ಮುಂಬೈ: ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮುಂಬೈ (Mumbai) ನಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿತ್ತಿದ್ದ 35 ಜನರನ್ನು ಸೆರೆಹಿಡಿಯಲಾಗಿದೆ. ಆದಾಗ್ಯೂ ಈ ಅಂಕಿ ಅಂಶವು ಕಳೆದ ಕೆಲವು ವರ್ಷಗಳಿಗಿಂತ ತೀರಾ ಕಡಿಮೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಕಳೆದ ವರ್ಷ 677, ಈ ವರ್ಷ ಕೇವಲ 35 :
ಕಳೆದ ವರ್ಷ ಮುಂಬೈ (Mumbai) ನಲ್ಲಿ ಹೊಸ ವರ್ಷದ ಸಂದರ್ಭದಲ್ಲಿ 677 ಜನರು ಕುಡಿದು ವಾಹನ ಚಲಾಯಿಸುವಾದ ಸಿಕ್ಕಿಬಿದ್ದಿದ್ದರು ಮತ್ತು ಅವರ ಪರವಾನಗಿಯನ್ನು ನ್ಯಾಯಾಲಯವು ಆರು ತಿಂಗಳವರೆಗೆ ರದ್ದುಗೊಳಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಈ ವರ್ಷ ನಗರದಲ್ಲಿ ಕೇವಲ 35 ಜನರು ಕುಡಿದು ವಾಹನ ಚಲಾಯಿಸುತ್ತಿದ್ದದ್ದು ಪತ್ತೆಯಾಗಿದೆ. ಈ ಸಂಖ್ಯೆ ಹಿಂದಿನ ವರ್ಷಗಳಿಗಿಂತ ತೀರಾ ಕಡಿಮೆ. ಇದೊಂದು ಹೊಸ ದಾಖಲೆಯೇ ಸರಿ ಎನ್ನಲಾಗುತ್ತಿದೆ.


ವಾಸ್ತವವಾಗಿ ವಾಹನಗಳ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು, ಹೊಸ ವರ್ಷದ ಮುನ್ನಾದಿನದಂದು ನಗರದ ಅನೇಕ ಸ್ಥಳಗಳಲ್ಲಿ ಮುಂಬೈ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಲ್ಲದೆ ಕರೋನಾವೈರಸ್ (Coronavirus) ಅನ್ನು ನಿಗ್ರಹಿಸುವ ದೃಷ್ಟಿಯಿಂದ ಜಾರಿಗೆ ತರಲಾಗಿರುವ ರಾತ್ರಿ ಕರ್ಫ್ಯೂ (Night Curfew)  ಹಿನ್ನಲೆಯಲ್ಲಿ ಹೆಚ್ಚಿನ ಜನರು ಮನೆಯಲ್ಲಿ ಹೊಸ ವರ್ಷವನ್ನು ಆಚರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 


ಇದನ್ನೂ ಓದಿ : ಎಚ್ಚರ: Pizza ಆಸೆಗೆ ಅಕೌಂಟ್ ಖಾಲಿಯಾಗದಿರಲಿ!


ಜನವರಿ 5 ರವರೆಗೆ ಕರ್ಫ್ಯೂ ಜಾರಿ :
ಜಾಗತಿಕ ಸಾಂಕ್ರಾಮಿಕ ಕಾರಣ ಸಂಚಾರ ಪೊಲೀಸರು ಉಸಿರಾಟದ ವಿಶ್ಲೇಷಕವನ್ನು ಬಳಸದಿರಲು ನಿರ್ಧರಿಸಿದರು. ಈ ಕಾರಣದಿಂದಾಗಿ ಚಾಲಕರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಯಿತು. ರಕ್ತ ಮಾದರಿಗಳ ಪರೀಕ್ಷೆಯಲ್ಲಿ 35 ಚಾಲಕರು ಕುಡಿದಿರುವುದು ಕಂಡುಬಂದಿದೆ. ಈ ಆಧಾರದ ಮೇಲೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ  ಎಂದು ಅವರು ಹೇಳಿದರು.


ಇದನ್ನೂ ಓದಿ : New Year ಸಂಭ್ರಮಾಚರಣೆಗೆ ಕರೋನಾ ಗ್ರಹಣ, ಹಲವೆಡೆ ಸೆಕ್ಷನ್ 144 ಜಾರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.