ಕೆಎಸ್‌ಆರ್‌ಟಿಸಿ ಬಸ್‌ಗೆ ಟೂರಿಸ್ಟ್ ಬಸ್ ಡಿಕ್ಕಿ - ಒಂಭತ್ತು ಮಂದಿ ಸಾವು, 6 ಜನರ ಸ್ಥಿತಿ ಗಂಭೀರ

ಕೆಎಸ್‌ಆರ್‌ಟಿಸಿ ಬಸ್‌ಗೆ ಟೂರಿಸ್ಟ್ ಬಸ್  ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 9 ಮಂದಿ ಅಸು ನೀಗಿದ್ದಾರೆ. 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Written by - Ranjitha R K | Last Updated : Oct 6, 2022, 11:11 AM IST
  • ಕೆಎಸ್‌ಆರ್‌ಟಿಸಿ ಬಸ್‌ಗೆ ಟೂರಿಸ್ಟ್ ಬಸ್ ಡಿಕ್ಕಿ
  • 9 ಮಂದಿ ಸ್ಥಳದಲ್ಲೇ ಸಾವು, 6 ಜನರ ಸ್ಥಿತಿ ಗಂಭೀರ
  • 35 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಕೆಎಸ್‌ಆರ್‌ಟಿಸಿ ಬಸ್‌ಗೆ ಟೂರಿಸ್ಟ್ ಬಸ್  ಡಿಕ್ಕಿ - ಒಂಭತ್ತು ಮಂದಿ  ಸಾವು,  6 ಜನರ ಸ್ಥಿತಿ ಗಂಭೀರ   title=
bus accident

ಪಾಲಕ್ಕಾಡ್ : ಪಾಲಕ್ಕಾಡ್ ಜಿಲ್ಲೆಯ ವಡಕ್ಕೆಂಚೇರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹಿಂಬದಿ  ಬಂದ ಟೂರಿಸ್ಟ್ ಬಸ್  ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ 9 ಜನರು  ದಾರುಣವಾಗಿ ಮೃತಪಟ್ಟಿದ್ದಾರೆ.  35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಗಾಯಾಳುಗಳ ಪೈಕಿ 6 ಜನರ ಸ್ಥಿತಿ ಚಿಂತಾಜನಕವಾಗಿದೆ. 

ಪ್ರವಾಸಿ ಬಸ್ ಎರ್ನಾಕುಲಂ ಜಿಲ್ಲೆಯ ಬಸೆಲಿಯೋಸ್ ವಿದ್ಯಾನಿಕೇತನದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಹೊತ್ತು ಊಟಿಗೆ ತೆರಳುತ್ತಿತ್ತು.  KSRTC ಬಸ್ ಕೊಯಮತ್ತೂರಿಗೆ ಹೋಗುತ್ತಿತ್ತು. ದುರ್ಘಟನೆಯಲ್ಲಿ 5 ವಿದ್ಯಾರ್ಥಿಗಳು ಒಬ್ಬ ಶಿಕ್ಷಕರು ಮತ್ತು KSRTC ಬಸ್ ನಲ್ಲಿದ್ದ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆಎಂದು ತಿಳಿದು ಬಂದಿದೆ. 

ಇದನ್ನೂ ಓದಿ :  ಯಮುನಾನಗರದಲ್ಲಿ ರಾವಣ ದಹನದ ವೇಳೆ ನೆರೆದಿದ್ದವರ ಮೇಲೆ ಬಿದ್ದ ರಾವಣ ಪ್ರತಿಕೃತಿ, ವಿಡಿಯೋ ವೈರಲ್

ಅತಿವೇಗವೇ ಅಪಘಾತಕ್ಕೆ ಪ್ರಾಥಮಿಕ ಕಾರಣ ಎಂದು ಮೂಲಗಳು ತಿಳಿಸಿವೆ. ಬಸ್ ಗಂಟೆಗೆ 97.2 ಕಿಮೀ ವೇಗದಲ್ಲಿ ಚಲಿಸುತ್ತಿತ್ತು ಎನ್ನಲಾಗಿದೆ. ರಾತ್ರಿ 11:45ಕ್ಕೆ ಅಪಘಾತ ಸಂಭವಿಸಿದೆ. ಟೂರಿಸ್ಟ್ ಬಸ್ ಕೆಎಸ್‌ಆರ್‌ಟಿಸಿ ಬಸ್ ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದಾಗ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ. ಪಾಲಕ್ಕಾಡ್‌ನ ವಡಕ್ಕಂಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. 
 
ಇದನ್ನೂ ಓದಿ :  ಬ್ಯಾಂಕ್‌ನಿಂದ ₹ 12 ಕೋಟಿ ನಗದು ಕಳ್ಳತನ, ಎರಡು ತಿಂಗಳ ನಂತರ ಆರೋಪಿ ಬಂಧನ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News