Vande Bharat Express Latest News Today : ಮುಂಬೈ-ಗಾಂಧಿನಗರ ಮಧ್ಯ ಓಡಾಡುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಎಮ್ಮೆಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಂಜಿನ್​ಗೆ ಭಾರಿ ಹಾನಿಯಾಗಿರುವ ಘಟನೆ ಮಣಿನಗರ ನಡುವಿನ ಮಾರ್ಗದಲ್ಲಿ  ಸಂಭವಿಸಿದೆ.


COMMERCIAL BREAK
SCROLL TO CONTINUE READING

ಈ ಘಟನೆ ಇಂದು ಬೆಳಗ್ಗೆ 11.15 ರ ಸುಮಾರಿಗೆ ವತ್ವಾ ನಿಲ್ದಾಣದಿಂದ ಮಣಿನಗರ ಬಂದ ಮೇಲೆ ಅಪಘಾತಕ್ಕೀಡಾಗಿದೆ. ಈ ಅಪಘಾತದಿಂದ ಇಂಜಿನ್‌ನ ಮುಂಭಾಗದ ಭಾಗಕ್ಕೆ ಹಾನಿಯಾಗಿದೆ ಎಂದು ಪಶ್ಚಿಮ ರೈಲ್ವೆಯ ಎಸ್‌ಆರ್‌ಒ ಜೆಕೆ ಜಯಂತ್ ತಿಳಿಸಿದ್ದಾರೆ.


ಆಜಾನ್ ಕೇಳುತ್ತಿದ್ದಂತೆ ಭಾಷಣ ನಿಲ್ಲಿಸಿದ ಅಮಿತ್ ಶಾ: ಕಾಶ್ಮೀರದಲ್ಲಿ ಸೌಹಾರ್ದತೆ ಮೆರೆದ ಗೃಹ ಸಚಿವರಿಗೆ ಜನಮೆಚ್ಚುಗೆ


ವರದಿಗಳ ಪ್ರಕಾರ, ರೈಲು ಚಲಿಸುತ್ತಿರುವ ವೇಳೆ 3-4 ಎಮ್ಮೆಗಳು ಹಳಿಯ ಮೇಲೆ ಅಡ್ಡಲಾಗಿ ಬಂದ ಪರಿಣಾಮ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮೃತ ಪ್ರಾಣಿಗಳ ದೇಹ ತೆಗೆದ ನಂತರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿಧಾನವಾಗಿ ಚಲಿಸಿ 8 ನಿಮಿಷ ಲೇಟ ಆಗಿ ಗಾಂಧಿನಗರ ನಿಲ್ದಾಣವನ್ನು ತಲುಪಿತು.ಭವಿಷ್ಯದಲ್ಲಿ ಇಂತಹ ಅವಘಡಗಳನ್ನು ತಪ್ಪಿಸಲು, ರೈಲ್ವೆ ಹಳಿಗಳ ಬಳಿ ಜಾನುವಾರುಗಳನ್ನು ಬಿಡದಂತೆ ಹತ್ತಿರದ ಗ್ರಾಮಸ್ಥರಿಗೆ ಸಲಹೆ ನೀಡಲು ಪ್ರಯತ್ನಿಸುತ್ತಿದೆ.


ರೈಲ್ವೆ ಹಳಿಗಳ ಬಳಿ ಜಾನುವಾರುಗಳನ್ನು ಬಿಡದಂತೆ ಹತ್ತಿರದ ಗ್ರಾಮಸ್ಥರಿಗೆ ರೈಲ್ವೆ ಇಲಾಖೆ  ಸಲಹೆ ನೀಡಿದೆ. 


ಕೆಎಸ್‌ಆರ್‌ಟಿಸಿ ಬಸ್‌ಗೆ ಟೂರಿಸ್ಟ್ ಬಸ್ ಡಿಕ್ಕಿ - ಒಂಭತ್ತು ಮಂದಿ ಸಾವು, 6 ಜನರ ಸ್ಥಿತಿ ಗಂಭೀರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.