ನವದೆಹಲಿ: ಮುಂಬೈ-ಕೊಲ್ಹಾಪುರ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್‌ನಲ್ಲಿ ಶುಕ್ರವಾರ ರಾತ್ರಿಯಿಂದ ನೂರಾರು ಪ್ರಯಾಣಿಕರು ಥಾಣೆ ಜಿಲ್ಲೆಯ ವಂಗಾನಿ ಬಳಿ ರೈಲಿನಲ್ಲಿ ಸಿಲುಕಿಕೊಂಡಿದ್ದಾರೆ.ಈಗ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರವಾಹದ ವೀಡಿಯೋವನ್ನು ಶೇರ್ ಮಾಡಿ ಅಂಗಲಾಚುತ್ತಿದ್ದಾರೆ. ಮಾನ್ಸೂನ್  ಭಾರಿ ಮಳೆಯಿಂದಾಗಿ ಈಗ ಮುಂಬೈನಲ್ಲಿ ಪ್ರವಾಹದ ಭೀಕರ ಪ್ರವಾಹ ಉಂಟಾಗಿದೆ.



COMMERCIAL BREAK
SCROLL TO CONTINUE READING

ಮುಂಬಯಿಯಿಂದ ಶನಿವಾರ 60 ಕಿ.ಮೀ ದೂರದಲ್ಲಿರುವ ಪ್ರಯಾಣಿಕರ ರೈಲಿನಲ್ಲಿ ಪ್ರವಾಹದ ಮಧ್ಯ 700 ಜನರು ಸಿಲುಕಿಕೊಂಡಿದ್ದು, ಈಗ ಅವರ ರಕ್ಷಣೆಗಾಗಿ ಎರಡು ಮಿಲಿಟರಿ ಹೆಲಿಕಾಪ್ಟರ್‌ಗಳು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ ಆರು ದೋಣಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಗಿಸಿಕೊಂಡಿವೆ. ಕಳೆದ 15 ಗಂಟೆಗಳಲ್ಲಿ ತಮಗೆ ಕುಡಿಯುವ ನೀರು ಅಥವಾ ಆಹಾರವಿಲ್ಲ ಮತ್ತು ಎಲ್ಲಾ ಕಡೆಗಳಲ್ಲಿ ಐದರಿಂದ ಆರು ಅಡಿ ನೀರು ಆವರಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.



ಇನ್ನೊಂದೆಡೆಗೆ  ಹೊರಗಡೆ ಅಪಾಯದ ನೀರಿನ ಮಟ್ಟ ಇರುವುದರಿಂದ ರೈಲ್ವೆ ಪ್ರಯಾಣಿಕರಿಗೆ ರೈಲಿನಿಂದ ಇಳಿಯದಿರಲು ಸೂಚಿಸಲಾಗಿದೆ. ಈಗ ಮಹಾರಾಷ್ಟ್ರ ಸಚಿವ ಏಕನಾಥ್ ಗಾಯಕ್ವಾಡ್  ಮಾತನಾಡಿ 'ರಕ್ಷಣಾ ಕಾರ್ಯಾಚರಣೆಗೆ ಎರಡು ಹೆಲಿಕಾಪ್ಟರ್‌ಗಳು ಸಹಾಯ ಮಾಡಲಿದ್ದು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಅಥವಾ ಎನ್‌ಡಿಆರ್‌ಎಫ್‌ನ ಆರು ತಂಡಗಳು ಮುಂಬೈ, ಥಾಣೆ ಮತ್ತು ಪುಣೆಯಿಂದ ನೆಲಕ್ಕೆ ಉಬ್ಬಿಕೊಳ್ಳಬಲ್ಲ ರಬ್ಬರ್ ದೋಣಿಗಳೊಂದಿಗೆ ಸಹಾಯ ಮಾಡುತ್ತವೆ ಎಂದು ಹೇಳಿದ್ದಾರೆ.



ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 500 ಕ್ಕೂ ಹೆಚ್ಚು ಪ್ರಯಾಣಿಕರನ್ನು ಈಗಾಗಲೇ ರಕ್ಷಿಸಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬದ್ಲಾಪುರ, ಉಲ್ಹಾಸ್‌ನಗರ, ವಂಗಾನಿ ಪಟ್ಟಣಗಳಲ್ಲಿನ ಹೆಚ್ಚಿನ ಪ್ರದೇಶಗಳು ಶನಿವಾರದ ಆರಂಭದಿಂದಲೂ ಮುಳುಗಿದ್ದವು,



ರಾತ್ರಿಯಿಡೀ ಭಾರಿ ಮಳೆ ಮುಂದುವರಿದಿದ್ದರಿಂದ ಮುಂಬಯಿಯಲ್ಲಿ ವಾಯು ಮತ್ತು ರೈಲು ಸಂಚಾರಕ್ಕೆ ತೊಂದರೆಯಾಯಿತು. ಗೋಚರತೆಯ ಏರಿಳಿತದಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ 11 ವಿಮಾನಗಳನ್ನು ರದ್ದುಪಡಿಸಲಾಗಿದೆ. ಹಲವಾರು ವಿಮಾನಗಳನ್ನು ಸಹ ತಿರುಗಿಸಲಾಯಿತು.