ಮುಂಬೈ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಡರಾತ್ರಿ ಧಾರಾಕಾರ ಮಳೆಯಾಗಿದೆ. ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಸಂಚಾರ ವ್ಯವಸ್ಥೆಗೆ ಅಡ್ಡಿಯುಂಟಾಗಿದೆ. ಅಂದಾಜಿನ ಪ್ರಕಾರ, ನಗರವು ಸುಮಾರು 200 ಮಿಮೀ ಮಳೆ ಪಡೆದಿದೆ. ಆದಾಗ್ಯೂ, ಇದುವರೆಗೆ ನಗರದ ಯಾವುದೇ ಭಾಗದಿಂದ ಪ್ರವಾಹದ ಬಗ್ಗೆ ಯಾವುದೇ ವರದಿಗಳಿಲ್ಲ. ಆದರೆ ಕೆಲವು ಪ್ರದೇಶಗಳಲ್ಲಿ ನೀರು ನುಗ್ಗಿರುವ ಬಗ್ಗೆ ವರದಿಗಳಾಗಿವೆ.


COMMERCIAL BREAK
SCROLL TO CONTINUE READING

ಭಾನುವಾರ ರಾತ್ರಿ ಮೆಟ್ರೊ ಸಿನೆಮಾ ಬಳಿ ಮರದ ಬಿದ್ದ ಬಳಿಕ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಐದು ಮಂದಿ ಗಾಯಗೊಂಡಿದ್ದಾರೆ.


ಕಳೆದ 24 ಗಂಟೆಗಳಲ್ಲಿ ಸ್ಯಾಂಟಕ್ರೂಜ್ ಸೇರಿದಂತೆ ಹಲವು ಸ್ಥಳಗಳಲ್ಲಿ ಸುಮಾರು 200 ಮಿಮೀ ಮಳೆಯಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಇದರ ಪ್ರಮಾಣ ಕಡಿಮೆಯಾಗಲಿದೆ. 



ಇನ್ನು ಮಳೆಯಿಂದಾಗಿ ರೈಲು ಸಂಚಾರ ವಿಳಂಬವಾಗಿವೆ. ಸ್ಥಳೀಯ ರೈಲುಗಳು ಕೆಲವು ಮಾರ್ಗಗಳಲ್ಲಿ ವಿಳಂಬವಾಗಲಿವೆ. 



ಪ್ರವಾಹದ ಬಗ್ಗೆ ಯಾವುದೇ ವರದಿಗಳಾಗಿಲ್ಲ. ಆದರೆ ಸ್ಕೈಮೆಟ್ ಭಾರಿ ಮಳೆಯಾಗುವ ಬಗ್ಗೆ ಊಹಿಸಿದೆ.