ಮುಂಬೈ: ಮುಂಬೈ ಎನ್‌ಸಿಪಿ ಅಧ್ಯಕ್ಷ ಸಚಿನ್ ಅಹಿರ್ ಅವರು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಸಮ್ಮುಖದಲ್ಲಿ ಗುರುವಾರ ಶಿವಸೇನೆಗೆ ಸೇರ್ಪಡೆಗೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಅಹಿರ್ ಶಿವಸೇನೆ ಸೇರ್ಪಡೆಯಿಂದಾಗಿ ಎನ್‌ಸಿಪಿಗೆ ಭಾರೀ ಹೊಡೆತ ಬಿದ್ದಂತಾಗಿದೆ.  ಎನ್‌ಸಿಪಿಯ ಹಿರಿಯ ನಾಯಕರಾಗಿದ್ದ ಅಹಿರ್ ಮಹಾರಾಷ್ಟ್ರದಲ್ಲಿ 2009-2014ರ ಅವಧಿಯಲ್ಲಿದ್ದ ಕಾಂಗ್ರೆಸ್-ಎನ್‌ಸಿಪಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.


ಮುಂಬೈನ ವರ್ಲಿಯವರಾಗಿರುವ ಅಹಿರ್, ಎನ್‌ಸಿಪಿ ಮುಖ್ಯಸ್ಥ ಪವಾರ್ ಗೆ ಬಹಳ ಆಪ್ತರಾಗಿದ್ದರು ಎನ್ನಲಾಗಿದೆ. ಆದರೀಗ ಅಹಿರ್ ಶಿವಸೇನೆಗೆ ಸೇರ್ಪಡೆಯಿಂದಾಗಿ ಮಹಾರಾಷ್ಟ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಭವಿಷ್ಯದ ಮೇಲೆ ಮಹತ್ವದ ಪರಿಣಾಮ ಬೀರಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.