ಮುಂಬೈ: ಮುಂಬೈನ ಬೊರಿವಾಲಿಯಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು ಇದರಿಂದಾಗಿ  ಜನರು ಭಯಭೀತರಾಗಿದ್ದಾರೆ. ಘಟನಾ ಸ್ಥಳಕ್ಕೆ ಸದ್ಯ 14 ಅಗ್ನಿಶಾಮಕ ವಾಹನವ್ಗಳು ತಲುಪಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 



COMMERCIAL BREAK
SCROLL TO CONTINUE READING

ಘಟನಾ ಸ್ಥಳದಲ್ಲಿ 14 ಅಗ್ನಿಶಾಮಕ ವಾಹನಗಳು:
ಮುಂಬೈನ ಬೊರಿವಾಲಿ ವೆಸ್ಟ್ ಪ್ರದೇಶದ ಶಾಪಿಂಗ್ ಕೇಂದ್ರದಲ್ಲಿ ಶನಿವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಮೊದಲಿಗೆ ನೆಲಮಾಳಿಗೆಯಲ್ಲಿ ಕಾಣಿಸಿಕೊಂಡ ಬೆಂಕಿ ಶೀಘ್ರದಲ್ಲೇ ಎರಡನೇ ಮಹಡಿಗೆ ಹರಡಿದೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆಯ ತಂಡಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ.  14 ಅಗ್ನಿಶಾಮಕ ವಾಹನಗಳು ಅಗ್ನಿ ನಂದಿಸಲು ಹರಸಾಹಸ ಪಡುತ್ತಿವೆ. ಇನ್ನೊಂದೆಡೆ ವಾತಾಯನಕ್ಕಾಗಿ ಜೆಸಿಬಿಯ ಸಹಾಯದಿಂದ ಕಟ್ಟಡದ ಸೈಡ್ ಗ್ರಿಲ್‌ಗಳನ್ನು ಮುರಿಯಲಾಗುತ್ತಿದೆ. 



ಈ ಅವಘಡ ಬೆಳಗ್ಗೆಯೇ ಸಂಭವಿಸಿರುವುದರಿಂದ ಶಾಪಿಂಗ್ ಸೆಂಟರ್ ನಲ್ಲಿ ಜನರಿರಲಿಲ್ಲ. ಇಲ್ಲದಿದ್ದರೆ ದೊಡ್ಡ ಅಪಘಾತ ಸಂಭವಿಸುತ್ತಿತ್ತು. ಸದ್ಯಕ್ಕೆ ಬೆಂಕಿ ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ  ಎಂದು ಹೇಳಲಾಗಿದೆ.