ಮುಂಬೈ: ಪ್ರಯಾಣಿಕರು ಮತ್ತು ವಿಮಾನಯಾನ ಸೌಲಭ್ಯವನ್ನು ಗುರಿಯಾಗಿಟ್ಟುಕೊಂಡು ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಸಿಎಸ್‌ಎಂಐಎ) ಟರ್ಮಿನಲ್ 2 ರಿಂದ ಇಂಡಿಗೊ, ಸ್ಪೈಸ್‌ಜೆಟ್ ಮತ್ತು ಗೋಏರ್‌ನ ಎಲ್ಲಾ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಏಕೀಕರಿಸಿದೆ.


COMMERCIAL BREAK
SCROLL TO CONTINUE READING

ಇಂಡಿಗೊ ಮತ್ತು ಗೋಏರ್ ದೇಶೀಯ ವಿಮಾನಗಳು ಟರ್ಮಿನಲ್ 1 ಮತ್ತು ಸ್ಪೈಸ್ ಜೆಟ್ ದೇಶೀಯ ವಿಮಾನಗಳು ಟರ್ಮಿನಲ್ 2 ರಿಂದ ಕಾರ್ಯನಿರ್ವಹಿಸಲಿವೆ.


"ಅಕ್ಟೋಬರ್ 1 ರಿಂದ ಇಂಡಿಗೊ ಮತ್ತು ಗೋಏರ್‌ನ ತನ್ನ ಎಲ್ಲಾ ದೇಶೀಯ ವಿಮಾನಗಳನ್ನು ಟಿ 1 ನಿಂದ ಕಾರ್ಯನಿರ್ವಹಿಸಲಿದ್ದರೆ,ಟಿ 2 ನಿಂದ ಎಲ್ಲಾ ಅಂತರಾಷ್ಟ್ರೀಯ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಸ್ಪೈಸ್ ಜೆಟ್ ಪೂರ್ಣ ಕಾರ್ಯಾಚರಣೆಯನ್ನು ಟಿ 2 ಗೆ ವರ್ಗಾವಣೆಗೊಳ್ಳಲಿದೆ. ಪ್ರಯಾಣಿಕರ ಹೆಚ್ಚಿನ ಅನುಕೂಲಗಳನ್ನು ಗಮನದಲ್ಲಿಟ್ಟುಕೊಂಡು ವಿಮಾನಯಾನ ಸಂಸ್ಥೆಗಳ ರಚನಾತ್ಮಕ ಕ್ರಮವನ್ನು ಪ್ರಾರಂಭಿಸಲಾಗಿದೆ ”ಎಂದು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.


2018-2019ರಲ್ಲಿ, ಸಿಎಸ್‌ಎಂಐಎನಲ್ಲಿ 48 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ.


"ಭಾರತದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಟರ್ಮಿನಲ್ ಬೋರ್ಡಿಂಗ್ ಸೇತುವೆಗಳೊಂದಿಗೆ ಟರ್ಮಿನಲ್ 1 ಅನ್ನು ಹಂಚಿಕೆ ಮಾಡಿದೆ" ಎಂದು ಪ್ರಕಟಣೆ ತಿಳಿಸಿದೆ.


"ವಿಮಾನ ನಿಲ್ದಾಣದ ಟರ್ಮಿನಲ್ 2 ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನವನ್ನು ನಿರ್ವಹಿಸುತ್ತಿದೆ.  ವಿಮಾನ ನಿಲ್ದಾಣವು ಪ್ರಸ್ತುತ 50 ಅಂತರರಾಷ್ಟ್ರೀಯ ಮತ್ತು 9 ದೇಶೀಯ ವಿಮಾನಯಾನ ಸಂಸ್ಥೆಗಳನ್ನು ನಿರ್ವಹಿಸುತ್ತಿದೆ. ಸಿಎಸ್‌ಎಂಐಎಯ ಪ್ರಾಥಮಿಕ ರನ್‌ವೇ ಗಂಟೆಗೆ 46 ಕ್ಕೂ ಹೆಚ್ಚು ಆಗಮನ ಮತ್ತು ನಿರ್ಗಮನಗಳನ್ನು ನಿರ್ವಹಿಸುತ್ತದೆ ಮತ್ತು ದ್ವಿತೀಯ ರನ್‌ವೇಯಲ್ಲಿ ಗಂಟೆಗೆ 35 ವಿಮಾನಗಳ ಹಾರಾಟದ ಸಾಮರ್ಥ್ಯವನ್ನು ಹೊಂದಿದೆ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.