ಜನರಿಗೆ ಪ್ರಮೋಶನ್ ಸಿಗುವ ಸಾಧ್ಯತೆ ಇದೆ. ಹೊಸ ವ್ಯಾಪಾರಿ ಸಂಬಂಧಗಳು ಕುದುರಲಿದ್ದು, ನಿಮಗೆ ಸಾಕಷ್ಟು ಧನಲಾಭ ಉಂಟಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಹಿರಿಯ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ. ಪಚ್ಚೆಧಾರಣೆ ನಿಮ್ಮ ಪಾಲಿಗೆ ಶುಭ ಫಲದಾಯಿ ಸಾಬೀತಾಗಲಿದೆ. ಶುಕ್ರನು ನಿಮ್ಮ ರಾಶಿಯ ಅಧಿಪತಿಯಾಗಿರುವ ಕಾರಣ ಈ ಗೋಚರದ ವಿಶೇಷ ಲಾಭ ನಿಮಗೆ ಸಿಗಲಿದೆ.

ಇದನ್ನೂ ಓದಿ-Gajkesari Yog: ಈ ರಾಶಿಯ ಜಾತಕದಲ್ಲಿ ಆಗಸ್ಟ್ 15 ರಿಂದ ನಿರ್ಮಾಣಗೊಳ್ಳುತ್ತಿದೆ ಗಜ ಕೇಸರಿ ಯೋಗ, ಯಾರಿಗೆ ಲಾಭ?

ಸಿಂಹ ರಾಶಿ - ಈ ರಾಶಿಯ ದ್ವಿತೀಯ ಭಾವದಲ್ಲಿ ಶುಕ್ರನ ಈ ಗೋಚರ ಸಂಭವಿಸಲಿದೆ. ಸಾಮಾನ್ಯವಾಗಿ ಜೋತಿಷ್ಯ ಶಾಸ್ತ್ರದಲ್ಲಿ ಈ ಭಾವವನ್ನು ಧನ ಹಾಗೂ ವಾಣಿಯ ಸ್ಥಾನ ಎಂದು ಭಾವಿಸಲಾಗುತ್ತದೆ. ಹೀಗಾಗಿ ಶುಕ್ರ ಗೋಚರದ ಈ ಅವಧಿಯಲ್ಲಿ ಸಿಂಹ ರಾಶಿಯ ಜನರಿಗೆ ಹಲವು ಮೂಲಗಳಿಂದ ಧನಪ್ರಾಪ್ತಿಯಾಗುವ ಸಾಧ್ಯತೆ ಇದೆ. ಆಕಸ್ಮಿಕ ಧನಾಗಮನವು ಕೂಡ ಅದರಲ್ಲಿ ಒಂದು. ವ್ಯಾಪಾರದಲ್ಲಿ ಹಲವು ಮಹತ್ವಪೂರ್ಣ ಒಪ್ಪಂದಗಳು ಕುದುರಲಿವೆ ಮತ್ತು ಅವುಗಳಿಂದ ನಿಮಗೆ ಭವಿಷ್ಯದಲ್ಲಿ ಉತ್ತಮ ಲಾಭ ಸಿಗಲಿದೆ. ಪಾರ್ಟ್ನರ್ ಶಿಪ್ ಕೆಲಸದಲ್ಲಿ ಲಾಭ ಸಿಗುವ ಸಾಧ್ಯತೆ ಇದೆ. ವಕೀಲರು, ಮಾರ್ಕೆಟಿಂಗ್ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಜನರು ಅದರಲ್ಲಿಯೂ ವಿಶೇಷ ವಾಗಿ ಶಿಕ್ಷಕರಿಗೆ ಅಪಾರ ಯಶಸ್ಸು ಲಭಿಸಲಿದೆ.

ಇದನ್ನೂ ಓದಿ-Night Vastu Tips: ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮ ಮೇಲಿರಲು ಮಲಗುವ ಮುನ್ನ ಈ ಸಣ್ಣ ಉಪಾಯ ಅನುಸರಿಸಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News