ನವದೆಹಲಿ: 24 ವರ್ಷಗಳ ದ್ವೇಷವನ್ನುಮರೆತು ಇದೇ ಮೊದಲ ಬಾರಿಗೆ ವೇದಿಕೆಯಲ್ಲಿ ಕಾಣಿಸಿಕೊಂಡ ಮುಲಾಯಂ ಸಿಂಗ್ ಯಾದವ್, ಮಾಯಾವತಿ ಈ ಬಾರಿ ಮೈತ್ರಿಕೂಟದ ಮೂಲಕ ಉತ್ತರ ಪ್ರದೇಶದಲ್ಲಿ ಬಿಜೆಪಿ ಪ್ರಾಬಲ್ಯಕ್ಕೆ ಸವಾಲನ್ನೊಡ್ಡಿದ್ದಾರೆ.


COMMERCIAL BREAK
SCROLL TO CONTINUE READING

ಮುಲಾಯಂ ಸಿಂಗ್ ಅವಾ ಲೋಕಸಭಾ ಕ್ಷೇತ್ರ ಮೇನ್ಪುರಿಯಲ್ಲಿ ಎಸ್ಪಿ ಮತ್ತು ಬಿಎಸ್ಪಿ ಜಂಟಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಬಿಎಸ್ಪಿ ನಾಯಕಿ ಮಾಯಾವತಿ "ಮುಲಾಯಂ ಸಿಂಗ್ ಯಾದವ್ ಹಿಂದುಳಿದ ವರ್ಗಗಳ ನಿಜವಾದ ನಾಯಕ,ಆದರೆ ಮೋದಿ ಹಾಗೆ ನಕಲಿ ನಾಯಕರಲ್ಲ "ಎಂದು ಹೇಳಿದರು.



"ಕೆಲವು ಸಂದರ್ಭದಲ್ಲಿ  ಭವಿಷ್ಯದ ರಾಷ್ಟ್ರದ ಹಿತಾಸಕ್ತಿಗಾಗಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಮುಲಾಯಂ ಸಿಂಗ್ ಯಾದವ್ ಅವರು ಸಾಕಷ್ಟು ಬದಲಾಗಿದ್ದಾರೆ.ಜನರಿಗೆ ಅದರಲ್ಲೂ ಮಹಿಳೆಯರಿಗೆ ಹೆಚ್ಚಿನ ಆಧ್ಯತೆಯನ್ನು ಅವರು ಸಮಾಜವಾದಿ ಪಕ್ಷದ ಆಡಳಿತ ಅವಧಿಯಲ್ಲಿ ನೀಡಿದ್ದಾರೆ" ಎಂದು ಮಾಯಾವತಿ ಹೇಳಿದರು.


ಇದೇ ವೇಳೆ ಮಾತನಾಡಿದ ಮುಲಾಯಂ ಸಿಂಗ್ "ನಾವು ಮಾಯಾವತಿಯನ್ನು ಸ್ವಾಗತಿಸುತ್ತೇವೆ, ಅವರನ್ನು ನಾನು ಯಾವಾಗಲೂ ಗೌರವಿಸುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು".


1995 ರಲ್ಲಿ ನಡೆದ ಗೆಸ್ಟ್ ಹೌಸ್ ಪ್ರಕರಣದ ನಂತರ ಎಸ್ಪಿ ಬಿಎಸ್ಪಿ ಸಂಬಂಧ ಹಳಸಿತ್ತು. ಹಿಂದುಳಿದ ಮತ್ತು ದಲಿತ ವರ್ಗದ ಮತ ವಿಭಜನೆಯ ಲಾಭ ಪಡೆದ ಬಿಜೆಪಿ 2014 ರ ಲೋಕಸಭಾ ಚುನಾವಣೆಯಲ್ಲಿ 70ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಎಸ್ಪಿ-ಬಿಎಸ್ಪಿ ಅಸ್ತಿತ್ವವನ್ನು ಅಲುಗಾಡಿಸಿತ್ತು.ಇದಾದ ನಂತರ ಬಿಜೆಪಿಯನ್ನು ಹಿಮ್ಮಟ್ಟಿಸಲು ಮೈತ್ರಿಕೂಟ ಅನಿವಾರ್ಯ ಎನ್ನುವುದನ್ನು ಕೈರಾಣಾ ಲೋಕಸಭಾ ಚುನಾವಣೆ ತೋರಿಸಿತ್ತು.ಈ ಹಿನ್ನಲೆಯಲ್ಲಿ ಎಸ್ಪಿ ಮತ್ತು ಬಿಎಸ್ಪಿ ಪಕ್ಷಗಳು ಕಾಂಗ್ರೆಸ್ ಹೊರತಾದ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸಿದವು.