ಮ್ಯಾನ್ಮಾರ್ ಸೇನಾ ವಿಮಾನ ಪತನ: ಆರು ಮಂದಿಗೆ ಗಾಯ
Myanmar military plane crash: ವಿಮಾನದಲ್ಲಿ ಪೈಲಟ್ ಸೇರಿದಂತೆ 14 ಜನರಿದ್ದರು, ಗಾಯಾಳುಗಳನ್ನು ಲೆಂಗ್‌ಪುಯಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಿಜೋರಾಂ ಡಿಜಿಪಿ ತಿಳಿಸಿದ್ದಾರೆ.
Myanmar military plane crash: ಬರ್ಮಾ ಸೇನೆಯ ವಿಮಾನವೊಂದು ಲೆಂಗ್‌ಪುಯಿ ವಿಮಾನ ನಿಲ್ದಾಣದಲ್ಲಿ ಪತನಗೊಂಡು ಕನಿಷ್ಠ ಆರು ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ (ಜನವರಿ 22, 2024) ನಡೆದಿದೆ.
ಮ್ಯಾನ್ಮಾರ್ ಸೇನೆಯ ವಿಮಾನವು ಕ್ರ್ಯಾಶ್-ಲ್ಯಾಂಡ್ ಆದ ಸಂದರ್ಭದಲ್ಲಿ ವಿಮಾನದಲ್ಲಿ ಪೈಲಟ್ ಸೇರಿದಂತೆ 14 ಜನರಿದ್ದರು. ಈ ಪೈಕಿ ಆರು ಮಂದಿಗೆ ಗಾಯಗಳಾಗಿದ್ದು, ಎಂಟು ಮಂದಿ ಸುರಕ್ಷಿತವಾಗಿದ್ದಾರೆ ಎಂದು ಮಿಜೋರಾಂ ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಮಿಜೋರಾಂ ಡಿಜಿಪಿ, ಪೈಲಟ್‌ನೊಂದಿಗೆ 14 ಜನರು ವಿಮಾನದಲ್ಲಿದ್ದರು. ಗಾಯಾಳುಗಳನ್ನು ಲೆಂಗ್‌ಪುಯಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ- ಅಯೋಧ್ಯೆ ಬೀದಿಯಲ್ಲಿನ್ನು ಗುಂಡು ಹಾರುವುದಿಲ್ಲ ! ಇನ್ನೇನಿದ್ದರೂ ದೀಪೋತ್ಸವ - ರಾಮೋತ್ಸವ
ಲ್ಯಾಂಡಿಂಗ್ ವೇಳೆ ಪತನಗೊಂಡ ಸೇನಾ ವಿಮಾನ:
ಲಭ್ಯವಿರುವ ಮಾಹಿತಿಗಳ ಪ್ರಕಾರ, ಜನಾಂಗೀಯ ಬಂಡುಕೋರರ ಗುಂಪಿನೊಂದಿಗೆ ಗುಂಡಿನ ಚಕಮಕಿಯ ನಂತರ ಕಳೆದ ವಾರ ಮಿಜೋರಾಂಗೆ ಪಲಾಯನ ಮಾಡಿದ ನಂತರ ಭಾರತವು 184 ಮ್ಯಾನ್ಮಾರ್ ಸೈನಿಕರನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಸ್ಸಾಂ ರೈಫಲ್ಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಳೆದ ವಾರ ಒಟ್ಟು 276 ಮ್ಯಾನ್ಮಾರ್ ಸೈನಿಕರು ಮಿಜೋರಾಂ ಪ್ರವೇಶಿಸಿದ್ದು, ಅವರಲ್ಲಿ 184 ಮಂದಿಯನ್ನು ಸೋಮವಾರ ವಾಪಸ್ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇಂದು ಸಹ ಭಾರತಕ್ಕೆ ಪ್ರವೇಶಿಸಿದ್ದ ಮ್ಯಾನ್ಮಾರ್ ಸೇನಾ ಸಿಬ್ಬಂದಿಯನ್ನು ಕರೆದೊಯ್ಯಲು ವಿಮಾನ ಆಗಮಿಸಿದಾಗ ಮತ್ತು ಲೆಂಗ್‌ಪುಯಿ ವಿಮಾನ ನಿಲ್ದಾಣದಲ್ಲಿ ರನ್‌ವೇಯಲ್ಲಿ ವಿಮಾನ ಪಲ್ಟಿಯಾಗಿದ್ದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಗಮನಾರ್ಹವಾಗಿ, ಜನವರಿ 17 ರಂದು ಮಿಜೋರಾಂನ ಲಾಂಗ್ಟ್ಲೈ ಜಿಲ್ಲೆಯ ಭಾರತ-ಮ್ಯಾನ್ಮಾರ್-ಬಾಂಗ್ಲಾದೇಶ ಟ್ರೈಜಂಕ್ಷನ್‌ನಲ್ಲಿರುವ ಬಂದುಕ್ಬಂಗಾ ಗ್ರಾಮವನ್ನು ಮ್ಯಾನ್ಮಾರ್ ಸೈನಿಕರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಪ್ರವೇಶಿಸಿದರು. ಅವರ ಶಿಬಿರವನ್ನು 'ಅರಕನ್ ಆರ್ಮಿ' ಯೋಧರು ವಶಪಡಿಸಿಕೊಂಡ ನಂತರ ಅವರು ಮಿಜೋರಾಂಗೆ ಓಡಿಹೋದರು.
ಇದನ್ನೂ ಓದಿ- Shocking News: ದೆಹಲಿಯ ಒಂದೇ ಮನೆಯಲ್ಲಿ ನಾಲ್ವರ ಮೃತದೇಹಗಳು ಪತ್ತೆ!
ಮ್ಯಾನ್ಮಾರ್ ಸೈನಿಕರನ್ನು ಪರ್ವಾದಲ್ಲಿ ಸಮೀಪದ ಅಸ್ಸಾಂ ರೈಫಲ್ಸ್ ಶಿಬಿರಕ್ಕೆ ಕರೆದೊಯ್ಯಲಾಯಿತು ಮತ್ತು ನಂತರ ಅವರಲ್ಲಿ ಹೆಚ್ಚಿನವರನ್ನು ಲುಂಗ್ಲೈಗೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಅಂದಿನಿಂದ ಅವರು ಅಸ್ಸಾಂ ರೈಫಲ್ಸ್‌ನ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.