Atal Setu : ಮುಂಬೈನಲ್ಲಿ ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್ (MTHL) ಅನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.ಅದಕ್ಕೆ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವ ಶೇವಾ ಅಟಲ್ ಸೇತು ಎಂದು ಹೆಸರಿಡಲಾಗಿದೆ. ಇದು ದೇಶದ ಅತಿ ಉದ್ದದ ಸಮುದ್ರ ಸೇತುವೆಯಾಗಿದೆ. ಇದರ ಉದ್ದ 21.8 ಕಿಲೋಮೀಟರ್. ಈ ಸೇತುವೆಯು ಮುಂಬೈ ನಗರವನ್ನು ನವಿ ಮುಂಬೈನ ನವಾ ಶೇವಾ ಪ್ರದೇಶಕ್ಕೆ ಸಂಪರ್ಕಿಸುತ್ತದೆ. ಪ್ರಧಾನಿ ಮೋದಿ ಡಿಸೆಂಬರ್ 2016 ರಲ್ಲಿ ಸೇತುವೆಯ ಶಂಕುಸ್ಥಾಪನೆ ಮಾಡಿದ್ದರು. ಇದರ ನಿರ್ಮಾಣಕ್ಕೆ 17,840 ಕೋಟಿ ರೂ.ಗೂ ಅಧಿಕ ಮೊತ್ತವನ್ನು ವ್ಯಯಿಸಲಾಗಿದೆ. ಈ ಸೇತುವೆಯಲ್ಲಿ ಆರು ಪಥಗಳಲ್ಲಿ ಸಂಚಾರ ನಡೆಸಬಹುದಾಗಿದೆ. 


COMMERCIAL BREAK
SCROLL TO CONTINUE READING

16.5 ಕಿಮೀ ಉದ್ದದ ಮೇಲ್ಸೇತುವೆ : 
ಸೇತುವೆಯ ಉದ್ದವು ಸಮುದ್ರದಲ್ಲಿ ಸುಮಾರು 16.5 ಕಿಮೀ ಮತ್ತು ನೆಲದ ಮೇಲೆ ಸುಮಾರು 5.5 ಕಿಮೀ.ಸಾಗುತ್ತದೆ. ಸೇತುವೆಯ ಉದ್ಘಾಟನೆಯೊಂದಿಗೆ ಮುಂಬೈನಲ್ಲಿ ಸಂಚಾರ ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆಯಿದೆ. ಇದರ  ಲೋಕಾರ್ಪಣೆಯೊಂದಿಗೆ ದಕ್ಷಿಣ ಮುಂಬೈ ಮತ್ತು ನವಿ ಮುಂಬೈ ನಡುವಿನ ಪ್ರಯಾಣವು 2 ಗಂಟೆಯಿಂದ 20 ನಿಮಿಷಗಳಿಗೆ ಕಡಿತವಾಗುತ್ತದೆ. ಮುಂಬೈನ ಆರ್ಥಿಕ ಅಭಿವೃದ್ಧಿಯಲ್ಲಿಯೂ ಈ ಸೇತುವೆ ಪ್ರಮುಖ ಪಾತ್ರ ವಹಿಸಲಿದೆ. ಇದರೊಂದಿಗೆ ರಾಯಗಢದ ಕೈಗಾರಿಕಾ ವಲಯವನ್ನು ಸುಲಭವಾಗಿ ತಲುಪಬಹುದು.


ಇದನ್ನೂ ಓದಿ : ಶ್ರೀರಾಮನನ್ನು ನೋಡಲು ಅಯೋಧ್ಯೆಗೆ ಹೋಗ್ತೀರಾ..? ಈ ನಿಮಯಗಳನ್ನು ನೀವು ಪಾಲಿಸಲೇಬೇಕು


ಗಂಟೆಗೆ 100 ಕಿ.ಮೀ ವೇಗದಲ್ಲಿ ಚಲಿಸಬಹುದು : 
ಸೇತುವೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಆಧಾರದ ಮೇಲೆ ನಿರ್ಮಿಸಲಾಗಿದೆ. ಸೇತುವೆಯನ್ನು ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್ ಕಾರ್ಪೊರೇಷನ್ (MTHL) ನಿರ್ವಹಿಸುತ್ತದೆ. ಈ ಸೇತುವೆಯ ಉದ್ಘಾಟನೆಯೊಂದಿಗೆ ಮುಂಬೈನಿಂದ ಪುಣೆ, ಗೋವಾ ಮತ್ತು ದಕ್ಷಿಣಕ್ಕೆ ಪ್ರಯಾಣವೂ ಸುಲಭವಾಗುತ್ತದೆ. ಇದರ ಮೇಲೆ, ಕಾರುಗಳು ಗಂಟೆಗೆ ಗರಿಷ್ಠ 100 ಕಿಮೀ ವೇಗದಲ್ಲಿ ಚಲಿಸುವುದು  ಸಾಧ್ಯವಾಗುತ್ತದೆ.


ಟೋಲ್ ದರ:
MTHL ಮೂಲಕ ಪ್ರಯಾಣಿಸಿದರೆ,  ಒನ್ ವೆ ಪ್ರಯಾಣಕ್ಕಾಗಿ  250 ರೂಪಾಯಿ  ಟೋಲ್ ಪಾವತಿಸಬೇಕಾಗುತ್ತದೆ. ರೌಂಡ್ ಟ್ರಿಪ್ ಗೆ 375 ರೂ.ನೀಡಬೇಕಾಗುತ್ತದೆ.  ಒಂದು ವರ್ಷದ ನಂತರ ಟೋಲ್ ಮರುಪರಿಶೀಲಿಸಲಾಗುವುದು ಎಂದು ಸರ್ಕಾರ ಹೇಳಿದೆ. ಪ್ರಸ್ತುತ, ಬಾಂದ್ರಾ-ವರ್ಲಿ ಸೀ ಲಿಂಕ್‌ನಲ್ಲಿ  85 ರೂ. ಮತ್ತು ರೌಂಡ್ ಟ್ರಿಪ್‌ಗೆ  127 ರೂ. ಟೋಲ್ ಪಾವತಿಸಬೇಕಾಗುತ್ತದೆ. MTHL ನಲ್ಲಿ ಬೈಕ್‌, ಆಟೋ ಮತ್ತು ಟ್ರ್ಯಾಕ್ಟರ್‌ಗಳ  ಸಂಚಾರ ನಿಷೇಧಿಸಲಾಗಿದೆ. ಈ ಸೇತುವೆ ನಿರ್ಮಾಣಕ್ಕೆ 177,903 ಮೆಟ್ರಿಕ್ ಟನ್ ಉಕ್ಕು ಮತ್ತು 504,253 ಮೆಟ್ರಿಕ್ ಟನ್ ಸಿಮೆಂಟ್ ಬಳಸಲಾಗಿದೆ. 


ಇದನ್ನೂ ಓದಿ : Atal Setu Inauguration: ಇಂದು ಉದ್ಘಾಟನೆಗೊಳ್ಳಲಿದೆ ಅತಿ ಉದ್ದದ ಸಮುದ್ರ ಸೇತುವೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.